ಅಕ್ರಮ ಮದ್ಯ ದಂಧೆ ನಡೆಸುತ್ತಿದ್ದ ಇಬ್ಬರು ಪೊಲೀಸ್‌ ಪೇದೆಗಳ ಬಂಧನ, 500 ಮದ್ಯದ ಬಾಟಲಿಗಳು ಜಪ್ತಿ

ಚಂದೊಳಿ: ರಾಜ್ಯದಲ್ಲಿ ಅಕ್ರಮವಾಗಿ ಮದ್ಯದ ದಂಧೆಯನ್ನು ನಡೆಸುತ್ತಿದ್ದ ಇಬ್ಬರು ಪೊಲೀಸ್‌ ಕಾನ್‌ಸ್ಟೇಬಲ್‌ ಸೇರಿದಂತೆ ನಾಲ್ವರನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಕಾನ್‌ಸ್ಟೇಬಲ್‌ಗಳು ಅಕ್ರಮವಾಗಿ ಮದ್ಯವನ್ನು ಹರಿಯಾಣದಿಂದ ಬಿಹಾರಕ್ಕೆ ಸಾಗಿಸುವ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ.

ಹರಿಯಾಣದಿಂದ ಬಿಹಾರಕ್ಕೆ ಅಕ್ರಮವಾಗಿ ಮದ್ಯವನ್ನು ಸರಬರಾಜು ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ನಾವು ತನಿಖೆಯನ್ನು ಕೈಗೊಂಡೆವು. ಈ ವೇಳೆ 566 ಮದ್ಯದ ಬಾಟಲಿಗಳು ಮತ್ತು 5 ಲಕ್ಷ ರೂ. ನಗದನ್ನು ಸಾಗಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಲಾಗಿದೆ ಮತ್ತು ಇಬ್ಬರನ್ನು ಬಂಧಿಸಲಾಗಿದೆ. ಗ್ಯಾಂಗ್‌ ಲೀಡರ್‌ ಸೇರಿದಂತೆ ಇಬ್ಬರು ಪೊಲೀಸ್‌ ಪೇದೆಗಳ ನೆರವಿನೊಂದಿಗೆ ದಂಧೆಯನ್ನು ನಡೆಸುತ್ತಿರುವ ಕುರಿತು ಮಾಹಿತಿ ನೀಡಿದರು. ಈ ಆಧಾರದ ಮೇಲೆ ಇಬ್ಬರು ಪೇದೆಗಳನ್ನು ಬಂಧಿಸಲಾಗಿದೆ ಮತ್ತು ಈ ಪೇದೆಗಳು ತಮ್ಮ ದಂಧೆಯಲ್ಲಿ ಮತ್ತಷ್ಟು ಪೊಲೀಸ್‌ ಪೇದೆಗಳನ್ನು ಒಳಗೊಳ್ಳುವ ಉದ್ದೇಶವನ್ನು ಹೊಂದಿದ್ದರು ಎಂದು ತಿಳಿದುಬಂದಿದೆ. ಇದಲ್ಲದೆ ರಾಜ್ಯದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುವ ದಂಧೆಯಲ್ಲೂ ತೊಡಗಿಕೊಂಡಿದ್ದಾರೆ ಎಂದು ತಿಳಿದಿದೆ ಎಂದು ಸೂಪರಿಂಟೆಂಡೆಂಟ್‌ ಹೇಮಂತ್‌ ಕುಟಿಯಾಲ್‌ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *