ಕಿರುಕುಳದ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿನಿಯನ್ನೇ ಹೊರಹಾಕಿದ ಶಾಲೆ!

ಕುಶಿನಗರ: ಕಿರುಕುಳದ ವಿರುದ್ಧ ಪ್ರತಿಭಟನೆ ಮಾಡಿದ ಮಹಾತ್ಮ ಗಾಂಧಿ ಇಂಟರ್​ಕಾಲೇಜಿನ 11ನೇ ತರಗತಿ ವಿದ್ಯಾರ್ಥಿಯನ್ನು ಶಾಲೆಯವರೇ ಹೊರಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ತನಗಾದ ಕಿರುಕುಳವನ್ನು ಶಾಲೆಯ ಆಡಳಿತ ಮಂಡಳಿಗೆ ತಿಳಿಸಿದಾಗ ಶಾಲೆಯವರು, ‘ಘಟನೆ ಶಾಲಾ ಕ್ಯಾಂಪಸ್​ನಿಂದ ಹೊರಗೆ ನಡೆದಿರುವುದರಿಂದ ಇದಕ್ಕೂ ನಮಗೂ ಸಂಬಂಧವಿಲ್ಲ’ ಎಂದು ಸಂತ್ರಸ್ತೆಯ ದೂರು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ನಡೆಸಿದಾಗ ವಿದ್ಯಾರ್ಥಿಯನ್ನು ಶಾಲೆಯಿಂದಲೇ ಹೊರಹಾಕಿದ್ದಾರೆ.

ಇಂಥ ವಿದ್ಯಾರ್ಥಿನಿಯರು ನಮ್ಮ ಶಾಲೆಗೆ ಬೇಡ. ಇವರಿಂದ ನಮ್ಮ ಶಾಲೆಯ ಹೆಸರು ಹಾಳಾಗುತ್ತದೆ ಎಂದು ಶಾಲೆಯ ಪ್ರಾಂಶುಪಾಲರು ಪ್ರಾರ್ಥನಾ ಸ್ಥಳದಲ್ಲಿ ಹೇಳಿರುವುದು ಪ್ರಕರಣದ ಕುರಿತು ದಾಖಲಾಗಿರುವ ಎಫ್​ಐಆರ್​ನಲ್ಲಿ ಉಲ್ಲೇಖವಾಗಿದೆ.

ಆರೋಪಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಸಂತ್ರಸ್ತೆಯನ್ನೇ ಶಾಲೆಯಿಂದ ಹೊರ ಹಾಕಿದ್ದಾರೆ. ಜತೆಗೆ ಇಂಥವರು ನಮ್ಮ ಶಾಲೆಗೆ ಅವಶ್ಯವಿಲ್ಲ ಎಂದಿದ್ದಾರೆ. ಶಾಲೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಆರೋಪಿಯನ್ನು ಇನ್ನೂ ಬಂಧಿಸಿಲ್ಲ ಎಂದು ಮಹಿಳಾ ಕಾರ್ಯಕರ್ತೆ ವರಲಕ್ಷ್ಮಿ ಎಂಬವರು ತಿಳಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *