ಮಕ್ಕಳ ದಿನಾಚರಣೆಯಂದು ವಾಂತಿ ಮಾಡಿಕೊಂಡ ಬಾಲಕನನ್ನು ಥಳಿಸಿದ ಶಿಕ್ಷಕಿ ವಿರುದ್ಧ ದೂರು

ಮೊರದಾಬಾದ್: ತರಗತಿಯಲ್ಲಿ ಬಾಲಕ ವಾಂತಿ ಮಾಡಿಕೊಂಡಿದ್ದಕ್ಕೆ ಶಿಕ್ಷಕಿ ಕೋಲಿನಿಂದ ಚೆನ್ನಾಗಿ ಬಾರಿಸಿರುವ ಘಟನೆ ಉತ್ತರಪ್ರದೇಶದ ಮೊರದಾಬಾದ್‌ ಶಾಲೆಯಲ್ಲಿ ನಡೆದಿದೆ.

ಮಕ್ಕಳ ದಿನಾಚರಣೆ ದಿನದಂದೇ ಘಟನೆ ನಡೆದಿದ್ದು, ಶಿಕ್ಷಕಿ ವಿರುದ್ಧ 8 ವರ್ಷದ ಬಾಲಕನ ತಂದೆ ಥಾಕುರ್ದ್ವಾರ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಾಲಕ, ತನ್ನ ಶಿಕ್ಷಕಿ ರುಬಿನಾ ಎಂಬವರು ಕೋಲಿನಿಂದ ಶಾಲೆಯಲ್ಲಿಯೇ ಹಿಗ್ಗಾಮುಗ್ಗ ಒಡೆದಿರುವ ಕುರಿತು ತಿಳಿಸಿದ್ದಾನೆ.

ಎಸ್‌ಪಿ ಉದಯ್‌ ಶಂಕರ್‌ ಸಿಂಗ್‌ ಮಾತನಾಡಿ, ಬಾಲಕನ ತಂದೆ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)