ವಿಜಯವಾಣಿ ಸುದ್ದಿಜಾಲ ಧಾರವಾಡ
ರೋಟರಿ ಕ್ಲಬ್ ಆಫ್ ಧಾರವಾಡ ಸೆಂಟ್ರಲ್ ವತಿಯಿಂದ ಹಿಮಾಲಯನ್ ಸ್ಪೇಸ್ ಸೆಂಟರ್ ಸಹಯೋಗದೊಂದಿಗೆ `ಬ್ರಹ್ಮಾಂಡದ ಅದ್ಭುತಗಳನ್ನು ಅನಾವರಣಗೊಳಿಸುವ’ ಅಂತರಿಕ್ಷಾ ಸ್ಕೆÊ ವಾಚಿಂಗ್ ಕಾರ್ಯಕ್ರಮವನ್ನು ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
12ರಿಂದ 15 ವರ್ಷದೊಳಗಿನ ವಿವಿಧ ಶಾಲೆಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾತ್ರಿ ಆಕಾಶವನ್ನು ಅನ್ವೇಷಿಸುವುದು, ನಕ್ಷತ್ರಗಳು ಮತ್ತು ನಕ್ಷತ್ರಪುಂಜಗಳನ್ನು ಗುರುತಿಸುವುದು, ವೈಜ್ಞಾನಿಕ ಕೌಶಲಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಜ್ಯೋತಿಷ ಹಾಗೂ ಬಾಹ್ಯಾಕಾಶ ಜ್ಞಾನ ಹೆಚ್ಚಿಸುವುಲ್ಲಿ ಕಾರ್ಯಕ್ರಮ ನೆರವಾಯಿತು.
ರೋಟರಿ ಕ್ಲಬ್ ಆಫ್ ಧಾರವಾಡ ಸೆಂಟ್ರಲ್ ಅಧ್ಯಕ್ಷ ಕರಣ ದೊಡ್ಡವಾಡ ಕಾರ್ಯಕ್ರಮದ ಮಹತ್ವ ಮತ್ತು ಪ್ರಯೋಜನಗಳನ್ನು ವಿವರಿಸಿದರು. ಉಪಾಧ್ಯಕ್ಷ ಜಯಂತಿಲಾಲ ಜೈನ್, ರೋಟರಿ ಜಿಲ್ಲಾ ಅಧಿಕಾರಿ ಶರಯು ನಾಯಕ, ಮಹಾಂತೇಶ ಗುಂಜೆಟ್ಟಿ, ಆನಂದ ನಾಯಕ, ವೀರೇಶ ಕೆಲಗೇರಿ, ಗುಲ್ಶನಸಿಂಗ್ ನವಲೂರು, ರಮೇಶ ಬಣಕಾರ ಉಪಸ್ಥಿತರಿದ್ದರು.
ಕಾರ್ಯದರ್ಶಿ ವಾಮನ ಮಂತ್ರಿ ವಂದಿಸಿದರು.