ತತ್ವಪದಕಾರರಾದ ತತ್ವಪದಗಳ ಅನಾವರಣ

blank

ಕಡೂರು: ಶ್ರಮವನ್ನು ಮರೆಯಲು ಹಾಗೂ ಸಮಾಜದ ಓರೆ ಕೋರೆಗಳನ್ನು ತಿದ್ದುವ ಸಲುವಾಗಿ ಹುಟ್ಟಿಕೊಂಡ ತತ್ವಪದಗಳು ಭಜನೆಗಳ ರೂಪದಲ್ಲಿ ರೂಪಾಂತರಗೊಂಡಿವೆ ಎಂದು ಕಸಾಪ ಜಿಲ್ಲಾಧ್ಯಕ್ಷ್ಷ ಸೂರಿಶ್ರೀ ನಿವಾಸ್ ಹೇಳಿದರು.
ಜಿಲ್ಲಾ ಪ್ರಪ್ರಥಮ ತತ್ವಪದಕಾರರ ಸಮ್ಮೇಳನಾಧ್ಯಕ್ಷರಾದ ತತ್ವಪದಕಾರ್ತಿ ಅಜ್ಜಂಪುರ ತಾಲೂಕಿನ ಗಡೀಹಳ್ಳಿ ಹನುಮಕ್ಕ ಅವರನ್ನು ಶುಕ್ರವಾರ ಸಮ್ಮೇಳನಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷ್‌ತ್ ವಿನೂತನ ಪ್ರಯೋಗಕ್ಕೆ ಸಾಕ್ಷಿಯಾಗಿದೆ. ಈ ಸಮ್ಮೇಳನದಲ್ಲಿ ಜಿಲ್ಲೆಯಲ್ಲಿನ ಭಜನಾ ತಂಡಗಳನ್ನು ಆಹ್ವಾನಿಸಿ ತತ್ವಪದಕಾರರಾದ ಸಂತ ಶಿಶುನಾಳ ಶರ್ೀ, ಗುರು ಗೋವಿಂದ ಭಟ್ಟರ,ಪರಪ್ಪಜ್ಜಯ್ಯನವರ, ಶ್ರೀ ಕೈವಾರ ತಾತಯ್ಯನವರ, ಅಜ್ಜಂಪುರ ಗುರು ಗೋವಿಂದಾರ್ಯರ ತತ್ವಪದಗಳನ್ನು ಅನಾವರಣಗೊಳಿಸಲಾಗುವುದು ಎಂದು ತಿಳಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಜಿ.ಎಲ್.ಮಂಜುನಾಥ್ ಮಾತನಾಡಿ, ಜಿಲ್ಲಾ ತತ್ವಪದಕಾರರ ಸಮ್ಮೇಳನದಲ್ಲಿ ಭಜನಾ ತಂಡಗಳನ್ನು ಆಹ್ವಾನಿಸಿ ಸ್ಪರ್ಧೆ ಏರ್ಪಡಿಸಿ ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಲಾಗುವುದು. ಭಾಗವಹಿಸಿದ ಎಲ್ಲ ಭಜನಾ ತಂಡದ ಕಲಾವಿದರಿಗೆ ಪ್ರಶಸ್ತಿ ಪತ್ರ ನೀಡಲಾಗುವುದು ಎಂದರು.
ಜಾನಪದ ಕೋಗಿಲೆ ಮುಗುಳಿ ಲಕ್ಷ್ಮೀ ದೇವಮ್ಮ, ಗಡೀಹಳ್ಳಿ ಗ್ರಾಪಂ ಅಧ್ಯಕ್ಷ ತಿಮ್ಮಪ್ಪ, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರಾಜಪ್ಪ, ಪರಿಷತ್ ಗೌರವ ಸಲಹೆಗಾರ ಎ.ಸಿ.ಚಂದ್ರಪ್ಪ, ಚಂದ್ರಪ್ಪ, ಮಧುಮಾಲತಿ, ವಿಜಯಕುಮಾರಿ, ರವಿ ದಳವಾಯಿ, ಸಿಂಗಟಗೆರೆ ಸಿದ್ಧಪ್ಪ, ಹೆಚ್.ಕೆ.ಮಂಜುನಾಥ್, ಮೀನಾಕ್ಷಮ್ಮ , ಕಾಟಿಗನೆರೆ ಸತೀಶ್, ಅಜ್ಜಂಪುರ ಪಂಚಾಕ್ಷರಿ, ಜಿ.ಆರ್.ಮಂಜಪ್ಪ, ರೇವಣಸಿದ್ದಪ್ಪ, ಹಾಲಪ್ಪ , ರಂಜಿತಾ, ಭಾಗ್ಯಮ್ಮ, ವೇದಾವತಿ ಇದ್ದರು.

Share This Article

ಮನೆಯಲ್ಲೇ ಮಾಡಿ ಟೇಸ್ಟಿ ಚಿಲ್ಲಿ ಚೀಸ್​​ ನೂಡಲ್ಸ್​​; ಇಲ್ಲಿದೆ ಸಿಂಪಲ್​ ವಿಧಾನ | Recipe

ಫ್ಯಾಮಿಲಿ ಜತೆ ಹೋಟೆಲ್​ಗೆ ಹೋದರೆ ಫ್ರೈಡ್​ರೈಸ್​​, ನೂಡಲ್ಸ್​​, ಗೋಬಿ ಹೀಗೆ ಚೈನೀಸ್​​​ ಫುಡ್ ಮೊದಲ ಆಯ್ಕೆಯಾಗಿರುತ್ತದೆ.…

ಈ ಕಾಯಿಲೆಯಿಂದ ಬಳಲುತ್ತಿರುವವರು ತಪ್ಪಾಗಿಯೂ ಬೀಟ್ರೂಟ್​ ಸೇವಿಸಬೇಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಬೀಟ್ರೂಟ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾದ ತರಕಾರಿಯಾಗಿದೆ. ಇದು ಜೀವಸತ್ವಗಳು, ಖನಿಜಾಂಶಗಳು ಮತ್ತು ಉತ್ಕರ್ಷಣ…

ಗರ್ಭನಿರೋಧಕ ಮಾತ್ರೆಗಳಿಂದ ಅಪಾಯ ತಪ್ಪಿದ್ದಲ್ಲ; ಇಲ್ಲಿದೆ ಸಂಶೋಧನೆಯಲ್ಲಿ ಬಹಿರಂಗವಾದ ಅಸಲಿ ಸಂಗತಿ |Health Tips

ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡು ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟುವುದು ಅತ್ಯಂತ ಜನಪ್ರಿಯ ವಿಧಾನವಾಗಿದೆ. ಪ್ರಪಂಚದಾದ್ಯಂತ ಅಂದಾಜು 250…