ವಿಜಯಪುರ: ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿ ಬಸವನಬಾಗೇವಾಡಿಯ ಶಿವನಗೌಡ ಎಸ್.ಬಿರಾದಾರ, ರಾಜ್ಯ ಪ್ರತಿನಿಧಿಯಾಗಿ ಸಂಜುಗೌಡ ಬಿ.ಪಾಟೀಲ(ಕನಮಡಿ), ಉಪಾಧ್ಯಕ್ಷರಾಗಿ ಗುರುಪಾದಪ್ಪ ನೆಲ್ಲಗಿ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ ಪೂಜಾರಿ, ಖಜಾಂಚಿಯಾಗಿ ಮಹಾದೇವ ಹಿರೇಕುರುಬರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕಿ ರೂಪಾ.ಎಲ್ ಘೋಷಣೆ ಮಾಡಿದರು.
ಕೃಷಿಕ ಸಮಾಜದ ಮಾಜಿ ಜಿಲ್ಲಾಧ್ಯಕ್ಷೆ ದಾನಮ್ಮಗೌಡತಿ ಪಾಟೀಲ, ಶಿವಪ್ಪಗೌಡ ಪಾಟೀಲ, ರಾಮನಗೌಡ ಪಾಟೀಲ (ಹೆಬ್ಬಾಳ), ಶಂಕರ ರೇವಡಿ, ಎಸ್.ಎಂ.ಆನಂದಿ, ಶಂಕರಗೌಡ ಪಾಟೀಲ (ಇಂಡಿ), ಅಯ್ಯನಗೌಡ ಪಾಟೀಲ (ಸೋಮನಾಳ), ಬಸನಗೌಡ ಮಾಡಗಿ, ಎಸ್.ವಿ.ಪಾಟೀಲ, ವಿ.ಎಸ್.ಪಾಟೀಲ, ಸಂಗನಗೌಡ ಪಾಟೀಲ, ರಾಷ್ಟ್ರೀಯ ಬಸವಸೈನ್ಯದ ಅಧ್ಯಕ್ಷ ಶಂಕರಗೌಡ ಬಿರಾದಾರ, ನಿಂಗನಗೌಡ ಸೋಲಾಪುರ ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ಕೃಷಿಕ ಸಮಾಜದ ತಾಲೂಕು ಅಧ್ಯಕ್ಷರು ಹಾಗೂ ಜಿಲ್ಲಾ ಪ್ರತಿನಿಧಿಗಳು ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.