ಸೋಮವಾರಪೇಟೆ: ಮಹಿಳಾ ಸಹಕಾರ ಸಂಘದ ನೂತನ ಸಾಲಿನ ಆಡಳಿತ ಮಂಡಳಿಗೆ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು.
ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 12 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು. ಅಧ್ಯಕ್ಷೆಯಾಗಿ ವಿಜಯಲಕ್ಷ್ಮೀ ಸುರೇಶ್ ಉಪಾಧ್ಯಕ್ಷರಾಗಿ ಶೋಭಾ ಯಶವಂತ್, ನಿರ್ದೇಶಕರಾಗಿ ಸುಮಾ ಸುದೀಪ್, ಜಲಜಾ ಶೇಖರ್, ಗಾಯತ್ರಿ ನಾಗರಾಜ್, ಜ್ಯೋತಿ ಶುಭಾಕರ್, ಗೀತಾ ರಾಜು, ಮಹೇಶ್ವರಿ ಗಿರೀಶ್, ಪಂಕಜಾಕ್ಷಿ ಪ್ರಭಾಕರ್, ಉಮಾ ರುದ್ರಪ್ರಸಾದ್, ಜಯಲಕ್ಷ್ಮೀ ಸುಬ್ರಮಣಿ, ಶೈಲಾ ವಸಂತ್ ಆಯ್ಕೆಯಾದರು.