ಪಾಂಡವಪುರ: ತಾಲೂಕಿನ ಬಿಂಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬನ್ನಂಗಾಡಿ ಬಿ.ಡಿ.ದೊಡ್ಡೇಗೌಡ ಹಾಗೂ ಉಪಾಧ್ಯಕ್ಷರಾಗಿ ಮಲ್ಲಿಗೆರೆ ಪಂಕಜಾ ಅವಿರೋಧವಾಗಿ ಆಯ್ಕೆಯಾದರು.

11 ನಿರ್ದೇಶಕರ ಬಲ ಹೊಂದಿರುವ ಸಂಘದಲ್ಲಿ ಜೆಡಿಎಸ್ ಬೆಂಬಲಿತರು-9 ಹಾಗೂ ರೈತಸಂಘ-ಕಾಂಗ್ರೆಸ್ ಬೆಂಬಲಿತರು ಇಬ್ಬರು ನಿರ್ದೇಶಕರಿದ್ದಾರೆ. ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು, ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಬಿ.ಡಿ.ದೊಡ್ಡೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಪಂಕಜಾ ನಾಮಪತ್ರ ಸಲ್ಲಿಸಿದರು. ಇವರಿಬ್ಬರನ್ನು ಹೊರತುಪಡಿಸಿ ಉಳಿದ ಯಾವೊಬ್ಬ ನಿರ್ದೇಶಕರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಬಿ.ಡಿ.ದೊಡ್ಡೇಗೌಡ ಹಾಗೂ ಉಪಾಧ್ಯಕ್ಷರಾಗಿ ಪಂಕಜಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ವಸೀಂಪಾಷ ಪ್ರಕಟಿಸಿದರು. ಬೆಂಬಲಿಗರು ಸಿಹಿಹಂಚಿ ಸಂಭ್ರಮಿಸಿದರು.
ಅಧ್ಯಕ್ಷ ಬಿ.ಡಿ.ದೊಡ್ಡೇಗೌಡ ಮಾತನಾಡಿದರು. ನಿರ್ದೇಶಕರಾದ ಚಲುವೇಗೌಡ, ಚಿಕ್ಕತಮ್ಮಯ್ಯ, ಡಿ.ಸಿ.ಜಗದೀಶ್, ದೇವೇಗೌಡ, ರತ್ನಮ್ಮ, ರಾಮೇಗೌಡ, ಶಿವಲಿಂಗಯ್ಯ, ವಾಸು, ಮುಖಂಡರಾದ ಬಿ.ಪಿ.ಶ್ರೀನಿವಾಸ್, ಹುಚ್ಚೇಗೌಡ, ಕರೀಗೌಡ, ಬಿ.ಎಸ್.ಶ್ರೀನಿವಾಸ್, ಗಂಗಾಧರ್, ಚಂದ್ರೇಗೌಡ, ರವಿಕರ, ಎಂ.ಎಸ್.ಜಗದೀಶ್, ಪ್ರಕಾಶ್, ಶಿವಪ್ಪ, ಪುಟ್ಟರಾಜು, ಧರಣಿ, ಯೋಗೇಶ್, ರಾಜೇಶ್, ಚಂದ್ರು, ಕಾರ್ಯದರ್ಶಿ ರವಿಕುಮಾರ್ ಇತರರು ಇದ್ದರು.