ಅರಸೀಕೆರೆ ಗ್ರಾಮಾಂತರ: ತಾಲೂಕಿನ ಬಾಣಾವರ ಹೋಬಳಿಯ ಕುರುವಂಕ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಯಶೋದಾಬಾಯಿ ನಾಗರಾಜ್ ಹಾಗೂ ಲತಾ ಸಿದ್ದೇಶ್ ಮೂರ್ತಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷೆ-ಉಪಾಧ್ಯಕ್ಷೆಯನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಭಿನಂದಿಸಿ ಮಾತನಾಡಿ, ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕೆಲಸ ಮಾಡಬೇಕು. ಜತೆಗೆ ಸಿಬ್ಬಂದಿಯನ್ನು ವಿಶ್ವಾಸದಿಂದ ಕಾಣಬೇಕು. ಜನಸೇವೆ ಮಾಡಲು ಇದೊಂದು ಸುವರ್ಣ ಅವಕಾಶ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಭಾರತಿ ನವೀನ್, ಅಶೋಕ್, ನಾಗರಾಜು, ವೆಂಕಟೇಶ್, ಗಂಗಮ್ಮ, ಗಂಗಾಧರ್, ಶಿವಮೂರ್ತಿ, ಸರೋಜಾ ಭಾಯಿ, ಗಾಯತ್ರಿ, ರಮೇಶ್ ನಾಯ್ಕ, ತಾರಾ, ಗಂಗಾಭಾಯಿ ಇದ್ದರು.