ಚಿಕ್ಕಬಳ್ಳಾಪುರ: ಅಸ್ವಾಭಾವಿಕ ಲೈಂಗಿಕ ಕಿರುಕುಳ ಮತ್ತು ಅಸಭ್ಯ ವರ್ತನೆಯ ಜತೆಗೆ ಮಾರಣಾಂತಿಕ ಹಲ್ಲೆ ನಡೆಸುವ ಪತಿಯ ವಿರುದ್ಧ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಚಾಕುವಿನಿಂದ ಚುಚ್ಚಿದ ಹಿನ್ನೆಲೆಯಲ್ಲಿ ಗಾಯಗೊಂಡಿದ್ದ ಶಿಡ್ಲಘಟ್ಟ ನಗರದ ನಿವಾಸಿ 22 ವರ್ಷದ ಮಹಿಳೆಯು ಸಂಬಂಧಿಕರ ಎದುರು ಅಳಲು ತೋಡಿಕೊಂಡಿದ್ದು ಕುಟುಂಬಸ್ಥರ ಧೈರ್ಯದಿಂದ ಇದೀಗ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪತಿ ಎಸ್.ಮೊಸಿನ್ ಪಾಷಾ ಪೈಶಾಚಿಕ ವರ್ತನೆಯ ಬಗ್ಗೆ ಬಿಡಿಸಿ ಹೇಳುತ್ತ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.
*ದೂರಿನಲ್ಲಿ ಏನಿದೆ?
ಋತುಚಕ್ರದ ಸಮಯದಲ್ಲಿ ನನ್ನ ಪತಿ ತನ್ನೊಂದಿಗೆ ಅಸ್ವಾಭಾವಿಕವಾಗಿ ಲೈಂಗಿಕ ಕ್ರಿಯೆ ನಡೆಸಲು, ಅಶ್ಲೀಲ ಚಿತ್ರಗಳನ್ನು ನೋಡಲು ಒತ್ತಾಯಿಸಿದ್ದು ಬಟ್ಟೆ ಬದಲಾಯಿಸುವಾಗ ಖಾಸಗಿ ವೀಡಿಯೊ ಮತ್ತು ಫೋಟೋಗಳನ್ನು ಬೇಡವೆಂದರು ತೆಗೆಯುತ್ತಿದ್ದನು. ಪದೇ ಪದೇ ಬೆಂಗಳೂರಿನಲ್ಲಿರುವ ಆಫ್ರಿಕನರಿಗೆ ಮಾರಾಟ ಮಾಡುವುದಾಗಿ ಹೇಳಿ ಬೆದರಿಸಿದ್ದು 40,000 ರೂ ಕೊಡುವುದರಿಂದ ಒಪ್ಪುವಂತೆ ಪೀಡಿಸುತ್ತಿದ್ದ. ಜತೆಗೆ ಪಕ್ಕದ ಮನೆಯವರ ಹೆಣ್ಣು ಮಕ್ಕಳ ಫೋನ್ ನಂಬರ್ ಗಳನ್ನು ಹೇಗಾದರೂ ತೆಗೆದುಕೊಂಡು ಬಂದು ಕೊಡಲು ಒತ್ತಡ ಹೇರುತ್ತಿದ್ದ. ಇತ್ತೀಚೆಗೆ ಮದರಸದಿಂದ ಮಕ್ಕಳನ್ನು ಕರೆದುಕೊಂಡುಬರುವಷ್ಟರಲ್ಲಿ ಗಂಡನು ಫೋನಿನಲ್ಲಿ ಬೇರೊಬ್ಬ ಹೆಂಗಸಿನ ಜತೆಗೆ ಅಶ್ಲೀಲವಾದ ವಿಡಿಯೋ ಕಾಲ್ ಮಾಡುತ್ತಿದ್ದನ್ನು ನೋಡಿ ಪ್ರಶ್ನಿಸಿದಾಗ ಹಲ್ಲೆ ಮಾಡಿದ್ದು ಚಾಕುವಿನಿಂದ ಕುತ್ತಿಗೆಗೆ ಇರಿಯಲು ಪ್ರಯತ್ನಿಸಿದನು. ಇದಕ್ಕೆ ಅಡ್ಡಇಟ್ಟ ಹಿನ್ನೆಲೆಯಲ್ಲಿ ಕೈಗೆ ಗಾಯವಾಗಿದ್ದು ತೀವ್ರವಾದ ರಕ್ತಸ್ರಾವವಾದ ಬಳಿಕ ಶಿಡ್ಲಘಟ್ಟದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಫ್ಯಾನ್ ನಿಂದ ಆಗಿದ ಗಾಯವಾಗಿ ಎಂಬುದಾಗಿ ಬಲವಂತದಿಂದ ಹೇಳಿಸಲಾಯಿತು. ಇಲ್ಲಿದ್ದಲ್ಲಿ ಮನೆಯಲ್ಲಿನ ಮೂವರು ಹೆಣ್ಣು ಮಕ್ಕಳನ್ನು ಮೊದಲೇ ಸಾಯಿಸಿ ಬಿಡುವುದಾಗಿ ಹೇಳಿ ಬೆದರಿಸಿದರು ಎಂದು ಮಹಿಳೆ ಆರೋಪಿಸಿದ್ದಾಳೆ.