ಬಣಕಲ್: ಮಲೆನಾಡಿನಲ್ಲಿ ಅನೇಕ ಧಾರ್ಮಿಕ ಪವಾಡಗಳು ಎಲೆಮರೆಯಲ್ಲಿ ನಡೆಯುತ್ತಿರುತ್ತವೆ. ಇವುಗಳಲ್ಲಿ ಕೆಲವು ಮಾತ್ರ ಜನರ ಕಣ್ಣಿಗೆ ಗೋಚರಿಸಿದರೆ, ಉಳಿದವುಗಳು ಗೋಚರಿಸುವುದೇ ಇಲ್ಲ. ಅಂತಹ ಸರದಿಯಲ್ಲಿ ಮೂರು ಶತಮಾನಗಳಿಂದ ಮಂಗಳಾರತಿ ಸಮಯದಲ್ಲಿ ಮಾತ್ರ ಅಲುಗಾಡುವ ಮೂಲಕ ಉಣ್ಣಕ್ಕಿ ಹುತ್ತ ವಿಸ್ಮಯ ಸೃಷ್ಟಿಸುವ ಜತಗೆ ಅಚ್ಚರಿಯನ್ನು ಮೂಡಿಸುತ್ತದೆ.
ಇದೇ ನ.14ರಂದು ಬಾನಹಳ್ಳಿಯಲ್ಲಿ ಅಲುಗಾಡುವ ಹುತ್ತದ ಪವಾಡ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕಾತುರರಾಗಿದ್ದಾರೆ. ಮೂರು ಶತಮಾನದ ಹಿಂದೆ ಮಣ್ಣಿನಲ್ಲಿಯೇ ನಿರ್ಮಾಣವಾದ ಈ ಹುತ್ತ 10 ಅಡಿ ಎತ್ತರದಲ್ಲಿದೆ. ಮಳೆ,ಗಾಳಿಗೆ ಅಲುಗಾಡದೇ ಶತಮಾನ ಕಂಡರೂ ಶಿಥಿಲವಾಗದೇ ಜನರನ್ನು ತನ್ನೆಡೆಗೆ ಆಕರ್ಷಿಸುತ್ತಿದೆ. ಈ ಭಾಗದ ಜನರು, ಜಾನುವಾರುಗಳಿಗೆ ಕಾಯಿಲೆ ಬಂದರೆ ಹುತ್ತದ ಮಣ್ಣು ಮೈಗೆ ಹಚ್ಚಿದರೆ ಕಾಯಿಲೆ ಗುಣವಾಗುತ್ತದೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಬಾನಹಳ್ಳಿಯಲ್ಲಿ ನಡೆಯುವ ಉಣ್ಣಕ್ಕಿ ಹುತ್ತದ ಜಾತ್ರೆ ವೀಕ್ಷಿಸಲು ಬಗ್ಗಸಗೋಡು ಮಾತ್ರವಲ್ಲದೇ ಸ್ಥಳೀಯ ಗ್ರಾಮಗಳಿಂದ, ವಿವಿಧ ಜಿಲ್ಲೆಯಿಂದ ಜನಸಾಗರವೇ ಹರಿದು ಬರುತ್ತದೆ.
14 ರಂದು ಬೆಳಗ್ಗೆಯಿಂದಲೇ ಹುತ್ತಕ್ಕೆ ವಿಶೇಷ ಪೂಜೆ ನಡಯಲಿದೆ. ಸಂಜೆ 6ಗಂಟೆಯಿಂದ 10ರವರೆಗೆ ನಡೆಯುವ ವಿಸ್ಮಯ ಸೃಷ್ಟಿಸುವ ವಿಶೇಷ ಪೂಜೆಯಲ್ಲಿ ಪ್ರತಿ ವರ್ಷವೂ ಸಾವಿರಾರು ಭಕ್ತರು ಹಾಲು ಮತ್ತು ಅಕ್ಕಿ ಸಮರ್ಪಿಸುತ್ತಾರೆ. ಹೊಸತಾಗಿ ಮದುವೆಯಾದ ನವ ದಂಪತಿಗಳು ಕೂಡ ಇಲ್ಲಿ ಹರಕೆ ಸಲ್ಲಿಸುವುದು ವಾಡಿಕೆಯಲ್ಲಿದೆ. ದೀಪಾವಳಿ ಬಳಿಕ ಬರುವ ಹುಣ್ಣಿಮೆ ದಿನ ಉಣ್ಣಕ್ಕಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ
ಬಾನಹಳ್ಳಿಯಲ್ಲಿ 14ಕ್ಕೆ ಉಣ್ಣಕ್ಕಿ ಹುತ್ತದ ಜಾತ್ರೋತ್ಸವ
ಮೊಬೈಲ್ ಹಿಡಿದುಕೊಳ್ಳುವ ಸ್ಟೈಲ್ ನೋಡಿಯೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ ಹೇಳಬಹುದು! ಇಲ್ಲಿದೆ ಅಚ್ಚರಿ ಸಂಗತಿ… Personality Facts
Personality Facts : ಸೈಕಾಲಜಿ ಪ್ರಕಾರ ಒಬ್ಬರ ಕ್ರಿಯೆಗಳ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ನಿರ್ಣಯಿಸಬಹುದು.…
ಬಿಸಿ..ಬಿಸಿ ಚಹಾ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಇಂದೇ ಬಿಟ್ಟು ಬಿಡಿ.. ಹಲ್ಲುಗಳಿಗೆ ಎಷ್ಟು ಹಾನಿಕಾರಕ ಗೊತ್ತಾ? Health Tips
Health Tips: ಬಿಸಿ..ಬಿಸಿ ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ...ಊಟ ಇಲ್ಲದಿದ್ದರೂ, ತಡವಾದರೂ ಒಂದು…
honeymoon destinations : 2024 ರಲ್ಲಿ ನವವಿವಾಹಿತರನ್ನು ಆಕರ್ಷಿಸಿದ ನೆಚ್ಚಿನ ಹನಿಮೂನ್ ತಾಣಗಳು ಇವು..!
honeymoon destinations : ವ್ಯಕ್ತಿಯ ಆದ್ಯತೆಗಳು ಮತ್ತು ಆಯ್ಕೆಗಳು ವರ್ಷಗಳಲ್ಲಿ ಬದಲಾಗುತ್ತವೆ. ಈಗ ನಾವು 2024…