ಚಲಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲೇ ವ್ಯಕ್ತಿಯ ಭೀಕರ ಹತ್ಯೆ

ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲೇ ಸಾರ್ವಜನಿಕರ ಎದುರು ವ್ಯಕ್ತಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಎಲೆಕ್ಟ್ರಾನಿಕ್​ ಸಿಟಿ ಬಳಿಕ ಕೋನಪ್ಪನ ಅಗ್ರಹಾರದಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ. ಏಕಾಏಕಿ ಬಸ್​ನೊಳಗೆ ನುಗ್ಗಿದ ಮೂವರು ಅಪರಿಚಿತರು ಆಂಧ್ರ ಪ್ರದೇಶ ಮೂಲದ ಸುಮಾರು 32 ವರ್ಷದ ವ್ಯಕ್ತಿಯ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಇವರು ಮೃತ ವ್ಯಕ್ತಿಯನ್ನು ಅತ್ತಿಬೆಲೆ ಕಡೆಯಿಂದ ಹಿಂಬಾಲಿಸಿಕೊಂಡು ಬಂದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಹತ್ಯೆ ಮಾಡಿದವರಲ್ಲಿ ಇಬ್ಬರು ಸುಮಾರು 30ರ ಆಸುಪಾಸಿನವರು, ಮತ್ತೋರ್ವ ವ್ಯಕ್ತಿ ಸುಮಾರು 60 ವರ್ಷ ಪ್ರಾಯದವನಾಗಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಎಲೆಕ್ಟ್ರಾನಿಕ್​ ಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *