ಅಪರಿಚಿತ ವ್ಯಕ್ತಿಯ ಶವ ಪತ್ತೆ

ಘಟಪ್ರಭಾ: ಎರಡು ದಿನದ ಹಿಂದೆ ಘಟಪ್ರಭಾದ ರೈಲ್ವೆ ನಿಲ್ದಾಣದ ಹತ್ತಿರ ಸುಮಾರು 55 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಆತ ಅನಾರೋಗ್ಯದಿಂದ ಅಥವಾ ಆಹಾರವಿಲ್ಲದೆ ಸಾವನ್ನಪ್ಪಿರಬಹುವುದೆಂದು ಪೋಲಿಸರು ಶಂಕಿಸಿದ್ದಾರೆ. ಆತ ಹಸಿರು ಬಣ್ಣದ ಟೀ ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದಾರೆ. 5.4 ಅಡಿ ಎತ್ತರ ಇದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. ಆತನ ಬಗ್ಗೆ ಮಾಹಿತಿ ಇದ್ದವರು ಘಟಪ್ರಭಾ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಿದ್ದಾರೆ.