ಕೇಂದ್ರ ಸಚಿವ ಅನಂತ್​ ಕುಮಾರ್​ ಹೆಗಡೆಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ ಅಪರಿಚಿತ ವ್ಯಕ್ತಿ

ಶಿರಸಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆ ರಾತ್ರಿ 12.30ರ ಸಮಯದಲ್ಲಿ ನಡೆದಿದೆ.

ರಾತ್ರಿ 12.30ರ ಸಮಯದಲ್ಲಿ ಇಂಟರ್ ನೆಟ್ ಮೂಲಕ ಕರೆ ಮಾಡಿದ್ದು ಅನಂತಕುಮಾರ್ ಹೆಗಡೆ ಪತ್ನಿ ಶ್ರೀರೂಪ ಅವರು ಕರೆ ಸ್ವೀಕರಿಸಿದ್ದಾರೆ. ಈ ವೇಳೆ ಆತ ಒಂದು ಸಾರಿ ತಪ್ಪಿಸಿಕೊಂಡಿದ್ದೀರ ಮತ್ತೆ ಮಿಸ್ ಆಗುವುದಿಲ್ಲ. ನಿಮಗೆ ಭದ್ರತೆ ನೀಡಿದ ಸೆಕ್ಯುರಿಟಿಯವರನ್ನೂ ಬಿಡುವುದಿಲ್ಲ. ಯಾವ ಪೊಲೀಸರಿಗಾದರೂ ಹೇಳಿಕೊಳ್ಳಿ ನಮಗೆ ಏನೂ ಮಾಡಲಾಗುವುದಿಲ್ಲ ಎಂದು ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ.

2233 ನಂಬರ್ ಮೂಲಕ ಕರೆ ಮಾಡಿ ಕೊಲೆ ಬೆದರಿಕೆ ಹಾಕಲಾಗಿದ್ದು, ಈ ಸಂಬಂಧ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಅನಂತಕುಮಾರ ಹೆಗಡೆ ಅವರ ಆಪ್ತ ಕಾರ್ಯದರ್ಶಿ ಸುರೇಶ್ ದೂರು ದಾಖಲಿಸಿದ್ದಾರೆ.

ಈ ಹಿಂದೆ ಫೆಬ್ರವರಿ ೧೦ರಂದು ಕೂಡ ಅಪರಿಚಿತ ವ್ಯಕ್ತಿ ಫೋನ್​ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದನು.(ದಿಗ್ವಿಜಯ ನ್ಯೂಸ್​)