ಮಂಡ್ಯ: ಹನಕೆರೆ-ಮಂಡ್ಯ ಮಾರ್ಗ ಮಧ್ಯೆ ಬುಧವಾರ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ.
ಸುಮಾರು 45 ವರ್ಷದವನಾಗಿದ್ದು, 5.6 ಅಡಿ ಎತ್ತರವಿದ್ದಾನೆ. ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣವಿದೆ. ಮೃತನ ಮೈಮೇಲೆ ಕಪ್ಪು ಬಣ್ಣದ ನೈಟ್ ಪ್ಯಾಂಟ್, ತುಂಬು ತೋಳಿನ ನೀಲಿ ಬಣ್ಣದ ಅಂಗಿ ಇದೆ. ಶವವನ್ನು ಮಂಡ್ಯ ಜಿಲ್ಲಾಸ್ಪತ್ರೆ ಶವಾಗಾರದಲ್ಲಿಡಲಾಗಿದೆ. ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.