More

    VIDEO| ವಿವಾದ ಸೃಷ್ಟಿಸಿದ ಬಿಬಿಎಲ್​ ಕ್ಯಾಚ್​: ಪೇಚಿಗೆ ಸಿಲುಕಿದ ಅಂಪೈರ್​, ಥರ್ಡ್​ ಅಂಪೈರ್​ ನಿರ್ಣಯಕ್ಕೂ ಹಲವರ ಬೇಸರ!

    ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್​ ಬ್ಯಾಷ್​ ಲೀಗ್​(ಬಿಬಿಎಲ್​)ನಲ್ಲಿ ಕ್ಷೇತ್ರರಕ್ಷಕ ಹಿಡಿದ ಕ್ಯಾಚ್ ವಿಡಿಯೋವೊಂದು ವೈರಲ್​ ಆಗಿದ್ದು, ಇದೇ ಕ್ಯಾಚ್​ ಅಂಪೈರ್​ರನ್ನು ಪೇಚಿಗೆ ಸಿಲುಕಿಸಿದ ಪ್ರಸಂಗ ಜರುಗಿದೆ.

    ಗುರುವಾರ ಬ್ರಿಸ್ಬೇನ್​ ಹೀಟ್​ ಮತ್ತು ಹೊಬರ್ಟ್​ ಹರಿಕೇನ್ಸ್​ ತಂಡದ ನಡುವೆ ಗಾಬಾ ಸ್ಟೇಡಿಯಂನಲ್ಲಿ ನಡೆದ ಲೀಗ್​ ಪಂದ್ಯ ವೇಳೆ ಈ ವಿನೂತನ ಘಟನೆ ನಡೆದಿದೆ. ಹೀಟ್​ ತಂಡದ ಮ್ಯಾಥೀವ್​ ವೇಡ್​ ಕೇವಲ 45 ಎಸೆತಗಳಲ್ಲಿ 61 ರನ್​ ಗಳಿಸಿ ಕ್ರೀಸ್​ನಲ್ಲಿದ್ದರು. 15ನೇ ಓವರ್​ನಲ್ಲಿ ಹರಿಕೇನ್ಸ್​ ಪರ ಬೆನ್​ ಕಟಿಂಗ್​ ಎಸೆದ ಬೌಲ್ ಅನ್ನು ವೇಡ್​ ಬಲವಾಗಿ ಹೊಡೆದರು.

    ಚೆಂಡು ಗಾಳಿಯಲ್ಲಿ ಹಾರಿ ಬೌಂಡರಿಯತ್ತ ಸಾಗಿತು. ಈ ವೇಳೆ ಹೊಬರ್ಟ್​ ತಂಡದ ರೆನ್​ಶಾ ಲಾಂಗ್​ ಆನ್​ಗೆ ಓಡಿ ಹೋಗಿ ತನ್ನ ಎರಡು ಕೈಗಳನ್ನು ಮೇಲೆ ಚಾಚಿ ಹಿಂದಕ್ಕೆ ಬಾಗಿ ಅದ್ಭುತವಾಗಿ ಕ್ಯಾಚ್​ ಹಿಡಿದರು. ಆದರೆ, ಬೌಂಡರಿ ಗೆರೆ ಪಕ್ಕದಲ್ಲೇ ಇದ್ದುದ್ದರಿಂದ ನಿಯಂತ್ರಿಸಲಾಗದೇ ಗೆರೆಯಿಂದಾಚೆಗೆ ಜಿಗಿದರು. ಅಷ್ಟರಲ್ಲಾಗಲೇ ಚೆಂಡನ್ನು ಮೆಲಕ್ಕೆ ಎಸೆದಿದ್ದರು. ಮತ್ತೆ ಚೆಂಡು ಗೆರೆಯಿಂದಾಚೆಗೆ ಬೀಳುತ್ತಿರುವುದನ್ನು ಅರಿತ ರೆನ್​ಶಾ, ಮೇಲಕ್ಕೆ ಜಿಗಿದು ಚೆಂಡನ್ನು ಮೈದಾನದೊಳಕ್ಕೆ ತಟ್ಟಿದರು. ಈ ವೇಳೆ ಬೌಂಡರಿ ಗೆರೆ ಬಂದಿದ್ದ ಟಾಮ್​ ಬಂಟನ್​ ಕ್ಯಾಚ್​ ಹಿಡಿದರು.

    ಕ್ಯಾಚ್​ ಏನೋ ಹಿಡಿದರು ಆದರೆ ಇದು ಔಟಾ? ಇಲ್ಲವಾ? ಎಂಬುದನ್ನು ನಿರ್ಣಯಿಸಲು ಅಂಪೈರ್​ ಪರದಾಡಿದರು. ಏಕೆಂದರೆ ಇದು ವಿನೂತನ ಪ್ರಕರಣವಾಗಿತ್ತು. ಬಳಿಕ ಅಂಪೈರ್​ ಹೆಚ್ಚಿನ ಗೋಜಿಗೆ ಹೋಗದೆ ಥರ್ಡ್​ ಅಂಪೈರ್​ಗೆ ಮನವಿ ಸಲ್ಲಿಸಿದರು. ಬಳಿಕ ಕ್ಯಾಚನ್ನು ವಿಶ್ಲೇಷಿಸಿದ ಥರ್ಡ್​ ಅಂಪೈರ್​ ಔಟ್​ ಎಂದು ನಿರ್ಣಯಿಸಿದರು. ಇದರಿಂದ ವೇಡ್​ ಪೆವಲಿಯನ್​ಗೆ ಮರಳುವಂತಾಯಿತು.

    ಇಷ್ಟೇ ಅಲ್ಲದೆ, ಈ ಕ್ಯಾಚ್​ ಬಗ್ಗೆ ಈಗಲೂ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿದೆ. ನ್ಯೂಜಿಲೆಂಡ್​ ತಂಡದ ಜಿಮ್ಮಿ ನಿಶಾಮ್​ ನಿರ್ಣಯ ತೃಪ್ತಿ ತಂದಿಲ್ಲ ಎಂದಿದ್ದಾರೆ. ಆದರೆ, ಕ್ರಿಕೆಟ್​ ನಿಯಮದ ಪ್ರಕಾರ ನಿರ್ಣಯ ನೀಡಿರುವುದು ಸರಿ ಎಂದು ಮೆಲ್ಬೋರ್ನ್​ ಕ್ರಿಕೆಟ್​ ಕ್ಲಬ್​ನ ಲಾರ್ಡ್ಸ್​ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದೆ. 19.5ರ ಕಾನೂನಿನ ಅಡಿಯಲ್ಲಿ ಕ್ಯಾಚನ್ನು ಕಾನೂನು ಬದ್ಧವೆಂದು ಪರಿಗಣಿಸಲಾಗಿದೆ. ಬೌಂಡರಿ ಗೆರೆಯ ಒಳಗಡೆಯೇ ಮೊದಲನೇ ಬಾರಿಗೆ ಚೆಂಡನ್ನು ಕ್ಷೇತ್ರರಕ್ಷಕ ಹಿಡಿದಿದ್ದಾನೆ. ಬಳಿಕ ಎರಡನೇ ಪ್ರಯತ್ನಕ್ಕಾಗಿ ಬೌಂಡರಿ ಗೆರೆಯಿಂದಾಚೆ ಜಿಗಿದಿದ್ದಾನೆ ಎಂದು ಸ್ಪಷ್ಟನೆ ನೀಡಿದೆ.

    ಅಂದಹಾಗೆ ಪಂದ್ಯದ ವಿಚಾರಕ್ಕೆ ಬರುವುದಾದರೆ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆರಂಭಿಸಿದ ಹೊಬರ್ಟ್​ ಹರಿಕೇನ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ ಪ ವಿಕೆಟ್​ ನಷ್ಟಕ್ಕೆ 126 ರನ್​ ಕಲೆಹಾಕಿತು. ಗುರಿ ಬೆನ್ನತ್ತಿದ ಬ್ರಿಸ್ಬೇನ್​ ಹೀಟ್​ 10 ಬಾಲ್​ ಬಾಕಿ ಇರುವಾಗಲೇ ಪಂದ್ಯವನ್ನು ಜಯಿಸಿತು. (ಏಜೆನ್ಸೀಸ್​)

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts