ವಿಶ್ವ ತಾಯಂದಿರ ದಿನಾಚರಣೆಗೆ ಇಬ್ಬರು ಅಮ್ಮಂದಿರ ಫೋಟೊ ಶೇರ್​ ಮಾಡಿದ ಸಚಿವೆ ಸ್ಮೃತಿ ಇರಾನಿ ಅವರ ಬಗ್ಗೆ ಬರೆದಿದ್ದು ಹೀಗೆ…

ನವದೆಹಲಿ: ಇಂದು ವಿಶ್ವ ತಾಯಂದಿರ ದಿನಾಚರಣೆ. ಬಹುತೇಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಮ್ಮಂದಿರ ಫೋಟೋ ಹಾಕಿ ವಿಶ್​ ಮಾಡುತ್ತಿದ್ದಾರೆ. ಹಾಗೇ ಸಚಿವೆ ಸ್ಮೃತಿ ಇರಾನಿ ಕೂಡ ಇನ್​ಸ್ಟಾಗ್ರಾಂನಲ್ಲಿ ತಮ್ಮ ತಾಯಿ ಮತ್ತು ಅತ್ತೆಯ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.

ಮೊದಲ ಫೋಟೋದಲ್ಲಿ ಸಚಿವೆ ಸ್ಮೃತಿ ಇರಾನಿಯವರ ತಾಯಿ ಹಾಸಿಗೆ ಮೇಲೆ ಕುಳಿತು ಒಂದಷ್ಟು ಪೇಪರ್​ಗಳನ್ನು ನೋಡುತ್ತಿದ್ದಾರೆ. ಅವರು ಬೆನ್ನಹಿಂದೆ ಇರುವ ಗೋಡೆಯ ಮೇಲೆ ಬಿಳಿ ಪೇಪರ್​ ಶೀಟ್​ವೊಂದನ್ನು ಅಂಟಿಸಿಡಲಾಗಿದ್ದು ಅದರ ಮೇಲೆ ಒಂದಷ್ಟು ತುರ್ತು ಸಂಪರ್ಕದ ಫೋನ್​ ನಂಬರ್​ಗಳನ್ನು ಇಡಲಾಗಿದೆ. ಏನಾದರೂ ವೈದ್ಯಕೀಯ ಎಮರ್ಜನ್ಸಿ ಉಂಟಾದರೆ ಆ ನಂಬರ್​ಗಳನ್ನು ಸಂಪರ್ಕಿಸುವಂತೆ ಸ್ಮೃತಿ ತಾಯಿ ಬರೆದಿಟ್ಟಿದ್ದಾರೆ. ಆದರೆ, ಆ ಪಟ್ಟಿಯಲ್ಲಿ ಸ್ಮೃತಿ ಇರಾನಿಯವರದ್ದಾಗಲೀ, ಉಳಿದ ಮಕ್ಕಳದ್ದಾಗಲೀ ಫೋನ್​ ನಂಬರ್​ಗಳಿಲ್ಲ.

ಈ ಬಗ್ಗೆ ನಾನು ನನ್ನ ತಾಯಿಯನ್ನು ಕೇಳಿದ್ದೆ. ಯಾವ ಕಾರಣಕ್ಕೆ ನಮ್ಮ ಹೆಸರನ್ನು ಬರೆದಿಟ್ಟಿಲ್ಲವೆಂದು. ಅದಕ್ಕೆ ನನ್ನ ತಾಯಿಯ ಉತ್ತರ ಹೀಗಿತ್ತು. ಅಮ್ಮ ಎಂದರೆ ಮಕ್ಕಳು ಕಷ್ಟದಲ್ಲಿದ್ದಾಗ ಬರುವವಳು. ನಿನ್ನ ತುರ್ತು ಸಂದರ್ಭದ ಫೋನ್​ ನಂಬರ್​ಗಳ ಪಟ್ಟಿಯಲ್ಲಿ ನನ್ನ ಹೆಸರು ಸೇರಿಸಿಕೋ ಎಂದು ಹೇಳಿದ್ದರು ಎಂದು ಸ್ಮೃತಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಪ್ರತಿ ತಾಯಿಗೂ ವಿಶೇಷ ಶಕ್ತಿಯಿದೆ. ನನ್ನ ತಾಯಿ ನನಗೆ ಹಾರಲು ರೆಕ್ಕೆ ಕೊಟ್ಟಿದ್ದಾರೆ. ಆತ್ಮವಿಶ್ವಾಸ ಕಟ್ಟಿಕೊಟ್ಟಿದ್ದಾರೆ. ಏನೇ ತೊಂದರೆಯಿರಲಿ ಅವರು ನನ್ನ ಜತೆಗೆ ಇರುತ್ತಾರೆ. ನನ್ನ ಕಾಲು ಮೇಲೆ ನಾನು ನಿಲ್ಲಲು ಅಮ್ಮ ನೀಡಿದ ಸಹಕಾರ ಅವಿಸ್ಮರಣೀಯ. ಅವರು ಈಗ ಸ್ವತಂತ್ರವಾಗಿ ಜೀವಿಸುತ್ತಿದ್ದಾರೆ. ಎಲ್ಲ ಅನುಕೂಲಗಳಿದ್ದರೂ ತುಂಬ ಸರಳವಾಗಿ ಬದುಕುವ ದಾರಿ ಕಂಡುಕೊಂಡಿದ್ದಾರೆ ಎಂದು ಬರೆದಿದ್ದಾರೆ.

ಹಾಗೇ ತಮ್ಮ ಅತ್ತೆಯ ಫೋಟೋ, ಪತಿಯ ಕುಟುಂಬದವರ ಫೋಟೋವನ್ನು ಕೂಡ ಪೋಸ್ಟ್​ ಮಾಡಿದ್ದಾರೆ. ನನ್ನ ಅತ್ತೆಯನ್ನು ನನ್ನ ಪತಿಯ ಅಕ್ಕ ಎಂದು ಹಲವು ಜನ ತಪ್ಪಾಗಿ ಭಾವಿಸುತ್ತಾರೆ. ಅವರಿಬ್ಬರ ನಡುವೆ 17 ವರ್ಷಗಳ ಅಂತರವಿದೆ.

ನನ್ನ ಅತ್ತೆ ಅವರ ಮಗನ ಒಳ್ಳೆಯ ಸ್ನೇಹಿತೆ. ಅವನ ತಪ್ಪುಗಳನ್ನು ತಿದ್ದುತ್ತಾರೆ. ಅವನ ಕಷ್ಟದಲ್ಲಿ ಜತೆಯಾಗುತ್ತಾರೆ. ನನ್ನ ಅತ್ತೆಯಾಗಿದ್ದರೂ ಅವರನ್ನು ಅಮ್ಮಾ ಎಂದೇ ಕರೆಯುತ್ತೇನೆ ಎಂದು ಫೋಟೋದ ಕೆಳಗೆ ಬರೆದಿದ್ದಾರೆ.

ಈ ಪೋಸ್ಟ್​ಗೆ ಸ್ಮೃತಿ ಇರಾನಿ ಪತಿ ಪ್ರತಿಕ್ರಿಯೆ ನೀಡಿದ್ದು, ನನ್ನ ಅಮ್ಮ ನಿನ್ನಂಥ ಸೊಸೆಯನ್ನು ಪಡೆದಿದ್ದಕ್ಕೆ ಹೆಮ್ಮೆ ಪಡುತ್ತಿದ್ದಾರೆ ಎಂದು ಹೇಳಿದ್ದಾರೆ.

View this post on Instagram

Fiercely independent, my Ma chose to live life on her terms even when it was most inconvenient. Notice the white board behind her with numbers of doctors. Her strict instructions to all , if something happens to her these are the first people to call. I asked her why none of her kids feature on the board. She said Moms are the ones you fall back on in times of trouble and asked me to put her number on my emergency list instead. Every Mom has a special power. Mine gave me wings to fly and the confidence that if anything ever goes wrong there is always Mom to help nurture me and put me back on my feet. #happymothersday ❤️❤️❤️❤️ to my Ma and all those great Mums out there😘

A post shared by Smriti Irani (@smritiiraniofficial) on