Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಪಾಕ್​ ಗಡಿಯಲ್ಲಿ ಸ್ಮಾರ್ಟ್​ ಬೇಲಿ ಉದ್ಘಾಟಿಸಿದ ರಾಜನಾಥ್​ ಸಿಂಗ್​

Monday, 17.09.2018, 2:33 PM       No Comments

ಜಮ್ಮು: ಪಾಕಿಸ್ತಾನಿ ಉಗ್ರರು ಹಾಗೂ ಯೋಧರಿಗೆ ಗಡಿಯಲ್ಲೇ ತಡೆಯೊಡ್ಡುವ ಉದ್ದೇಶದಿಂದ ನಿರ್ವಿುಸಲಾಗಿರುವ ‘ಸ್ಮಾರ್ಟ್ ಬೇಲಿ’ಯನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದರು.

ಜಮ್ಮು ಸೆಕ್ಟರ್​ನ ಅಂತಾರಾಷ್ಟ್ರೀಯ ಗಡಿಯಲ್ಲಿ ಸಮಗ್ರ ಸಂಯೋಜಿತ ಗಡಿ ನಿರ್ವಹಣಾ ಯೋಜನೆ (ಸಿಐಬಿಎಂಎಸ್) ಎರಡು ಪ್ರಾಯೋಗಿಕ ಯೋಜನೆಯಡಿ ತಲಾ 5.5 ಕಿ.ಮೀ. ಉದ್ದದ ‘ಸ್ಮಾರ್ಟ್ ಬೇಲಿ’ ನಿರ್ವಿುಸಲಾಗಿದೆ. ಸೋಮವಾರ ಸ್ಮಾರ್ಟ್​ ಬೇಲಿಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಸಚಿವರು ಸ್ಮಾರ್ಟ್​ ಬೇಲಿಯನ್ನು ಅಳವಡಿಸಿದ ನಂತರ ಪಾಕಿಸ್ತಾನ ಗಡಿ ಮತ್ತಷ್ಟು ಸದೃಢವಾಗಲಿದೆ ಎಂಬ ನಂಬಿಕೆ ಇದೆ. ಪಾಕಿಸ್ತಾನ ಗಡಿಯುದ್ದಕ್ಕೂ ಸುಮಾರು 2026 ಕಿ.ಮೀ. ಉದ್ದದ ಸ್ಮಾರ್ಟ್​ ಬೇಲಿ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಗಡಿ ಭದ್ರತೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ. ಗಡಿಯಲ್ಲಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಗಮನ ನೀಡಲಾಗಿದೆ. ಗಡಿ ಭಾಗದಲ್ಲಿ ಸುಮಾರು 600 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲಾಗಿದೆ. ನೂರಾರು ಬಾರ್ಡರ್​ ಔಟ್​ ಪೋಸ್ಟ್​ಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಏನಿದು ಸ್ಮಾರ್ಟ್​ ಬೇಲಿ?

ಸಮಗ್ರ ಸಂಯೋಜಿತ ಥರ್ಮಲ್ ಇಮೇಜಿಂಗ್, ಇನ್ಪ್ರಾ-ರೆಡ್ ಮತ್ತು ಲೇಸರ್ ಬೀಮ್​ಗಳ ಅಗೋಚರ ತಡೆಬೇಲಿ ಇದಾಗಿದ್ದು, ಈ ಬೇಲಿಯನ್ನು ಯಾವುದೇ ರೀತಿಯಲ್ಲಿ (ಜಲ, ವಾಯು, ಸುರಂಗ ಮಾರ್ಗ) ಉಲ್ಲಂಘಿಸಲು ಪ್ರಯತ್ನಿಸಿದ ಕೂಡಲೇ ಎಚ್ಚರಿಕೆ ಗಂಟೆ ಮೊಳಗುತ್ತದೆ. ಯೋಧರನ್ನು ನಿಯೋಜಿಸಲಾಗದಂತಹ ಕಠಿಣ ಭೌಗೋಳಿಕ ಸನ್ನಿವೇಶ, ಗಿರಿ, ಕಂದರ, ಕೂಡಿದ ಗಡಿ ಪ್ರದೇಶದಲ್ಲಿ ಈ ಬೇಲಿಯನ್ನು ಅಳವಡಿಸಬಹುದಾಗಿದೆ.

Leave a Reply

Your email address will not be published. Required fields are marked *

Back To Top