More

    ರಾಹುಲ್ ಬಾಬಾ ಕಾನೂನು ಓದಿದ್ದೀರಾ? ಇಲ್ಲಾಂದ್ರೆ ಇಟಲಿ ಭಾಷೆಯಲ್ಲಿ ಅನುವಾದ ಮಾಡಿ ಕಳುಹಿಸಬಲ್ಲೆ, ಅದನ್ನು ಓದಿ ಎಂದು ಛೇಡಿಸಿದ ಅಮಿತ್ ಷಾ

    ಜೋಧಪುರ: ರಾಜಸ್ಥಾನದ ಜೋಧಪುರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಕಾಯ್ದೆ ಬಗ್ಗೆ ವಿರೋಧ ವ್ಯಕ್ತಪಡಿಸಿರುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಛೇಡಿಸಿದರು.

    ಅವರು ಹೇಳಿದ್ದಿಷ್ಟು- ರಾಹುಲ್ ಬಾಬಾ ಕಾನೂನು ಪಡಾ ಹೇ, ತೋ ಕಹೀಂ ಪರ್​ ಭಿ ಚರ್ಚಾ ಕೇ ಲಿಯೇ ಆಜಾವೋ. ನಹೀ ಪಡಾ ಹೇ ತೋ ಮೇ ಇಟಾಲಿಯನ್ ಮೇ ಭಿ ಇಸ್ಕಾ ಅನುವಾದ್ ಕರ್ಕೆ ಆಪ್ಕೋ ಬೇಜ್​ ದೇತಾ ಹೂಂ, ಉಸ್ಕೋ ಪಡ್​ ಲೀಜಿಯೇ.
    (ರಾಹುಲ್ ಬಾಬಾ ನೀವು ಕಾನೂನು ಓದಿದ್ದೀರಾ, ಓದಿದ್ರೆ ಎಲ್ಲಾದರೂ ಸರಿ ಚರ್ಚೆಗೆ ಬನ್ನಿ. ಓದಿಲ್ಲಾಂದ್ರೂ ಹೇಳಿ, ನಾನು ಅದನ್ನು ಇಟಾಲಿಯನ್ ಭಾಷೆಗೆ ಅನುವಾದಿಸಿ ನಿಮಗೆ ಕಳುಹಿಸಿಕೊಡುವೆ. ಅದನ್ನು ಓದಿಕೊಳ್ಳಿ).

    ಎಲ್ಲ ಪಕ್ಷಗಳು ಒಟ್ಟಾಗಿ ಬಂದು ಪಟ್ಟು ಹಿಡಿದರೂ ಬಿಜಪಿ ಮಾತ್ರ ಸಿಎಎ ವಿಚಾರದಲ್ಲಿ ತನ್ನ ನಿಲುವಿನಿಂದ ಒಂದು ಹೆಜ್ಜೆಯೂ ಹಿಂದೆ ಸರಿಯದು. ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ತಪ್ಪು ಮಾಹಿತಿ, ಸುಳ್ಳು ಸುದ್ದಿಗಳನ್ನು ಹರಡುತ್ತ ಕೂರಿ.

    ವೋಟ್ ಬ್ಯಾಂಕ್ ಪಾಲಿಟಿಕ್ಸ್​ಗಾಗಿ ಕಾಂಗ್ರೆಸ್ ಪಕ್ಷ ವೀರ ಸಾವರ್ಕರ್ ಬಗ್ಗೆ ಇಲ್ಲಸಲ್ಲದ್ದನ್ನು ಮಾತನಾಡುತ್ತಿದೆ. ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗಬೇಕು ಎಂದು ಷಾ ಇದೇ ವೇಳೆ ಹೇಳಿದರು (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts