More

    ಅಭಿವೃದ್ಧಿ ವಿಷಯಗಳ ಬಗ್ಗೆ ಬಿಜೆಪಿಯೊಂದಿಗೆ ಚರ್ಚೆಗೆ ಸಿದ್ಧ: ಮಾಜಿ ಸಿಎಂ ಅಖಿಲೇಶ್​ ಯಾದವ್​

    ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ವಿಪಕ್ಷಗಳ ಜತೆ ಚರ್ಚೆಗೆ ಸಿದ್ಧ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ನೀಡಿರುವ ಆಹ್ವಾನವನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ ಸ್ವೀಕರಿಸಿದ್ದಾರೆ.

    ಪಕ್ಷದ ನಾಯಕ ದಿ. ಜಾನೇಶ್ವರ್ ಮಿಶ್ರಾ ಅವರ 10 ನೇ ವರ್ಷದ ಪುಣ್ಯ ತಿಥಿಯಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ, ಅವರು ನಾನು ಬಿಜೆಪಿ ನಾಯಕರೊಂದಿಗೆ ಚರ್ಚೆಗೆ ಸಿದ್ಧ. ಅಭಿವೃದ್ಧಿ ವಿಷಯದ ಬಗ್ಗೆ ಚರ್ಚೆಗೆ ಕರೆದರೆ ತೆರಳುತ್ತೇನೆ ಎಂದು ಹೇಳಿದರು.

    ಲಕ್ನೋದಲ್ಲಿ ನಡೆದ ಬಿಜೆಪಿ ಬಹಿರಂಗ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಕಾಯ್ದೆ ಬಗ್ಗೆ ವಿರೋಧ ಪಕ್ಷಗಳ ನಾಯಕರೊಂದಿಗೆ ಚರ್ಚೆಗೆ ಸಿದ್ಧ ಎಂದು ಹೇಳಿದ್ದರು. ಇದನ್ನು ಸ್ವೀಕರಿಸಿದ ಅಖಿಲೇಶ್​ ಯಾದವ್​ ಚರ್ಚೆಗೆ ಬಿಜೆಪಿಯನ್ನು ಆಹ್ವಾನಿಸಿದ್ದಾರೆ.

    ಚರ್ಚೆಯ ಸ್ಥಳ ಮತ್ತು ಸಮಯವನ್ನು ಬಿಜೆಪಿ ನಾಯಕರು ನಿರ್ಧರಿಸಿ ನನಗೆ ತಿಳಿಸಿದರೆ ನಾನು ಅಲ್ಲಿಗೆ ತೆರಳುತ್ತೇನೆ. ಆದರೆ ಚರ್ಚೆಯ ವಿಷಯ ಮಾತ್ರ ಅಭಿವೃದ್ಧಿ, ಉದ್ಯೋಗ, ಯುವಕರು, ರೈತರು ಇವುಗಳ ಬಗ್ಗೆ ಇರಬೇಕು ಎಂದು ಹೇಳಿದರು.

    ಪಕ್ಷದ ನಾಯಕರಾದ ದಿ. ಮಿಶ್ರಾ ಅವರು ನಮಗೆ ಜೂನಿಯರ್​ ಲೋಹಿಯಾ ರೀತಿ ಇದ್ದರು. ಅವರು ಯಾವಾಗಲೂ ಸಮಾನತೆಗಾಗಿ ಕೆಲಸ ಮಾಡುತ್ತಿದ್ದರು. ಅವರ ಕೆಲಸವನ್ನು ಪಕ್ಷ ಮುಂದುವರಿಸುತ್ತದೆ ಎಂದರು.

    ನೈಜ ಸಮಸ್ಯೆಗಳಿಂದ ದೇಶದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ವಿಭಜಕ ಸಮಸ್ಯೆಗಳನ್ನು ತೆಗೆಯುತ್ತಿದೆ. ಪೌರತ್ವ ಕಾಯ್ದೆಯನ್ನು ಕೇವಲ ವಿರೋಧ ಪಕ್ಷಗಳು ಮಾತ್ರ ಪ್ರತಿಭಟಿಸುತ್ತಿಲ್ಲ. ಮಹಿಳೆಯರು, ಮಕ್ಕಳು ಹಾಗೂ ಸಾಮಾನ್ಯ ಜನರು ವಿರೋಧಿಸಿ ಬೀದಿಗೆ ಇಳಿದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.

    ಧರ್ಮದ ಆಧಾರದ ಮೇಲೆ ಬಿಜೆಪಿ ನಾಗರಿಕರ ವಿರುದ್ಧ ಎಷ್ಟು ದಿನ ಅಂತ ಈ ರೀತಿ ತಾರತಮ್ಯ ಎಸಗುತ್ತದೆ. ಬಿಜೆಪಿ ತನ್ನ ವಿವೇಚನಾರಹಿತ ಬಹುಮತದ ಮೂಲಕ ಜನರ ಧ್ವನಿಯನ್ನು ತಣಿಸಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts