More

    VIDEO ಕೇಂದ್ರ ಬಜೆಟ್ 2020 | ಹಲ್ವಾ ಸೆರೆಮೊನಿ ಯಲ್ಲಿ ಭಾಗಿಯಾದ ವಿತ್ತಸಚಿವರು

    ನವದೆಹಲಿ: ಕೇಂದ್ರ ಬಜೆಟ್​ 2020ಕ್ಕೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ ಒಂದಕ್ಕೆ ಬಜೆಟ್ ಮಂಡನೆಯಾಗಲಿದ್ದು, ಪೂರ್ವಭಾವಿಯಾಗಿ ಸೋಮವಾರ ಸಾಂಪ್ರದಾಯಿಕ ಹಲ್ವಾ ಸೆರೆಮೊನಿ ನಡೆಯಿತು. ಈ ಸಾಂಪ್ರದಾಯಿಕ ಕಾರ್ಯಕ್ರಮ ಬಜೆಟ್ ಮಂಡನೆಗೆ ಹತ್ತು ದಿನ ಮುಂಚಿತವಾಗಿ ನಡೆಯುತ್ತದೆ.

    ಸೋಮವಾರ ನಡೆದ ಈ ಕಾರ್ಯಕ್ರಮದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿತ್ತ ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಮತ್ತು ಹಣಕಾಸು ಸಚಿವಾಲಯದ ಅಧಿಕಾರಿಗಳು ಭಾಗಿಯಾಗಿದ್ದರು. ಹಲ್ವಾ ಸೆರೆಮೊನಿ ಸೆಕ್ರೆಟೇರಿಯೇಟ್ ಬಿಲ್ಡಿಂಗ್​ನ ನಾರ್ತ್ ಬ್ಲಾಕ್​ನಲ್ಲಿ ಆಯೋಜಿಸಲ್ಪಡುತ್ತದೆ. ಇದೇ ಬ್ಲಾಕ್ ನಲ್ಲಿ ಹಣಕಾಸು ಸಚಿವಾಲಯ, ಗೃಹ ಸಚಿವಾಲಯಗಳ ಕಚೇರಿಗಳಿವೆ.

    ಹಲ್ವಾ ಸೆರೆಮೊನಿಯ ಮಹತ್ವ: ಹಣಕಾಸು ಸಚಿವಾಲಯ ಆಯೋಜಿಸುವ ಹಲ್ವಾ ಸೆರೆಮೊನಿ ದಶಕಗಳಷ್ಟು ಹಳೆಯ ವಾಡಿಕೆ. ದೊಡ್ಡ ಕಡಾಯಿಯಲ್ಲಿ ಹಲ್ವಾ ಕಾಯಿಸಲಾಗುತ್ತಿದ್ದು, ಈ ಹಲ್ವಾವನ್ನು ಹಣಕಾಸು ಸಚಿವಾಲಯದ ಸಿಬ್ಬಂದಿಗೆ ಹಂಚಲಾಗುತ್ತದೆ. ಹಣಕಾಸು ಸಚಿವಾಲಯದ ಸಿಬ್ಬಂದಿಯ ಶ್ರಮವನ್ನು ಶ್ಲಾಘಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.

    ಈ ಸೆರೆಮೊನಿಯ ನಂತರ ಹಣಕಾಸು ಸಚಿವಾಲಯದ ಸಿಬ್ಬಂದಿಯನ್ನು ನಾರ್ತ್ ಬ್ಲಾಕ್​ನ ಬೇಸ್​ಮೆಂಟ್​ಗೆ ಕಳುಹಿಸಲಾಗುತ್ತದೆ. ಅಲ್ಲಿರುವ ಕಚೇರಿಯಲ್ಲಿ ಮುಂಗಡ ಪತ್ರ ತಯಾರಾಗುತ್ತದೆ. ಹೀಗೆ ಒಳಗೆ ಹೋದವರು 10 ದಿನಗಳ ಕಾಲ ಅಲ್ಲಿಂದ ಹೊರಬರುವಂತೆ ಇಲ್ಲ. ಈ ಮುಂಗಡ ಪತ್ರದ ಯಾವುದೇ ಭಾಗ, ಅಂಶಗಳು ಸೋರಿಕೆ ಆಗಬಾರದೆಂಬ ಉದ್ದೇಶ ಇಲ್ಲಿದೆ.

    ಈ ಎನ್​ಡಿಎ ಸರ್ಕಾರದ ಏಳನೇ ಬಜೆಟ್: ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ನಿರಂತರವಾಗಿ ಮಂಡಿಸುತ್ತಿರುವ ಏಳನೇ ಮುಂಗಡಪತ್ರ ಇದಾಗಿದೆ. ಈ ಸಲದ ಬಜೆಟ್ ಫೆಬ್ರವರಿ ಒಂದರಂದು ಮಂಡನೆಯಾಗಲಿದೆ. (ಏಜೆನ್ಸೀಸ್)

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts