ಬೆಂಗಳೂರು:
ಯೂನಿಯನ್ ಬ್ಯಾಂಕ್ ಆ್ ಇಂಡಿಯಾದಿಂದ ವಿದ್ಯಾರ್ಥಿಗಳಿಗಾಗಿ ರಾಷ್ಟ್ರವ್ಯಾಪಿ
ಯು-ಜೀನಿಯಸ್ 3.0 ಸಾಮಾನ್ಯ ಜಾಗೃತಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ
ಜೆ.ಪಿ.ನಗರದ ಸಂತ ಪಾಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ನಮನ್ ಭೋತಿಕ ಮತ್ತು ಆದಿತ್ಯ ಗಿರಿ ಅವರು ವಿಜೇತರಾಗಿದ್ದಾರೆ.
ಬೆಂಗಳೂರು ವಿವಿ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರಿಯ
ವಿದ್ಯಾಲಯ ಸಂಘಟನೆಯ ಉಪ ಆಯುಕ್ತ ಧರ್ಮೆಂದ್ರ ಪಟ್ಲೆ, ಯೂನಿಯನ್ ಬ್ಯಾಂಕ್ ಆ್ ಇಂಡಿಯಾ ಬೆಂಗಳೂರು ವಲಯ ಮುಖ್ಯಸ್ಥರಾದ ನವನೀತ್ ಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನವನೀತ್ ಕುಮಾರ್, 8ನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನು ತೆರೆಯಲಾಗಿತ್ತು ಮತ್ತು ಪ್ರತಿ ಶಾಲೆಯು 4
ತಂಡವಾಗಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿತ್ತು. ಕ್ವಿಜ್ ಸ್ಪರ್ಧೆಯಲ್ಲಿ 110 ಶಾಲೆಗಳು ಮತ್ತು 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಂಗಳೂರು ಸಿಟಿ ಸುತ್ತಿನಲ್ಲಿ ಭಾಗವಹಿಸಿದ್ದರು ಎಂದರು.
ಬೆಂಗಳೂರು, ಅಹಮದಾಬಾದ್, ದೆಹಲಿ, ಮುಂಬೈ ಹೈದರಾಬಾದ್, ಲಕ್ನೋ, ಚೆನ್ನೈ ಇತ್ಯಾದಿ ಸೇರಿದಂತೆ ಭಾರತದ 48 ನಗರಗಳಲ್ಲಿ ಈವೆಂಟ್ ನಡೆಯಲಿದೆ.
ಆ.29 ರಂದು ಮೈಸೂರಿನಲ್ಲಿ ಝೋನಲ್ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ ಮತ್ತು ಝೋನಲ್ ಸುತ್ತಿನ ವಿಜೇತರು ನ.7ರಂದು ಮುಂಬೈನಲ್ಲಿ ಅಂತಿಮ ರಸಪ್ರಶ್ನೆಗೆ ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ರಸಪ್ರಶ್ನೆ ಸ್ಪರ್ಧೆಗಳ ವಿಷಯಗಳು ಸಾಮಾನ್ಯ ಜ್ಞಾನ, ಭಾರತದ ಜ್ಞಾನ, ವಿಶ್ವ ಸಂಸ್ಕೃತಿ, ಕ್ರೀಡೆ, ಸಾಹಿತ್ಯ, ಪ್ರಸಿದ್ಧ ವ್ಯಕ್ತಿಗಳು, ಸಾಮಾನ್ಯ ಅರಿವು ಮತ್ತು ಬ್ಯಾಂಕಿಂಗ್ ಮತ್ತು ಹಣಕಾಸು.
ಯೂನಿಯನ್ ಬ್ಯಾಂಕ್ ಆಪ ಇಂಡಿಯಾದಿಂದ ರಾಷ್ಟ್ರೀಯ ಮಟ್ಟದ ಸಾಮಾನ್ಯ ಜಾಗೃತಿ ಸ್ಪರ್ಧೆ
You Might Also Like
Chanakya Niti: ದಾಂಪತ್ಯ ಜೀವನ ಸುಂದರವಾಗಿರಲು 4 ವಿಷಯಗಳನ್ನು ಅನುಸರಿಸಿ….
ಬೆಂಗಳೂರು: ವಿದ್ವಾಂಸರಲ್ಲಿ ಚಾಣಕ್ಯರು ( Chanakya Niti ) ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ…
Tamarind Juice : ಹುಣಸೆ ಹಣ್ಣಿನ ರಸದ ಅದ್ಭುತ ಪ್ರಯೋಜನಗಳಿವು…
ಬೆಂಗಳೂರು: ಹುಣಸೆಹಣ್ಣು ಭಾರತೀಯ ಪಾಕಪದ್ಧತಿಯಲ್ಲಿ ಬಳಸುವ ಪದಾರ್ಥಗಳಲ್ಲಿ ಒಂದಾಗಿದೆ. ಹುಣಸೆಹಣ್ಣು ಸ್ವಲ್ಪ ಸಿಹಿ ಮತ್ತು ಸ್ವಲ್ಪ…
ಅನ್ನ ಬಿಟ್ಟು ಚಪಾತಿ ತಿಂದ್ರೆ ನಿಜವಾಗಿಯೂ ತೂಕ ಇಳಿಕೆಯಾಗುತ್ತಾ? ಇಲ್ಲಿದೆ ನೋಡಿ ಅಸಲಿ ಸಂಗತಿ… Chapati
ತೂಕ ಇಳಿಸಿಕೊಳ್ಳಲು ( Weight loss ) ಯಾರಾದರೂ ಸಲಹೆ ಕೇಳಿದಾಗ ಎಲ್ಲರೂ ಮೊದಲು ಹೇಳುವುದೇ…