ಭರ್ತಿಯಾಗದ ಅಕ್ಕಿಆಲೂರಿನ ಕೋಟೆಹೊಂಡ

ಅಕ್ಕಿಆಲೂರ: ಇತ್ತೀಚೆಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾನಗಲ್ಲ ತಾಲೂಕಿನ ಕೆರೆ ಕಟ್ಟೆಗಳು ಭರ್ತಿಯಾಗಿವೆ. ನದಿಗಳು ಉಕ್ಕಿ ಜನರು ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ. ಆದರೆ, ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಕೋಟೆಹೊಂಡ ಮಾತ್ರ ಬರಿದಾಗಿದೆ. ಕೆರೆಗೆ ನೀರು ಹರಿಯುವ ಮೂಲಗಳನ್ನು ನಿರ್ಮಾಣ ಮಾಡಬೇಕೆಂಬ ಆಗ್ರಹ ಕೇಳಿಬರುತ್ತಿದೆ.

ಅಕ್ಕಿಆಲೂರ ಹಾಗೂ ಸುತ್ತಲಿನ ಭಾಗಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ಹೊಂಡದ ಸುತ್ತ ಅನುಪಯುಕ್ತ ಗಿಡ ಗಂಟಿಗಳು ಬೆಳೆದು ನಿಂತಿವೆ. ಕೆರೆ ತುಂಬ ಗಲೀಜು ನೀರು ತುಂಬಿ ಗಬ್ಬು ವಾಸನೆಯಿಂದ ತನ್ನ ಮೂಲ ಸ್ವರೂಪ ಕಳೆದುಕೊಂಡಿದ್ದ ಹೊಂಡವನ್ನು ಪ್ರತಿ ಎರಡೂ ವರ್ಷಕ್ಕೂಮ್ಮೆ ಸ್ಥಳೀಯ ಗ್ರಾಪಂ ಸ್ವಚ್ಛಗೊಳಿಸಿದರೂ ಪ್ರಯೋಜನವಾಗಿರಲಿಲ್ಲ. ಸ್ಥಳೀಯ ಗ್ರಾಪಂ ಸಹಾಯದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಅಂದಾಜು 5 ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣ ಅಭಿವೃದ್ಧಿಗೊಳಿಸಿತ್ತು. ಆದರೆ, ಮತ್ತೆ ಸುತ್ತಲೂ ಗಿಡ ಗಂಟಿಗಳು ಬೆಳೆದು ಯಥಾಸ್ಥಿತಿಗೆ ಬಂದಿದೆ.

ಪಟ್ಟಣದ ಜಲಮೂಲ

ಅಕ್ಕಿಆಲೂರಿನ ಮಧ್ಯ ಭಾಗದಲ್ಲಿರುವ ಹೊಂಡ ತುಂಬಿದರೆ ಪಟ್ಟಣದಲ್ಲಿ ಅಂತರ್ಜಲ ಮಟ್ಟ ಬೇಸಿಗೆಯಲ್ಲೂ ಉತ್ತಮ ಸ್ಥಿತಿಯಲ್ಲಿರುತ್ತದೆ. ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಈ ಸಮಯದಲ್ಲಿ ಕೋಟೆ ಹೊಂಡ ತುಂಬಿಸಿದರೆ ಭವಿಷ್ಯದಲ್ಲಿ ಪಟ್ಟಣಕ್ಕೆ ನೀರಿನ ಅಭಾವ ಉಂಟಾಗುವುದಿಲ್ಲ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.

ಮೊದಲು ಸಣ್ಣ ಪುಟ್ಟ ಮಳೆಯಾದರೂ ಪಟ್ಟಣದ ಗಲೀಜು ನೀರು ಹರಿದು ತುಂಬುತ್ತಿದ್ದ ಹೊಂಡಕ್ಕೆ ಈಗ ಗಲೀಜು ನೀರು ಬಾರದಂತೆ ಸ್ಥಗಿತಗೊಳಿಸಲಾಗಿದೆ. ಸಂಪೂರ್ಣ ಹೂಳು ತೆಗೆದು, ಅಭಿವೃದ್ಧಿಪಡಿಸಿ, ಸುತ್ತಲೂ ತಂತಿ ಬೇಲಿ ಹಾಕಲು ವ್ಯವಸ್ಥೆ ಕಲ್ಪಿಸಲಾಗಿದೆ.

ತುಂಗಭದ್ರಾ ಮಹತ್ವಾಕಾಂಕ್ಷಿ ಯೋಜನೆ:

ತುಂಗಭದ್ರಾ ನದಿಯ ನೀರನ್ನು ಅಕ್ಕಿಆಲೂರ ಭಾಗದ ಗ್ರಾಮೀಣ ಪ್ರದೇಶದ ನೀರಿನ ಟ್ಯಾಂಕ್​ಗಳಿಗೆ ಹರಿಸುವ ಯೋಜನೆ ಪ್ರಗತಿಯಲ್ಲಿದೆ. ಈಗಾಗಲೇ ತುಂಗಭದ್ರಾ ನದಿಯಿಂದ ಪೈಪ್​ಲೈನ್ ಅಳವಡಿಸಿ, ಸಮೀಪದ ಹೋತನಹಳ್ಳಿ ಗುಡ್ಡದ ಬಳಿ ನೀರು ಶುದ್ಧೀಕರಣ ಮಾಡಿ, ಹಳ್ಳಿಗಳಲ್ಲಿರುವ ಟ್ಯಾಂಕ್​ಗಳಿಗೆ ನೀರು ಒದಗಿಸಲು ಮುಂದಾಗುತ್ತಿದ್ದಾರೆ. ಪಟ್ಣಣದ ನೀರಿನ ಟ್ಯಾಂಕ್​ಗಳಿಗೆ ನೀರು ಸರಬರಾಜು ಮಾಡುವುದರ ಜತೆಗೆ ಕೋಟೆ ಹೊಂಡವನ್ನೂ ತುಂಬಿಸಿದರೆ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ.

ಮಳೆ ನೀರು ಎಲ್ಲಿ ಬೇಕೆಂದರಲ್ಲಿ ಅನವಶ್ಯಕವಾಗಿ ಹರಿಯುತ್ತಿದೆ. ಈಗಾಗಲೇ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಅಭಿವೃದ್ಧಿ ಮಾಡಿರುವ ಕೋಟೆ ಹೊಂಡ ತುಂಬಿಸಿದರೆ ಬೇಸಿಗೆಯಲ್ಲಿ ನೀರಿನ ಅಭಾವ ತಪ್ಪಿಸಬಹುದು. ತುಂಗಭದ್ರಾ ನದಿ ನೀರು ಹೊಂಡಕ್ಕೆ ಹರಿಸಲು ಸ್ಥಳೀಯ ಜನಪ್ರನಿಧಿಗಳು, ಹಿರಿಯರ ಜತೆ ರ್ಚಚಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗುವುದು.

| ಕುಮಾರ ಮಕರವಳ್ಳಿ, ಅಕ್ಕಿಆಲೂರ, ಪಿಡಿಒ

ಪಟ್ಟಣದ ಜನರ ಅನುಕೂಲಕ್ಕಾಗಿ ನಿರ್ವಣವಾಗಿರುವ ಹೊಂಡ ಉಪಯೋಗ ಇಲ್ಲದಂತಾಗಿದೆ. ಬಹಳ ಕಷ್ಟಪಟ್ಟು ಅಭಿವೃದ್ಧಿ ಮಾಡಿರುವ ಹೊಂಡಕ್ಕೆ ಹೇಗಾದರೂ ಮಾಡಿ ನೀರು ತುಂಬಿಸುವ ಕಾರ್ಯವಾಗಬೇಕು. ಇದು ಮುಂದಿನ 5 ವರ್ಷಗಳ ಅವಧಿಯಲ್ಲಿ ನೀರಿನ ದಾಹ ನೀಗಿಸಲಿದೆ.

| ಸದಾಶಿವ ಕಂಬಾಳಿ, ಅಕ್ಕಿಆಲೂರ ಗ್ರಾಪಂ ಸದಸ್ಯ

Share This Article

ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…