ಮೈಸೂರು: ಪ್ರಾಣಿಗಳ ಸ್ವಾತಂತ್ರೃಕ್ಕಾಗಿ ವೀಗನ್ ಕರ್ನಾಟಕ ವತಿಯಿಂದ ನಗರದ ಪುರಭವನ ಬಳಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಪ್ರಾಣಿ, ಪಕ್ಷಿಗಳ ಮೇಲೆ ಮನುಷ್ಯ ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸಬೇಕು. ಮನುಷ್ಯರಂತೆ ಅವುಗಳಿಗೂ ಬದುಕುವ ಹಕ್ಕು ಇದೆ. ಪ್ರಾಣಿಗಳಿಗೂ ಭಾವನೆಗಳನ್ನು ಇದ್ದು, ಅದನ್ನು ಮನುಷ್ಯರು ಅರ್ಥ ಮಾಡಿಕೊಳ್ಳಬೇಕು. ಮೂಖ ಪ್ರಾಣಿಗಳಿಗೆ ಮಾತು ಬಾರದೆ ಇರಬಹುದು. ಆದರೆ, ಅವುಗಳ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವುಗಳಿಗೆ ಹಿಂಸೆ ನೀಡುವುದನ್ನು ನಿಲ್ಲಿಸಬೇಕು ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಒತ್ತಾಯಿಸಿದರು. ವೀಗನ್ ಕರ್ನಾಟಕ ಸಂಸ್ಥೆಯ ಪ್ರತಿನಿಧಿಗಳಾದ ಅನುರಾಗ್, ಅಂಜೋರ್ ಹಾಗೂ ಇತರರು ಪಾಲ್ಗೊಂಡಿದ್ದರು.