More

    VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

    ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು 17 ವರ್ಷದ ಬಲಗೈ ವೇಗಿ ಮಥೀಶಾ ಪಥಿರಣ ಅವರಿಂದ ನಿರ್ಮಾಣವಾಗಿದೆ.

    ದಿಗ್ಗಜ ವೇಗಿ ಲಸಿತ್ ಮಾಲಿಂಗರನ್ನು ಹೋಲುವಂತೆ ಬೌಲಿಂಗ್ ಮಾಡುವ ಮೂಲಕ ಈಗಾಗಲೇ ಲಂಕಾದ ದೇಶೀಯ ಕ್ರಿಕೆಟ್ ವಲಯದಲ್ಲಿ ಗಮನಸೆಳೆದಿರುವ ಮಥೀಶಾ, ಭಾರತ ವಿರುದ್ಧದ ಪಂದ್ಯದಲ್ಲಿ ನೀರಸವಾಗಿ ದಾಳಿ ನಡೆಸಿದರು. 8 ಓವರ್​ಗಳ ಕೋಟಾದಲ್ಲಿ ಒಂದೂ ವಿಕೆಟ್ ಇಲ್ಲದೆ 49 ರನ್​ಗಳನ್ನು ನೀಡಿದ್ದರು. ಆದರೆ, ಅವರ ಒಂದು ಎಸೆತ ವಿಶ್ವದಾಖಲೆಗೆ ಕಾರಣವಾಗಿದೆ. ವೈಡ್ ಆದ ಈ ಎಸೆತ ಗಂಟೆಗೆ 175 ಕಿ.ಮೀ ವೇಗವನ್ನು ಹೊಂದಿತ್ತು ಎಂದು ಟಿವಿ ಪ್ರಸಾರದಲ್ಲಿ ದಾಖಲಿಸಿದ್ದು, ಎಲ್ಲ ವಯೋಮಿತಿಯ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ದಾಖಲಾಗಿರುವ ಅತ್ಯಂತ ವೇಗದ ಎಸೆತ ಎನ್ನುವ ಶ್ರೇಯಕ್ಕೆ ಭಾಜನವಾಗಿದೆ. ಭಾರತದ ಬ್ಯಾಟಿಂಗ್​ನ 4ನೇ ಓವರ್​ನಲ್ಲಿ ಮಥೀಶಾ ಎಸೆದ ಎಸೆತ, ಲೆಗ್​ಸೈಡ್​ನತ್ತ ತೆರಳಿತು. ವಿಕೆಟ್ ಕೀಪರ್ ಸ್ವಲ್ಪ ಬಲಗಡೆಗೆ ಚಲಿಸಿ ಚೆಂಡನ್ನು ಪಡೆದುಕೊಂಡರು. ಅಂಪೈರ್ ಇದನ್ನು ವೈಡ್ ಎಂದು ಘೋಷಿಸಿದ ಬೆನ್ನಲ್ಲಿಯೇ ಟಿವಿ ಪರದೆಯಲ್ಲಿ ಚೆಂಡಿನ ವೇಗ ಗಂಟೆಗೆ 175 ಕಿಮೀ ಹಾಗೂ ಗಂಟೆಗೆ 108 ಮೈಲಿ ಎಂದು ತೋರಿಸಿತು.

    ಅಖ್ತರ್ ಹೆಸರಲ್ಲಿದೆ ದಾಖಲೆ: ಸೀನಿಯರ್ ವಿಭಾಗದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈ ದಾಖಲೆ ಪಾಕಿಸ್ತಾನದ ವೇಗಿ ಶೋಯೆಬ್ ಅಖ್ತರ್ ಹೆಸರಲ್ಲಿದೆ. 2003ರ ಏಕದಿನ ವಿಶ್ವಕಪ್ ವೇಳೆ ಇಂಗ್ಲೆಂಡ್ ವಿರುದ್ಧದ ಗಂಟೆಗೆ 161.3 ಕಿ.ಮೀ ಎಸೆತದಲ್ಲಿ ಚೆಂಡೆಸೆದಿದ್ದರು. -ಏಜೆನ್ಸೀಸ್

    ಮಾಹಿತಿ ನೀಡದ ಐಸಿಸಿ

    ಟಿವಿ ಪರದೆಯಲ್ಲಿ ಮಥೀಶಾ ಪಥಿರಣ ಎಸೆತದ ವೇಗವನ್ನು ತೋರಿಸಿದ ಬೆನ್ನಲ್ಲಿಯೇ ಇದು ತಾಂತ್ರಿಕ ಅಡಚಣೆಯಿಂದಾಗಿ ಆಗಿರಬಹುದು ಎಂದು ಕೆಲ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಆದರೆ, ಅವರ ದಾಖಲೆಯ ಬಗ್ಗೆ ಐಸಿಸಿ ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.

    ಸುಲಭ ಗೆಲುವಿನ ನಿರೀಕ್ಷೆಯಲ್ಲಿ ಭಾರತ

    ಬ್ಲೂಮ್ಾಂಟೆನ್ (ದಕ್ಷಿಣ ಆಫ್ರಿಕಾ): ಹಾಲಿ ಚಾಂಪಿಯನ್ ಭಾರತ ತಂಡ 19 ವಯೋಮಿತಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ತನ್ನ 2ನೇ ಪಂದ್ಯದಲ್ಲಿ ಮಂಗಳವಾರ ಜಪಾನ್ ತಂಡವನ್ನು ಎದುರಿಸಲಿದೆ. ಭಾನುವಾರ ಶ್ರೀಲಂಕಾ ತಂಡವನ್ನು ಮಣಿಸಿದ ವಿಶ್ವಾಸದಲ್ಲಿರುವ ಪ್ರಿಯಂ ಗಾರ್ಗ್ ಪಡೆ ಮತ್ತೊಂದು ಗೆಲುವಿನ ಗುರಿಯಲ್ಲಿದೆ. ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಭಾರತ ಕಿರಿಯರ ಪಡೆ ಜಪಾನ್ ತಂಡವನ್ನು ಮಣಿಸಿದರೆ ಎ ಗುಂಪಿನಲ್ಲಿ ಅಗ್ರಸ್ಥಾನಕ್ಕೇರುವುದು ಖಚಿತವಾಗಲಿದೆ. ಜಪಾನ್ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಶನಿವಾರ ಮಳೆಯಿಂದ ರದ್ದುಗೊಂಡಿತ್ತು. ಭಾರತ ತಂಡ ಶುಕ್ರವಾರ ನ್ಯೂಜಿಲೆಂಡ್ ಎದುರು ಕಡೇ ಲೀಗ್ ಪಂದ್ಯವಾಡಲಿದೆ. ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ಸಿದ್ದೇಶ್ ವೀರ್​ರಂಥ ಪ್ರತಿಭೆಗಳು ಬ್ಯಾಟಿಂಗ್​ನಲ್ಲಿ ಗಮನ ಸೆಳೆಯುತ್ತಿದ್ದರೆ, ಅಕಾಶ್ ಸಿಂಗ್, ರವಿ ಬಿಷ್ಣೋಯಿ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದಾರೆ. ಪಂದ್ಯ ಆರಂಭ: ಮಧ್ಯಾಹ್ನ 1.30, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts