ಮೈಸೂರು: ನಗರ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಸೋಮವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪಾಲಿಕೆಯ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪಟ್ಟಣ ಯೋಜನೆ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಸೈಯದ್ ಹಸ್ರತ್ ಉಲ್ಲಾ, ತೆರಿಗೆ ಸುಧಾರಣೆ ಮತ್ತು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್‌ನ ಕೆ.ನಿರ್ಮಲಾ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಜೆ.ಗೋಪಿ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಬಿಎಸ್‌ಪಿಯ ಬೇಗಂ ಪಲ್ಲವಿ ಒಂದು ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷರನ್ನು ಮೇಯರ್ ತಸ್ನೀಂ ಹೂಗುಚ್ಛ ನೀಡುವ ಮೂಲಕ ಅಭಿನಂದಿಸಿದರು.
ಅಂತೆಯೇ ತೆರಿಗೆ ಸುಧಾರಣೆ ಮತ್ತು ಅಪೀಲು ಸ್ಥಾಯಿ ಸಮಿತಿ ಸದಸ್ಯರಾಗಿ ಸೌಮ್ಯಾ, ಸವಿತಾ, ಲಕ್ಷ್ಮೀ, ಅಕ್ಮಲ್ ಪಾಷ, ಶಮಿವುಲ್ಲಾ, ಜಿ.ಎಸ್. ಸತ್ಯರಾಜ್, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಶೋಭಾ, ಭಾಗ್ಯಾ, ಅಯಾಜ್ ಪಾಷ, ಉಷಾ, ಶಾರದಮ್ಮ, ಭುವನೇಶ್ವರಿ, ಪಟ್ಟಣ ಯೋಜನೆ ಸುಧಾರಣಾ ಸ್ಥಾಯಿ ಸಮಿತಿಗೆ ಶ್ರೀನಿವಾಸ್, ರುಕ್ಮಿಣಿ, ರಮೇಶ್, ಹಾಜಿರಾಸೀಮಾ, ಸುನಂದಾ ಪಾಲನೇತ್ರ, ಪ್ರಮೀಳಾ ಭರತ್, ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಅಶ್ವಿನಿ ಅನಂತು, ಛಾಯಾದೇವಿ, ವೇದಾವತಿ, ಅಯೂಬ್‌ಖಾನ್, ಆರಿಫ್ ಹುಸೇನ್, ಪ್ರದೀಪ್‌ಚಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದರು.