ಮುಂಡರಗಿ: ಸಾಲಬಾಧೆ ತಾಳಲಾರದೆ ರೈತರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಈರಪ್ಪ ಚನ್ನಬಸಪ್ಪ ಕುರಡಗಿ (42) ಮೃತಪಟ್ಟ ರೈತ.
ಗ್ರಾಮದ ಕೆವಿಜಿ ಬ್ಯಾಂಕ್ನಲ್ಲಿ 1 ಲಕ್ಷ ರೂ. ಬೆಳೆ ಸಾಲ ಹಾಗೂ ಸಂಘ-ಸಂಸ್ಥೆಗಳಲ್ಲಿ ಸಾಲ ಮಾಡಿದ್ದರು.
ಎರಡ್ಮೂರು ವರ್ಷಗಳಿಂದ ಮಳೆ ಹೆಚ್ಚೂ ಕಡಿಮೆಯಾಗಿದ್ದರಿಂದ ಸರಿಯಾಗಿ ಬೆಳೆ ಬಾರದೆ ಸಾಲ ತೀರಿಸಲಾಗದೇ ನೊಂದು ತಮ್ಮದೇ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.