ಮತದಾರರಿಗೆ ಹಣ ಹಂಚಿಕೆ ಆರೋಪ: ಪೊಲೀಸ್​ ವಾಹನದ ಎದುರು ಕುಳಿತು ಉಮೇಶ್​ ಜಾಧವ್​ ಪ್ರತಿಭಟನೆ

ಚಿಂಚೋಳಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಖಾನಾಪುರದಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಉಮೇಶ್​ ಜಾಧವ್​ ಪೊಲೀಸ್​ ವಾಹನದ ಎದುರು ಕುಳಿತು ಪ್ರತಿಭಟನೆ ನಡೆಸಿದರು.

ಚಿತ್ತಾಪುರ ತಾಲೂಕು ಪಂಚಾಯಿತಿ ಸದಸ್ಯ ನಾಮದೇವ್​ ರಾಠೋಡ್ ಅಧಿಕಾರಿಗಳ ಜತೆ ಸೇರಿ​ 5-6 ವಾಹನಗಳಲ್ಲಿ ಹಣ,ಆಯುಧಗಳನ್ನುಇಟ್ಟುಕೊಂಡು ಮತದಾರರಿಗೆ ಹಣ ಹಂಚಲಾಗುತ್ತಿದೆ. ಈ ಕೆಲಸದಲ್ಲಿ ಕಾಂಗ್ರೆಸ್​ನ ಪ್ರಿಯಾಂಕ ಖರ್ಗೆ ಕೈವಾಡವಿದೆ ಎಂದು ಉಮೇಶ್ ಜಾಧವ್​ ಆರೋಪಿಸಿದ್ದಾರೆ.

ಸ್ಥಳದಲ್ಲಿ ಕಾರ್ಯಕರ್ತರ ಗಲಾಟೆ ಹೆಚ್ಚಾಗಿದೆ. ಹಣ, ಆಯುಧ ಇದೆ ಎನ್ನಲಾದ ವಾಹನದ ಮೇಲೆ ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಎಸ್ಪಿ ಕೂಡ ಭೇಟಿ ನೀಡಿದ್ದಾರೆ.