Umar Nazir Mir: ಪ್ರಸಕ್ತ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಬಹುತೇಕ ಆಟಗಾರರು ಪಾಲ್ಗೊಂಡಿದ್ದಾರೆ. ಕೆಲವು ವರ್ಷಗಳ ನಂತರ ರಣಜಿಗೆ ಮರಳಿರುವ ಭಾರತದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮ, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ ಮತ್ತು ಅಜಿಂಕ್ಯಾ ರಹಾನೆ ಇಲ್ಲಿಯೂ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಭಾರತದ ಸ್ಟಾರ್ ಬ್ಯಾಟರ್ಗಳನ್ನು ಒಂದಂಕಿ ದಾಟಲು ಬಿಡದೆ ಕಾಡಿದ ಜಮ್ಮು-ಕಾಶ್ಮೀರ ತಂಡದ ವೇಗಿ ಉಮರ್ ನಜೀರ್ ಈಗ ಕ್ರಿಕೆಟ್ ಪ್ರಿಯರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಎಲಾನ್ ಮಾಡಿರುವುದು ‘ನಾಜಿ ಸೆಲ್ಯೂಟ್’ ಅಲ್ಲ: ಮಸ್ಕ್ ಸಮರ್ಥಿಸಿಕೊಂಡ ಇಸ್ರೇಲ್ PM ನೆತನ್ಯಾಹು
ಬ್ಯಾಟರ್ಗಳ ಅಬ್ಬರಕ್ಕೆ ಬ್ರೇಕ್
ರೋಹಿತ್ ಶರ್ಮ, ರಹಾನೆ ಮತ್ತು ಶಿವಂ ದುಬೆ ವಿರುದ್ಧ ತನ್ನ ಅದ್ಭುತ ಬೌಲಿಂಗ್ ದಾಳಿ ಪ್ರದರ್ಶಿಸಿದ ಆರು ಅಡಿ ಎತ್ತರದ ಉಮರ್, ಬೌನ್ಸ್ ಹಾಗೂ ಪೇಸ್ನಲ್ಲಿಯೇ ಸ್ಟಾರ್ ಬ್ಯಾಟರ್ಗಳ ಅಬ್ಬರವನ್ನು ಕಟ್ಟಿಹಾಕುತ್ತಿದ್ದಾರೆ. ದೇಶಿಯ ಕ್ರಿಕೆಟ್‌ನಲ್ಲಿ ತನ್ನದೇ ಹೆಸರು ಸ್ಥಾಪಿಸಿಕೊಂಡಿರುವ 31 ವರ್ಷದ ಉಮರ್ ನಜೀರ್ ಮಿರ್, ಶಿವಂ ದುಬೆರನ್ನು ಡಕ್ ಔಟ್ ಮಾಡುವಲ್ಲಿ ಯಶಸ್ವಿಯಾದರು. ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸ್ಟಾರ್ ಬ್ಯಾಟ್ಸ್ಮನ್ಗಳ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಉಮರ್ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.
ನಜೀರ್ ಪ್ರದರ್ಶನ
2013ರಲ್ಲಿ ಕ್ರಿಕೆಟ್ ಲೋಕಕ್ಕೆ ಪದಾರ್ಪಣೆ ಮಾಡಿದ ಉಮರ್, ಅಂದಿನಿಂದ ಇಂದಿನವರೆಗೆ ಒಟ್ಟು 57 ಪಂದ್ಯಗಳನ್ನಾಡಿ 138 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 54 ವಿಕೆಟ್‌ಗಳನ್ನು ಪಡೆದಿದ್ದು, ಟಿ20 ಮ್ಯಾಚ್ಗಳಲ್ಲಿ ಒಟ್ಟು 32 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಮೂಲತಃ ಪುಲ್ವಾಮಾದವರಾದ ನಜೀರ್, 6.4 ಅಡಿ ಎತ್ತರ ಇರುವುದೇ ಅವರ ಬೌಲಿಂಗ್ಗೆ ಪ್ಲಸ್ ಎನ್ನಲಾಗಿದೆ. 2018-19ರ ದೇವಧರ್ ಟ್ರೋಫಿಗಾಗಿ ಭಾರತ ‘ಸಿ’ ತಂಡದಲ್ಲಿ ನಜೀರ್ ಸ್ಥಾನ ಗಿಟ್ಟಿಸಿಕೊಂಡಿದ್ದರು. ದಿಗ್ಗಜ ಬ್ಯಾಟರ್ ರೋಹಿತ್ರ ವಿಕೆಟ್ ಪಡೆದ ಉಮರ್ ನಜೀರ್ ಬೌಲಿಂಗ್ ದಾಳಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
BBK11: ಫಿನಾಲೆಯ ಕೊನೆಯಲ್ಲಿ ಈ ಮೂವರ ಮಧ್ಯೆ ಟ್ರೋಫಿ ಸೆಣಸಾಟ! ಯಾರ ಮುಡಿಗೆ ಸೀಸನ್ 11ರ ಕಿರೀಟ?