ಮಾವಿನಿಂದ ಅಲಂಕೃತಗೊಂಡ ವಿಠಲ- ರುಕ್ಮಿಣಿ

ಉಮದಿ : ಪಂಢರಪುರದ ಶ್ರೀ ವಿಠಲ-ರುಕ್ಮಿಣಿ ಮೂರ್ತಿಗಳನ್ನು ಪುಣೆ ಭಕ್ತರೊಬ್ಬರು ನೀಡಿದ 11000 ರತ್ನಾಗಿರಿ ಆಪುಸ್ ಮಾವಿನ ಹಣ್ಣುಗಳಿಂದ ಭಾನುವಾರ ಅಲಂಕರಿಸಲಾಗಿತ್ತು.

ಕರ್ನಾಟಕ ಹಾಗೂ ಮಹಾರಾಷ್ಟ್ರದ ಲಕ್ಷಾಂತರ ಭಕ್ತರ ಆರಾಧ್ಯ ದೈವ ಪಂಢರಪುರದ ಶ್ರೀ ಪಾಂಡುರಂಗ ಹಾಗೂ ರುಕ್ಮಿಣಿ ದೇವರನ್ನು ಕಾಲಕ್ಕೆ ತಕ್ಕಂತೆ ವಿವಿಧ ರೂಪ ಹಾಗೂ ವಿವಿಧ ವಸ್ತುಗಳಿಂದ ಅಲಂಕೃತ ಗೊಳಿಸಲಾಗುತ್ತದೆ. ಪುಣೆ ನಗರದ ವಿನಾಯಕ ಕಾಚಿ ಅವರು ರತ್ನಾಗಿರಿಯಿಂದ ತಂದಿದ್ದ 11000 ಮಾವುಗಳಿಂದ ದೇವರನ್ನು ಅಲಂಕರಿಸಿದ್ದರಿಂದ ಮಂದಿರ ತುಂಬ ರತ್ನಾಗಿರಿ ಆಪುಸ್ ಹಣ್ಣಿನ ಸುವಾಸನೆ ಹರಡಿತ್ತು.

ವಿಠಲ ದೇವರಿಗೆ ವರ್ಷದಲ್ಲಿ ಹಲವಾರು ಬಾರಿ ಚೆಂಡು ಹೂವಿನಿಂದ ಅಲಂಕರಿಸಿದರೆ, ಮೊತ್ತೊಮ್ಮೆ ವಿವಿಧ ಬಗೆಯ ದೇಶ ಹಾಗೂ ವಿದೇಶದ ಸುಗಂಧ ಭರಿತ ಪುಷ್ಪಗಳಿಂದ ಅಲಂಕರಿಸಲಾಗುತ್ತದೆ. ಕೆಲವೊಮ್ಮೆ ವಿವಿಧ ಬಗೆಯ ಬಟ್ಟೆಗಳಿಂದಲೂ ಅಲಂಕರಿಸುವ ಪದ್ಧತಿ ಇದೆ. ಸಾವಿರಾರು ವರ್ಷಗಳಿಂದ ಪಾಂಡುರಂಗನಿಗೆ ಋತುಗಳಿಗನುಸಾರವಾಗಿ ಅಲಂಕಾರ ಮಾಡುತ್ತ ಬಂದಿರುವುದನ್ನು ಮಂದಿರದ ಆಡಳಿತ ಮಂಡಳಿ ಮುಂದುವರಿಸಿಕೊಂಡು ಬಂದಿದೆ.

ಶ್ರೀಗಂಧದ ಲೇಪನ
ಪ್ರತಿ ವರ್ಷ ಬೇಸಿಗೆಯಲ್ಲಿ ಉಷ್ಣತೆಯಿಂದ ಕಾಪಾಡುವ ಉದ್ದೇಶದಿಂದ ಚೈತ್ರ ಶುದ್ಧ ಮೃಗಶಿರ ನಕ್ಷತ್ರದವರೆಗೆ ಅಂದರೆ ಮೂರು ತಿಂಗಳು ಮೂರ್ತಿಗಳಿಗೆ ಶ್ರೀಗಂಧದ ಲೇಪನ ಮಾಡಲಾಗುತ್ತದೆ.

Leave a Reply

Your email address will not be published. Required fields are marked *