ಹಣಕ್ಕಿಂತ, ವಿದ್ಯೆಗೆ ಬೆಲೆ ಜಾಸ್ತಿ

ಉಮದಿ: ಹಣವಂತ ಕೆಲವೆಡೆ ಮಾತ್ರ ಪೂಜಿಸಿಕೊಳ್ಳುತ್ತಾನೆ. ಆದರೆ, ವಿದ್ಯಾವಂತ ಎಲ್ಲೆಡೆ ಪೂಜಿಸಲ್ಪಡುತ್ತಾನೆ ಎಂದು ವಿಜಯಪುರ ಸಾಹಿತಿ ಅಮೀರುದ್ದಿನ್ ಖಾಜಿ ಹೇಳಿದರು.

ಪಟ್ಟಣದ ಸರ್ವೇದಯ ಶಿಕ್ಷಣ ಸಂಸ್ಥೆಯ ಸಮತಾ ಮಾಧ್ಯಮಿಕ ಆಶ್ರಮ ಶಾಲೆ ಹಾಗೂ ಜ್ಯೂನಿಯರ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥೆ ಕಾರ್ಯದರ್ಶಿ ಎಸ್.ಕೆ.ಹೋರ್ತಿಕರ ಮಾತನಾಡಿ, ಹೆತ್ತವರೇ ನಿಜವಾದ ದೇವರು. ಅವರ ಸೇವೆಯಲ್ಲಿ ಆತ್ಮಸಾಕ್ಷಾತ್ಕಾರವಾಗುತ್ತದೆ. ಅದೇ ನಮ್ಮ ಭಕ್ತಿಯಾಗಬೇಕು ಎಂದು ಹೇಳಿದರು.

ಡಾ.ಎಸ್.ಪಿ.ಹೋರ್ತಿಕರ, ಎಂ.ಎಲ್.ಇಮ್ಮನವರ, ಎಸ್.ಕೆ. ಹೋರ್ತಿಕರ ಅವರನ್ನು ಸನ್ಮಾನಿಸಲಾಯಿತು.

ರೇವಪ್ಪ ಲೋಣಿ ಅಧ್ಯಕ್ಷತೆ ವಹಿಸಿದ್ದರು. ಆರ್.ಸಿ.ಹೋರ್ತಿಕರ, ಡಿ.ಎಂ.ಹಲಕುಡೆ ಸ್ವಾಗತಿಸಿದರು. ಎಂ.ಎಂ. ಮಠ ನಿರೂಪಿಸಿದರು. ಎಂ.ಎಲ್. ಇಮ್ಮನವರ ವಂದಿಸಿದರು.