ತಂದೆಯಿಂದ ಮಗಳ ಕೊಲೆ

ಉಮದಿ: ಅನೈತಿಕ ಸಂಬಂಧದ ಸಂಶಯದಿಂದ ಜತ್ತ ತಾಲೂಕಿನ ಖಿಲಾರವಾಡಿಯಲ್ಲಿ ಮಂಗಳವಾರ ರಾತ್ರಿ ತಂದೆಯೇ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಸುಪ್ರೀಯಾ ಸುರೇಬಾ ಲೋಖಂಡಿ (18) ಕೊಲೆಯಾದ ದುರ್ದೈವಿ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುರೇಬಾ ಲೋಖಂಡಿ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಈ ಕುರಿತು ಸುಪ್ರೀಯಾಳ ದೂರದ ಸಂಬಂಧಿ ಜಗನ್ನಾಥ ಲೋಖಂಡಿ ಜತ್ತ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.