17 C
Bangalore
Monday, December 9, 2019

ರಾಮ ನಮನ, ಗಂಗಾ ಗಮನ

Latest News

ಉಪಚುನಾವಣೆ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಅಸ್ಥಿರತೆಗೆ ಅಂತ್ಯ ಹಾಡುತ್ತಾ?

ಬೆಂಗಳೂರು: ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿದ್ದ ರಾಜಕೀಯ ಅಸ್ಥಿರತೆಯ ಗ್ರಹಣ ಸೋಮವಾರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಉಪಚುನಾವಣೆಯ ಮತದಾನೋತ್ತರ ಸಮೀಕ್ಷೆಗಳಂತೆಯೇ ಜನಾಭಿಪ್ರಾಯ ರೂಪುಗೊಂಡಿದ್ದರೆ, ಬಿಜೆಪಿ...

ಕೋಟಿ ರೂ. ವೆಚ್ಚದಲ್ಲಿ ಗಟಾರ ನಿರ್ಮಾಣ

ಹುಬ್ಬಳ್ಳಿ: ಇಲ್ಲಿಯ ಬಿಡ್ನಾಳ ಮುಖ್ಯ ರಸ್ತೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಗಟಾರ ನಿರ್ವಿುಸಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ನೀರು ಇರುವುದೇ ಪೋಲು ಮಾಡಲು!

ಹುಬ್ಬಳ್ಳಿ: ಜಲ ಮಂಡಳಿ ತಾನೇ ಹೊಸ ನಿಯಮವೊಂದನ್ನು ಕಂಡುಕೊಂಡಿದೆ. ಅದೇನು ಎನ್ನುವ ಆಶ್ಚರ್ಯವೇ? ನೀರು ಇರುವುದೇ ಪೋಲು ಮಾಡಲು ಎನ್ನುವುದು!

ಈಜಿಪ್ತ್ ಈರುಳ್ಳಿ ಕೊಳ್ಳುವವರೇ ಇಲ್ಲ

ಹುಬ್ಬಳ್ಳಿ: ಇಲ್ಲಿಗೆ ತರಿಸಲಾಗಿದ್ದ ಈಜಿಪ್ತ್ ಈರುಳ್ಳಿಗೆ ಖರೀದಿದಾರರು ಟೆಂಡರ್ ಹಾಕಿಲ್ಲ. ಹೀಗಾಗಿ, ಈಜಿಪ್ತ್ ಈರುಳ್ಳಿಯನ್ನು ಬೇರೆ ಮಾರುಕಟ್ಟೆಗೆ ಕೊಂಡೊಯ್ಯಲಾಗಿದೆ.

ನಿರಾಶೆ ಭಾವ ತಗ್ಗಿಸಿದ ತೃಪ್ತಿ

ಕಲಘಟಗಿ: ಹಳ್ಳಿಗಳ ನಿರುದ್ಯೋಗಿ ಯುವ ಸಮೂಹದಲ್ಲಿ ವಿದ್ಯಾವಂತ ರಾಗಿಯೂ ಉದ್ಯೋಗವಿಲ್ಲ ಎಂಬ ನಿರಾಶೆ ಭಾವನೆಯನ್ನು ಕಿಂಚಿತ್ತಾದರೂ ತಗ್ಗಿಸಿದ ಆತ್ಮತೃಪ್ತಿ ಇದೆ ಎಂದು ಶಾಸಕ...

| ರವೀಂದ್ರ ಎಸ್.ದೇಶಮುಖ್ ಬೆಂಗಳೂರು

‘ರಾಮ ಮಂದಿರ ಆಂದೋಲನದಡಿ ನಡೆದ ಕರಸೇವೆಯಲ್ಲಿ ಪಾಲ್ಗೊಂಡಿದ್ದಕ್ಕೆ ಐದು ವರ್ಷವಲ್ಲ, ಐದು ಸಾವಿರ ವರ್ಷ ಜೈಲಾದರೂ ಪರಮಾನಂದದಿಂದ ಸ್ವೀಕರಿಸುತ್ತೇನೆ. ಹುಟ್ಟಿನಿಂದ ಸಾವಿನವರೆಗೂ ರಾಮನಾಮ ಜಪಿಸುತ್ತೇನೆ, ಇದಕ್ಯಾಕೆ ದಾಕ್ಷಿಣ್ಯ? ನಾನು ಒಂದಲ್ಲ, ಎರಡಲ್ಲ ಸಾವಿರ ಬಾರಿ ಹೇಳ್ತೇನೆ ‘ರಾಮಲಲಾ ಘರ ಆಯೇಂಗೇ ಮಂದಿರ ವಹೀ ಬನಾಯೇಂಗೇ’, ‘ಗರ್ವ ಸೇ ಕಹೋ ಹಮ್ ಹಿಂದೂ ಹೈ’.

-ಇಂಥ ಪ್ರಖರ ಭಾಷಣ ಯಾರದ್ದಾಗಿರಬಹುದು ಎಂಬ ಅಂದಾಜು ನಿಮಗಾಗಿರಬಹುದು. ರಾಮ ಜನ್ಮಭೂಮಿ ಆಂದೋಲನದಲ್ಲಿ ಸಕ್ರಿಯ ಪಾತ್ರ ವಹಿಸಿರುವ ಬಿಜೆಪಿಯ ಬೆಂಕಿಚೆಂಡು, ಕೇಂದ್ರ ಜಲ ಸಂಪನ್ಮೂಲ ಮತ್ತು ಗಂಗಾ ನದಿ ಶುದ್ಧೀಕರಣ ವಿಭಾಗದ ಸಚಿವೆ ಉಮಾಭಾರತಿಯವರ ಸಿಡಿಗುಂಡಿದು. ಹೇಳಬೇಕಾದ್ದನ್ನು ಮುಲಾಜಿಲ್ಲದೆ ಹೇಳುತ್ತಾರೆ. ಅದಕ್ಕೆಂದೆ, ಕಮಲ ಪಾಳಯದಲ್ಲಿ ‘ಫೈರ್​ಬ್ರಾಂಡ್ ನಾಯಕಿ’ ಎಂದೇ ಹೆಸರುವಾಸಿ. ‘2019ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದು ಘೋಷಿಸುವ ಮೂಲಕ ಉಮಾ ರಾಜಕೀಯ ಅಂಗಳದಲ್ಲಿ ಸಂಚಲನ ಮೂಡಿಸಿದ್ದಾರೆ. ಅವರ ಇಂಥ ನಿರ್ಧಾರದ ಹಿಂದೆ ಬಲವಾದ ಕಾರಣವೂ ಇದೆ ಎನ್ನಿ. ಗಂಗಾ ನದಿ ಶುದ್ಧೀಕರಣ ಮತ್ತು ರಾಮ ಮಂದಿರ ಆಂದೋಲನಕ್ಕೆ ಬಲ ತುಂಬಲು ಮುಂದಿನ ಒಂದೂವರೆ ವರ್ಷ ಪೂರ್ತಿ ಸಮಯ ಮೀಸಲಿಡಲಿದ್ದು, ಜನವರಿ 15ರಿಂದ ಗಂಗಾನದಿ ತೀರ ಪ್ರದೇಶಗಳಲ್ಲಿ ಯಾತ್ರೆ ಆರಂಭಿಸಲಿದ್ದಾರೆ. ಹಾಗಂತ, ರಾಜಕೀಯ ಸಂನ್ಯಾಸ ಸ್ವೀಕರಿಸಿಲ್ಲ. ‘2020ರ ಬಳಿಕದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುತ್ತೇನೆ. ಕೊನೆ ಉಸಿರಿನವರೆಗೂ ರಾಜನೀತಿಯಲ್ಲಿ ಇರುತ್ತೇನೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಉಮಾಭಾರತಿಗೆ ವಾಕ್ಪಟುತ್ವ ಸಿದ್ಧಿಸಿದ್ದು ಬಾಲ್ಯದಲ್ಲೇ. 16-17ನೇ ವಯಸ್ಸಿನಲ್ಲೇ ರಾಮಕಥಾ ವಾಚಕಿ, ನಿರೂಪಕಿಯಾಗಿ ಪ್ರವಚನ ನೀಡುವಾಗ ರಾಮನ ಕುರಿತು ಮಾತಾಡುತ್ತ ಅದೆಷ್ಟು ಭಾವಪರವಶರಾಗುತ್ತಿದ್ದರೆಂದರೆ ನೆರೆದ ಜನರೆಲ್ಲ ಮಂತ್ರಮುಗ್ಧಗೊಳ್ಳುತ್ತಿದ್ದರು. ‘ಓರ್ವ ಯುವತಿ ತುಂಬ ಚೆನ್ನಾಗಿ ಪ್ರವಚನ ನೀಡುತ್ತಾಳೆ’ ಎಂಬ ಸುದ್ದಿ ಹಬ್ಬಿದ ಪರಿಣಾಮ ಉಮಾಭಾರತಿ ಊರೂರು, ರಾಜ್ಯಗಳನ್ನು ಸುತ್ತುತ್ತ ಪ್ರವಚನ ನೀಡತೊಡಗಿದರು. ರಾಮನಾಮ, ರಾಮಧ್ಯಾನ ಇವೆರಡೇ ಮಂತ್ರವಾಗಿದ್ದಾಗ ರಾಜಮಾತೆ ವಿಜಯರಾಜೇ ಸಿಂಧಿಯಾ ಕಣ್ಣಿಗೆ ಬಿದ್ದರು ಉಮಾ. ಈ ಹುಡುಗಿಯಲ್ಲಿ ಏನೋ ಶಕ್ತಿ ಇದೆ, ಜನರನ್ನು ಸೆಳೆಯುವ ಸಾಮರ್ಥ್ಯ ಇದೆ ಎಂದು ಮನಗಂಡ ಸಿಂಧಿಯಾ ಅವರು ಉಮಾರ ಮನವೊಲಿಸಿ ರಾಜಕೀಯಕ್ಕೆ ಕರೆತಂದರು. ಬಿಜೆಪಿ ಮೂಲಕವೇ ರಾಜಕೀಯ ಇನಿಂಗ್ಸ್ ಆರಂಭಗೊಂಡಿತು. ಅದಾಗಲೇ ಉಮಾ ಎಷ್ಟು ಪ್ರಸಿದ್ಧಿ ಗಳಿಸಿದ್ದರೆಂದರೆ 25ನೇ ವಯಸ್ಸಿನಲ್ಲೇ (1984) ಮೊದಲ ಬಾರಿ ಲೋಕಸಭೆ ಚುನಾವಣೆ ಸ್ಪರ್ಧಿಸಿದರು. ಚುನಾವಣೆಯಲ್ಲಿ ಸೋತರೂ ಉಮಾ ಜನಪ್ರಿಯತೆ ಗ್ರಾಫ್ ಏರಿತ್ತು.

1989ರಲ್ಲಿ ಮಧ್ಯಪ್ರದೇಶದ ಖಜುರಾಹೋ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದ ಅವರು ಸ್ವಲ್ಪ ಸಮಯದಲ್ಲೇ ಬಿಜೆಪಿಯ ಪ್ರಮುಖ ವಲಯದಲ್ಲಿ ಗುರುತಿಸಿಕೊಂಡರು. 1991, 1996, 1998ರಲ್ಲಿಯೂ ಲೋಕಸಭೆಯಲ್ಲಿ ಖಜುರಾಹೋ ಕ್ಷೇತ್ರ ಪ್ರತಿನಿಧಿಸಿ 1999ರಲ್ಲಿ ಭೋಪಾಲ್ ಕ್ಷೇತ್ರದಿಂದ ಗೆದ್ದರು. 1992 ಉಮಾ ಬದುಕು ಮಹತ್ವದ ತಿರುವು ಪಡೆದ ವರ್ಷ. ಲಾಲಕೃಷ್ಣ ಆಡ್ವಾಣಿಯವರ ರಾಮ ರಥಯಾತ್ರೆ ಬಳಿಕ ವಿಶ್ವ ಹಿಂದು ಪರಿಷತ್ ನಡೆಸಿದ ರಾಮ ಜನ್ಮಭೂಮಿ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಡಿಸೆಂಬರ್ 6ರಂದು ಅಯೋಧ್ಯೆಯ ವಿವಾದಿತ ಕಟ್ಟಡ ಉರುಳಿದಾಗ ಉಮಾ ಅದೇ ಸ್ಥಳದಲ್ಲಿದ್ದರು. ಹಾಗಾಗಿಯೇ, ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದ ಸಂಬಂಧ ಸುಪ್ರೀಂಕೋರ್ಟ್​ನಲ್ಲಿ ಇನ್ನೂ ನಡೆಯುತ್ತಿರುವ ವಿಚಾರಣೆಯಲ್ಲಿ ಉಮಾಭಾರತಿ ಆರೋಪಿಯಾಗಿದ್ದಾರೆ. ‘ಶ್ರೀರಾಮಲಲಾ ಘರ ಆಯೇಂಗೆ, ಮಂದಿರ ವಹೀ ಬನಾಯೇಂಗೆ’ ಎಂದು ಉಮಾ ಹಾಕಿದ ಘೋಷಣೆ ಅಯೋಧ್ಯೆಯ ಲಕ್ಷಾಂತರ ಕರಸೇವಕರಲ್ಲಿ ಸ್ಪೂರ್ತಿ ತುಂಬಿತು. ಈ ಕರಸೇವೆಯಿಂದ ಉಮಾ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದರು.

ಹಲವು ಪ್ರತಿರೋಧಗಳ ಮಧ್ಯೆಯೇ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ (1994ರ ಆಗಸ್ಟ್) ಉಮಾ ನಂತರ ಬಂಧನಕ್ಕೊಳಗಾದರು. ಅಲ್ಲದೆ, 2004ರಲ್ಲಿ ಮತ್ತೆ ಬಂಧನದ ವಾರೆಂಟ್ ಬಂದಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ‘ಭಾರತ ಮಾತಾ ಕೀ ಜೈ’ ಘೋಷಣೆ ಮೊಳಗಿಸಿದರು. 2003ರಲ್ಲಷ್ಟೇ ಮಧ್ಯಪ್ರದೇಶದ ಬಿಜೆಪಿ ನೇತೃತ್ವ ವಹಿಸಿ, ವಿಧಾನಸಭೆ ಚುನಾವಣೆಗಾಗಿ ಬಿರುಸಿನ ಪ್ರಚಾರ ನಡೆಸಿದ್ದ ಅವರು ಪಕ್ಷಕ್ಕೆ ಸ್ಪಷ್ಟ ಬಹುಮತ ದೊರಕಿಸಿಕೊಟ್ಟಿದ್ದರು. ಆಗ, ಉಮಾ ಸಾಮರ್ಥ್ಯ ಅರಿತ ಕೇಂದ್ರ ನಾಯಕತ್ವ ಮುಖ್ಯಮಂತ್ರಿಯನ್ನಾಗಿ ಮಾಡಿತಾದರೂ, ಎಂಟೇ ತಿಂಗಳಲ್ಲಿ ಈದ್ಗಾ ಪ್ರಕರಣ ಸಂಬಂಧ ರಾಜೀನಾಮೆ ನೀಡಬೇಕಾಯಿತು. ಆಗ ‘ಜನರಿಗೆ ನೀಡಿದ ಎಲ್ಲ ಆಶ್ವಾಸನೆಗಳನ್ನು ಈಡೇರಿಸಲು ಆಗಿಲ್ಲ. ಇದಕ್ಕಾಗಿ ರಾಜ್ಯದ ಜನರ ಕ್ಷಮೆ ಕೋರುತ್ತೇನೆ’ ಎಂದು ಭಾವುಕರಾಗಿ, ಬಹಿರಂಗವಾಗಿ ಕ್ಷಮಾಪಣೆ ಕೇಳಿದಾಗ ಎಷ್ಟೋ ಜನರು ರಾಜಕೀಯದಲ್ಲಿ ಇನ್ನೂ ಇಂಥ ಸಂವೇದನೆ ಉಳಿದುಕೊಂಡಿದೆಯಲ್ಲ ಎಂದು ಸಂತಸಪಟ್ಟರು.

1999ರಿಂದ 2002ರವರೆಗೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಪ್ರವಾಸೋದ್ಯಮ, ಯುವಜನ ಮತ್ತು ಕ್ರೀಡೆ, ಕಲ್ಲಿದಲು ಮತ್ತು ಗಣಿಗಾರಿಕೆ ಸೇರಿದಂತೆ ರಾಜ್ಯ ಮತ್ತು ಕ್ಯಾಬಿನೆಟ್ ಸ್ತರದ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಬಿಜೆಪಿಯ ಹಿರಿಯ ನಾಯಕ ಆಡ್ವಾಣಿಯವರನ್ನು ಟೀಕಿಸಿದ್ದಕ್ಕಾಗಿ 2004ರಲ್ಲಿ ಪಕ್ಷದಿಂದ ಉಚ್ಚಾಟನೆಗೊಂಡ ಉಮಾ ಅವರದ್ದು 2005ರಲ್ಲಿ ‘ಘರ್ ವಾಪ್ಸಿ’ಆಯಿತು. ಅಲ್ಲದೆ, ಪಕ್ಷದ ಸಂಸದೀಯ ಮಂಡಳಿಯಲ್ಲಿ ಸ್ಥಾನ ಪಡೆದರು. ಅದೇ ವರ್ಷ, ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ನಿಯೋಜಿಸಿದ್ದಕ್ಕೆ ಮುನಿಸಿಕೊಂಡು ‘ಭಾರತೀಯ ಜನಶಕ್ತಿ ಪಾರ್ಟಿ’ ಎಂಬ ಪಕ್ಷ ಕಟ್ಟಿದರು. 2011ರ ಜೂನ್​ನಲ್ಲಿ ಮತ್ತೆ ಬಿಜೆಪಿಗೆ ವಾಪಸಾದ ಉಮಾ ಅವರಿಗೆ ಉತ್ತರ ಪ್ರದೇಶದಲ್ಲಿ ಪಕ್ಷದ ಸ್ಥಿತಿಯನ್ನು ಸುಧಾರಿಸುವ ಮಹತ್ವದ ಹೊಣೆಗಾರಿಕೆ ಲಭಿಸಿತು. ಆಗಲೇ ‘ಗಂಗಾ ಬಚಾವೋ’ ಅಭಿಯಾನ ಆರಂಭಿಸಿದ ಅವರು 2012ರಲ್ಲಿ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಹೋಬಾ ಜಿಲ್ಲೆಯ ಚಾರ್​ಖಾರಿ ಕ್ಷೇತ್ರದಿಂದ ಗೆದ್ದುಬಂದರು. 2014ರಲ್ಲಿ ಝಾನ್ಸಿ ಕ್ಷೇತ್ರದಿಂದ ಸ್ಪರ್ಧಿಸಿ 16ನೇ ಲೋಕಸಭೆ ಪ್ರವೇಶಿಸಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವೆಯಾಗಿ, ಗಂಗಾ ಶುದ್ಧೀಕರಣದ ಹೊಣೆ ಹೊತ್ತರು. ಈಗ ಮತ್ತೆ ರಾಮಧ್ಯಾನ ಮತ್ತು ಗಂಗಾ ಕೆಲಸದತ್ತ ಹೊರಳಲು ನಿರ್ಧರಿಸಿರುವ ಉಮಾ ಅವರಿಗೆ ಕರ್ನಾಟಕದೊಂದಿಗೆ ಹಳೆಯ ಮತ್ತು ಆಪ್ತತೆಯ ನಂಟು. ವಿಜಯರಾಜೆ ಸಿಂಧಿಯಾ ರಾಜಕೀಯ ದೀಕ್ಷೆ ನೀಡಿದ್ದರೆ ಸಂನ್ಯಾಸತ್ವದ ದೀಕ್ಷೆ ನೀಡಿದ್ದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮಿಗಳು. ಗುರುಗಳ ಬಗ್ಗೆ ಅಪಾರ ಗೌರವ ಇರಿಸಿಕೊಂಡಿರುವ ಉಮಾ ಕಾಲಕಾಲಕ್ಕೆ ಉಡುಪಿಗೆ ಭೇಟಿ ನೀಡಿ ಅವರ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳುತ್ತಾರೆ. ಈಗ ವಿಶ್ವೇಶತೀರ್ಥರಿಗೆ ಗುರುವಂದನೆ ಸಲ್ಲಿಸಲು ಮುಂದಾಗಿರುವ ಉಮಾ ಸ್ಪಷ್ಟ ನಿಲುವು, ರಾಜಿಯಾಗದ ಸ್ವಭಾವ, ಖಡಕ್ ಮಾತುಗಳಿಂದ ಜನಮಾನಸದ ಗಮನ ಸೆಳೆದಿದ್ದಾರೆ. ಈಗ ರಾಮ ಮಂದಿರ ಆಂದೋಲನ ಮತ್ತು ಗಂಗಾಯಾತ್ರೆ ಅವರ ಜೀವನಕ್ಕೆ ಯಾವ ತಿರುವು ಕೊಡಲಿದೆ ಎಂಬುದನ್ನು ಕಾದುನೋಡಬೇಕಿದೆ.

(ಲೇಖಕರು ವಿಜಯವಾಣಿ ಸಹಾಯಕ ಸುದ್ದಿ ಸಂಪಾದಕರು)

ಪ್ರತಿಕ್ರಿಯಿಸಿ: [email protected]]

Stay connected

278,745FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...