ಉಳವಿಯಲ್ಲಿ ಪೀಠ ಸ್ಥಾಪನೆ

ಕೂಡಲಸಂಗಮ::ಶಿವರಾತ್ರಿಯಂದು ಉಳವಿಯಲ್ಲಿ ಅಕ್ಕನಾಗಲಾಂಬಿಕಾ ಪೀಠ ಸ್ಥಾಪಿಸಿ ಅದರ ಪೀಠಾಧ್ಯಕ್ಷೆಯಾಗಿ ಮಾತೆ ದಾನೇಶ್ವರಿಯವರನ್ನು ನೇಮಿಸಲಾಗá-ವುದೆಂದು ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ ಹೇಳಿದರು.

32ನೇ ಶರಣ ಮೇಳದ 3ನೇ ದಿನ ಭಾನುವಾರ ರಾತ್ರಿ ನಡೆದ ಬಸವ ಧರ್ಮ ಪೀಠದ 27ನೇ ಪೀಠಾರೋಹಣ ಸಮಾರಂಭದಲ್ಲಿ 27ನೇ ವರ್ಷದ ಪೀಠಾರೋಹಣ ಸ್ವೀಕರಿಸಿ ಅವರು ಮಾತನಾಡಿದರು.

ಬಸವ ಧರ್ಮ ಪೀಠ ಅತ್ಯಂತ ಕಳಕಳಿಯಿಂದ ಕೂಡಿದ್ದು, ಸಾಧಕರು, ಭಕ್ತರು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕು. ಬಸವ ಧರ್ಮ ಪೀಠದಲ್ಲಿರುವ 21 ಜಂಗಮಮೂರ್ತಿಗಳು ನಿಷ್ಠೆಯಿಂದ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಸಂಸ್ಥೆ ಬಿಟ್ಟು ಹೋಗಬಾರದು. ಕೆಲವರ ಪ್ರಚೋದನೆಯಿಂದ ಹಿಂದೆ ಕೆಲ ಜಂಗಮಮೂರ್ತಿಗಳು ಸಂಸ್ಥೆ ಬಿಟ್ಟು ಹೋಗಿ ಇಂದು ಯಾವ ಸ್ಥಿತಿಯಲ್ಲಿದ್ದಾರೆ ಎಂಬá-ದು ಎಲ್ಲರಿಗೂ ತಿಳಿದ ವಿಷಯ. ಯಾವುದೇ ತೊಂದರೆಯಾದರೆ ಕೂಡಲಸಂಗಮದಲ್ಲಿ ಮಹಾದೇಶ್ವರ ಸ್ವಾಮೀಜಿ ಸಂರ್ಪಸಬೇಕು. ಎಲ್ಲಿಯೂ ಸಲ್ಲದವರು ಅವರ ಬಳಿ ಸಲ್ಲುತ್ತಾರೆ. ಜಗತ್ತಿನಲ್ಲಿ ಹಣ ತರಬಹುದು, ಆದರೆ ತ್ಯಾಗಿಗಳು ಸಿಗುವುದು ಕಷ್ಟ. ಆದ್ದರಿಂದ ತ್ಯಾಗ ಮಾಡುತ್ತೇನೆ ಎಂದು ಬಂದವರ ತಪ್ಪು ಹುಡುಕುವ ಬದಲು ಸಹನೆಯಿಂದ ತಿದ್ದುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.

38 ವರ್ಷಗಳ ಹಿಂದೆಯೇ ಧಾರವಾಡದಲ್ಲಿ ಅಕ್ಕಮಹಾದೇವಿ ಪೀಠ, 27 ವರ್ಷಗಳ ಹಿಂದೆ ಕೂಡಲಸಂಗಮ ಬಸವ ಧರ್ಮಪೀಠ, 18 ವರ್ಷಗಳ ಹಿಂದೆ ಬಸವ ಕಲ್ಯಾಣದಲ್ಲಿ ಅಲ್ಲಮಪ್ರಭು ಶೂನ್ಯ ಪೀಠ, 9 ವರ್ಷಗಳ ಹಿಂದೆ ಮಹಾರಾಷ್ಟ್ರದ ಅಲ್ಲಮಗಿರಿಯಲ್ಲಿ ಅಲ್ಲಮಪ್ರಭು ಯೋಗ ಪೀಠ, 8 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಚನ್ನಬಸವೇಶ್ವರ ಪೀಠ ಸ್ಥಾಪಿಸಿ ಧಾರ್ವಿುಕ ಕಾರ್ಯಗಳೊಂದಿಗೆ ಸಾಮಾಜಿಕ ಕಾರ್ಯ ಗಳನ್ನು ಮಾಡುತ್ತಿದೆ ಎಂದರು.

ಧಾರವಾಡದ ಅಕ್ಕಮಹಾದೇವಿ ಅನುಭಾವ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಗಂಗಾದೇವಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಪ್ರದಾಯವಾದಿಗಳ ವಿರೋಧದ ಮಧ್ಯೆ ಬಸವತತ್ತ್ವ ಪ್ರಚಾರ ಆರಂಭಿಸಿದವರು ಲಿಂಗಾನಂದ ಸ್ವಾಮೀಜಿಯವರು. ಬಸವ ಧರ್ಮ ಪೀಠ 40 ವರ್ಷದಿಂದ ಸಾಹಿತ್ಯ, ಪ್ರವಚನ ಮೂಲಕ ಸಮಾಜದಲ್ಲಿನ ಕಂದಾಚಾರ, ಮೂಢನಂಬಿಕೆ ಹೋಗಲಾಡಿಸá-ವ ಕಾರ್ಯ ಮಾಡá-ತ್ತಿದೆ ಎಂದು ತಿಳಿಸಿದರು. ಬಸವ ಧರ್ಮ ಪೀಠ ನಿಷ್ಠಾವಂತ ಭಕ್ತರಿಂದ ಹಾಗೂ ಪ್ರವಚನ, ಸಾಹಿತ್ಯದ ಮೂಲಕ 40 ವರ್ಷದಲ್ಲಿ ಬೆಳೆದಿದೆ. ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರು ಪ್ರತಿ ವಾರ ಬಸವ ಮಂಟಪಗಳಲ್ಲಿ ಸಾಮೂಹಿಕ ಲಿಂಗಪೂಜೆ, ಸಾಮೂಹಿಕ ಪ್ರಾರ್ಥನೆ ಮಾಡಬೇಕು. ವರ್ಷಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಬಸವ ಜ್ಯೋತಿ ಕಾರ್ಯಕ್ರಮ ಹಮ್ಮಿಕೊಳ್ಳ ಬೇಕು. ಸಂಪ್ರದಾಯವಾದಿಯಾಗುವುದಕ್ಕಿಂತ ಸತ್ಯವಾದಿ ಯಾಗಬೇಕು ಎಂದರು.

ಬಾಗಲಕೋಟೆ ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಶಿಧರ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ಬಸವ ಧರ್ಮ ಪೀಠದ ಜಂಗಮ ಮೂರ್ತಿಗಳು, ರಾಷ್ಟ್ರೀಯ ಬಸವ ದಳದ ಮುಖಂಡರಾದ ಜಹಿರಾಬಾದದ ಶಂಕ್ರಪ್ಪ ಪಾಟೀಲ, ತೆಲಂಗಾಣದ ವಿಜಯಕುಮಾರ ಪಟ್ನೆ, ಬೀದರದ ಕುಶಾಲರಾವ ಪಾಟೀಲ, ಹೈದರಾಬಾದದ ಕಾಶೀನಾಥ ಪಾಟೀಲ ಮತ್ತಿತರಿದ್ದರು. 8 ವರ್ಷದಿಂದ ಸಾಧಕನಾಗಿ ಕೆಲಸ ಮಾಡುತ್ತಿದ್ದ ಅಮೀನಗಡ ಅನೀಲನಿಗೆ ಅನಿಮಿಷನಾನಂದ ಸ್ವಾಮೀಜಿ ಎಂದು, 6 ವರ್ಷದಿಂದ ಸಾಧಕಿಯಾಗಿ ಸೇವೆ ಮಾಡುತ್ತಿದ್ದ ಚಿತ್ರದುರ್ಗದ ವಿಜಯಾಗೆ ಮಾತೆ ವಿಜಯಾದೇವಿ ಎಂದು ನಾಮಕರಣ ಮಾಡಿ ಮಾತೆ ಮಹಾದೇವಿಜಂಗಮದೀಕ್ಷೆ ನೀಡಿದರು.