VIDEO| ರೈಲಿನ ಧ್ವನಿ ಯಂತ್ರದಲ್ಲಿ ಅಶ್ಲೀಲ ಆಡಿಯೋ: ಟ್ರೋಲ್​ಗೆ ಗುರಿಯಾಯ್ತು ಸಹ ಪ್ರಯಾಣಿಕ ಸೆರೆ ಹಿಡಿದ ವಿಡಿಯೋ

ಲಂಡನ್​: ಇತ್ತೀಚೆಗೆ ಲಂಡನ್​ ಟ್ರೈನ್​ ಒಂದರಲ್ಲಿ ಪ್ರಯಾಣ ಬೆಳೆಸಿದ ಪ್ರಯಾಣಿಕರು ವಿಚಿತ್ರ ಅನುಭವಕ್ಕೆ ಒಳಗಾದ ಘಟನೆ ನಡೆದಿದೆ. ರೈಲು ಚಾಲಕ ಸಾರ್ವಜನಿಕ ಪ್ರಕಟಣಾ ಧ್ವನಿ ಯಂತ್ರದ ವ್ಯವಸ್ಥೆಯಲ್ಲಿ ಆಕಸ್ಮಿಕವಾಗಿ ಅಶ್ಲೀಲ ಆಡಿಯೋ ಪ್ಲೇ ಮಾಡಿ ಪೇಚಿಗೆ ಸಿಲುಕಿದ ಪ್ರಸಂಗ ಜರುಗಿದೆ.

ಆಡಿಯೋ ಪ್ಲೇ ಆದ ಪ್ರಾರಂಭದಲ್ಲಿ ಧ್ವನಿ ಯಂತ್ರದ ವ್ಯವಸ್ಥೆಯಿಂದ ಬರುತ್ತಿರುವ ಧ್ವನಿ ಚಾಲಕನ ಅರಿವಿಗೆ ಬಂದಿರಲಿಲ್ಲ. ಆದರೆ, ಯಾವಾಗ ಅಶ್ಲೀಲ ಆಡಿಯೋ ಪ್ರಯಾಣಿಕರ ಕಿವಿಗೆ ಬಿದ್ದು ಅವರು ನಗಲು ಶುರು ಮಾಡಿದರು ಎಚ್ಚೆತ್ತ ಚಾಲಕ ಅದನ್ನು ತೆಗೆದಿದ್ದಾನೆ.

ಇದೇ ವೇಳೆ ಟ್ರೈನ್​ನಲ್ಲಿದ್ದ ಪ್ರಯಾಣಿಕ ಪೌಲ್​ ಬ್ರಂಟನ್​ ಸಹ ಪ್ರಯಾಣಿಕರ ಪ್ರತಿಕ್ರಿಯೆಯನ್ನು ವಿಡಿಯೋ ಮಾಡಿದ್ದು, 30 ಸೆಕೆಂಡ್​ನ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಲಂಡನ್​ನ​ ದಕ್ಷಿಣ-ಪಶ್ಚಿಮ ರೈಲ್ವೆ ವಿಭಾಗವು ಘಟನೆ ಕುರಿತು ಪ್ರಯಾಣಿಕರಲ್ಲಿ ಕ್ಷಮೆ ಕೇಳಿದ್ದು, ತನಿಖೆಗೆ ಆದೇಶಿಸಿದೆ. ವೈರಲ್​ ಆಗಿರುವ ವಿಡಿಯೋ ಟ್ರೋಲ್​ಗೆ ದಾಳವಾಗಿದ್ದು, ನೆಟ್ಟಿಗರು ವಿಚಿತ್ರವಾಗಿ ಮೀಮ್ಸ್​ಗಳನ್ನು ಪೋಸ್ಟ್​ ಮಾಡಿದ್ದು, ಅವುಗಳು ಈ ಕೆಳಗಿನಂತಿವೆ. (ಏಜೆನ್ಸೀಸ್​)