ಮೂರೇ ವಾರದಲ್ಲಿ ಬ್ರಿಟನ್​ ಜನರಿಗೆ ಸಿಗಲಿದೆ ಕರೊನಾ ಲಸಿಕೆ; ತುರ್ತು ಬಳಕೆಗೆ ಕಾಯ್ದೆ ತಿದ್ದುಪಡಿ; ಭಾರತಕ್ಕೂ ಇದೆ ಅವಕಾಶ

blank

ಲಂಡನ್​: ಅತ್ಯುತ್ಕೃಷ್ಠ ಸುರಕ್ಷತಾ ಮಾನದಂಡ ಹಾಗೂ ಪರಿಣಾಮಕಾರಿಯಾಗಬಲ್ಲ ಕರೊನಾ ವೈರಸ್​ ನಿಗ್ರಹ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವುದಾಗಿ ಬ್ರಿಟನ್​ ಸರ್ಕಾರ ಘೋಷಿಸಿದೆ.ಇದರಿಂದಾಗಿ ಲಸಿಕೆಯು ಎಲ್ಲ ಸಾಮಾನ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಯುರೋಪಿಯನ್​ ರಾಷ್ಟ್ರಗಳ ಪರವಾನಗಿ ಪಡೆಯುವ ಮುನ್ನವೇ ಬ್ರಿಟನ್​ ಅದರ ತುರ್ತು ಬಳಕೆಗೆ ಅನುಮತಿ ನೀಡಲು ಸಾಧ್ಯವಾಗಲಿದೆ.

ಮಾನವ ಬಳಕೆಗೆ ಸುರಕ್ಷಿತ ಹಾಗೂ ಕೋವಿಡ್​ ವಿರುದ್ಧ ಪರಿಣಾಮಕಾರಿ ಎನಿಸಿದ ಲಸಿಕೆಗಷ್ಟೇ ವೈದ್ಯಕೀಯ ಹಾಗೂ ಆರೋಗ್ಯ ಉತ್ಪನ್ನಗಳ ನಿಯಂತ್ರಣಾ ಮಂಡಳಿ ತುರ್ತು ಪರವಾನಗಿ ನೀಡಬಹುದು ಎಂದು ಸರ್ಕಾರ ಮಾಹಿತಿ ನೀಡಿದೆ. ಇದಲ್ಲದೇ, ಲಸಿಕೆ ನೀಡಲು ಹೆಚ್ಚು ಮಾನವ ಸಂಪನ್ಮೂಲಕ್ಕೆ ತರಬೇತಿ ನೀಡಲಾಗುತ್ತದೆ. ಇದರಿಂದ ಎಲ್ಲ ಜನರಿಗೆ ಆದಷ್ಟೂ ಬೇಗ ಲಸಿಕೆ ನೀಡಲು ಸಾಧ್ಯವಾಗಲಿದೆ ಎಂದು ಗಾರ್ಡಿಯನ್​ನಲ್ಲಿ ಪ್ರಕಟಿಸಲಾಗಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ; ಶವ ಹೂಳೋಕೆ ಜಾಗವಿರಲಿಲ್ಲ; ಶವಾಗಾರಗಳೂ ಸಾಲಲಿಲ್ಲ; ಆದರೂ, ಲಾಕ್​ಡೌನ್​ ಇಲ್ಲದೇ ಕರೊನಾಗೆ ತಡೆ..! 

ಕೋವಿಡ್​ ಲಸಿಕೆ ಸಂಶೋಧನೆಯಲ್ಲಿ ಭಾರಿ ಪ್ರಗತಿ ಸಾಧಿಸಿದ್ದೇವೆ. ಇದು ಜನರ ಜೀವ ಉಳಿಸಲು ಶಕ್ತವಾಗಿದ್ದು, ಆರೋಗ್ಯ ಕಾರ್ಯಕರ್ತರನ್ನು ರಕ್ಷಿಸಬಲ್ಲುದು ಮಾತ್ರವಲ್ಲದೇ, ಸಾಮಾನ್ಯ ಸ್ಥಿತಿ ಮರುಕಳಿಸಲು ಸಹಕಾರಿಯಾಗಲಿದೆ ಎಂದು ಬ್ರಿಟನ್​ ಮುಖ್ಯ ಆರೋಗ್ಯಾಧಿಕಾರಿ ಪ್ರೊ. ಜೊನ್ನಾಥನ್​ ವ್ಯಾನ್​-ಟ್ಯಾಮ್​ ಹೇಳಿದ್ದಾರೆ.

ಪರಿಣಾಮಕಾರಿ ಲಸಿಕೆ ಸಂಶೋಧನಾ ಮಾತ್ರವಲ್ಲ, ಅದನ್ನೂ ಅಷ್ಟೇ ತ್ವರಿತವಾಗಿ ಜನರಿಗೆ ತಲುಪಿಸಬೇಕು. ಆದರೆ, ಇದಕ್ಕೆ ಕಠಿಣ ಸುರಕ್ಷತಾ ಮಾನದಂಡಗಳನ್ನು ಪಾಲಿಸಲೇಬೇಕು. ಇದರ ಹೊರತಾಗಿಯೂ ಲಸಿಕೆಯ ಸುರಕ್ಷತೆ ಹಾಗೂ ಕಾರ್ಯಕ್ಷಮತೆ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳದೇ ಇದನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆಗಳಾಗಿವೆ ಎಂದು ಅವರು ಹೇಳಿದ್ದಾರೆ.

ವೈದ್ಯರು, ಆರೋಗ್ಯ ಕ್ಷೇತ್ರದ ತಜ್ಞರು ನೀಡಿದ ಸಲಹೆಗಳನ್ವಯ ಮಾನವ ಔಷಧ ನಿಯಂತ್ರಣ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವ ಪ್ರಕ್ರಿಯೆಗಳಿಗೆ ಶುಕ್ರವಾರ ಚಾಲನೆ ದೊರೆತಿದೆ. ಇದು ಮೂರು ವಾರಗಳವರೆಗೆ ನಡೆಯಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ; ಕೋವಿಡ್​ಗಷ್ಟೇ ಅಲ್ಲ, ಎಲ್ಲ ಬಗೆ ಕರೊನಾಗೂ ಇದು ರಾಮಬಾಣ; ಕೇಂಬ್ರಿಡ್ಜ್​ ವಿವಿಯಿಂದ ಸಜ್ಜಾಗ್ತಿದೆ ಲಸಿಕೆ 

ಸದ್ಯ ಜಗತ್ತಿನಲ್ಲಿ 200ಕ್ಕೂ ಅಧಿಕ ಕರೊನಾ ವೈರಸ್​ ನಿಗ್ರಹ ಲಸಿಕೆಗಳ ಸಂಶೋಧನೆ ನಡೆಯುತ್ತಿದೆ. ಇದರಲ್ಲಿ 10ಕ್ಕೂ ಅಧಿಕ ಲಸಿಕೆಗಳು ಮಾನವ ಮೇಲೆ ಪ್ರಯೋಗ ಹಂತದಲ್ಲಿವೆ. ಅದರಲ್ಲೂ ಆಕ್ಸ್​ಫರ್ಡ್​ ವಿವಿ ಹಾಗೂ ಅಮೆರಿಕದ ಮಾಡೆರ್ನಾ ಸಂಸ್ಥೆಯ ಲಸಿಕೆ ಕೊನೆಯ ಹಂತದ ಪರೀಕ್ಷೆಯಲ್ಲಿವೆ. ಆಕ್ಸ್​ಫರ್ಡ್​ ವಿವಿ ಲಸಿಕೆಯನ್ನು ಅಂತಿಮ ಹಂತದಲ್ಲಿ 30,000 ಜನರ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಇದಾಗುತ್ತಿದ್ದಂತೆ, ಬಹುತೇಕ ತುರ್ತು ಬಳಕೆ ಅನುಮತಿ ಪಡೆಯುವ ಸಾಧ್ಯತೆಗಳಿವೆ.
ಇದನ್ನು, ಭಾರತದಲ್ಲಿ ಕೋವಿಶೀಲ್ಡ್​ ಹೆಸರಲ್ಲಿ ತಯಾರಿಸಲಾಗುತ್ತಿದೆ. ಬ್ರಿಟನ್​ ಬಳಿಕ ಭಾರತದಲ್ಲೂ ಇದರ ತುರ್ತು ಬಳಕೆಗೆ ಅನುಮತಿ ದೊರೆತರೆ ಅಚ್ಚರಿಯೇನಿಲ್ಲ.

ಶುರುವಾಯ್ತು 225 ರೂ. ಬೆಲೆಯ ಕರೊನಾ ಲಸಿಕೆ ಕ್ಲಿನಿಕಲ್​ ಟ್ರಯಲ್​; ಮೈಸೂರು ಸೇರಿ 17 ಕಡೆ ಪ್ರಯೋಗ

Share This Article

ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign

Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…

ಪೇನ್​ ಕಿಲ್ಲರ್ ಮಾತ್ರೆ​ vs ಜೆಲ್​… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel

Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…

ಹಾಗಲಕಾಯಿಯಲ್ಲಿನ ಕಹಿ ತೆಗೆಯುವುದೇಗೆ ಎಂದು ಆಲೋಚಿಸುತ್ತಿದ್ದೀರಾ; ನಿಮಗಾಗಿ ಈ ಸಿಂಪಲ್​ ಟ್ರಿಕ್ಸ್​ ​ | Health Tips

ಚಳಿಗಾಲದಲ್ಲಿ ಮಂಜಿನಿಂದಾಗಿ ಸೂರ್ಯನ ಬೆಳಕು ಕಡಿಮೆ ಇರುತ್ತದೆ. ಇದರಿಂದ ಜನರು ಹಾಗಲಕಾಯಿಯ ರುಚಿ ನೋಡುವುದಿಲ್ಲ. ಏಕೆಂದರೆ…