Friday, 16th November 2018  

Vijayavani

Breaking News

ದತ್ತಾಂಶ ದುರ್ಬಳಕೆ ಪ್ರಕರಣ: ಫೇಸ್​ಬುಕ್​ಗೆ 5 ಲಕ್ಷ ಪೌಂಡ್ಸ್​ ದಂಡ

Wednesday, 11.07.2018, 8:07 AM       No Comments

ಲಂಡನ್​: ದತ್ತಾಂಶವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಬಳಕೆದಾರರ ಮಾಹಿತಿಯನ್ನು ಕಾಪಾಡಲು ವಿಫಲವಾದ ಫೇಸ್​ಬುಕ್​ ಸಂಸ್ಥೆಗೆ ಬ್ರಿಟನ್​ ಸರ್ಕಾರ 5 ಲಕ್ಷ ಪೌಂಡ್ಸ್​ (6,63,000 ಅಮೆರಿಕನ್​ ಡಾಲರ್​) ದಂಡ ವಿಧಿಸಿದೆ ಎಂದು ಬ್ರಿಟನ್​ ಪಾರ್ಲಿಮೆಂಟ್​ನ ಮಾಧ್ಯಮ ಸಮಿತಿಯ ಅಧ್ಯಕ್ಷ ಡಾಮಿಯನ್ ಕಾಲಿನ್ಸ್ ತಿಳಿಸಿದ್ದಾರೆ.

ಕೇಂಬ್ರಿಜ್ ಅನಾಲಿಟಿಕಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್​ನ ಮಾಹಿತಿ ಆಯೋಗ ತನ್ನ ತನಿಖೆಯನ್ನು ಪೂರ್ಣಗೊಳಿಸಿದೆ. ತನಿಖೆಯಿಂದ ಫೇಸ್​ಬುಕ್​ ಕಂಪನಿ ಬಳಕೆದಾರರ ಮಾಹಿತಿಯನ್ನು ರಕ್ಷಿಸಲು ವಿಫಲವಾಗಿರುವುದು ಕಂಡು ಬಂದಿದೆ ಎಂದು ಡಾಮಿಯನ್​ ತಿಳಿಸಿದ್ದಾರೆ.

ಫೇಸ್​ಬುಕ್ ಬಳಕೆದಾರರ ದತ್ತಾಂಶ ಬಳಸಿಕೊಂಡು ಅಮೆರಿಕದ ಅಧ್ಯಕ್ಷೀಯ ಚುನಾವಣೆ(2016)ಯಲ್ಲಿ ಟ್ರಂಪ್ ಪರ ಕೆಲಸ ಮಾಡಿದ ಆರೋಪವನ್ನು ಫೇಸ್​ಬುಕ್ ಕಾರ್ಯವ್ಯಾಪ್ತಿಯಲ್ಲಿ ಬರುವ ಕೇಂಬ್ರಿಜ್ ಅನಾಲಿಟಿಕಾ ಎಂಬ ಸಂಸ್ಥೆ ಎದುರಿಸುತ್ತಿದೆ.

ಏನಿದು ಕೇಂಬ್ರಿಜ್​ ಅನಾಲಿಟಿಕಾ ಪ್ರಕರಣ?

ದತ್ತಾಂಶ ವಿಶ್ಲೇಷಣೆ ಮಾಡುವ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆ ಈ ಕೃತ್ಯದಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನಲಾಗಿದೆ. ಲಂಡನ್​ನ ದಿ ಅಬ್ಸರ್ವರ್ ಮತ್ತು ನ್ಯೂಯಾರ್ಕ್ ಟೈಮ್ಸ್​ನ ವರದಿಗಾರರು ಕುಟುಕು ಕಾರ್ಯಾಚರಣೆ ನಡೆಸಿ ಪ್ರಕಟಿಸಿದ ವರದಿ ಪ್ರಕಾರ, ಬಳಕೆದಾರರ ಅನುಮತಿ ಇಲ್ಲದೆ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆ ಅಂದಾಜು 5 ಕೋಟಿಗೂ ಹೆಚ್ಚು ಬಳಕೆದಾರರ ದತ್ತಾಂಶ ಸಂಗ್ರಹಿಸಿದೆ. ಇದನ್ನು ಬಳಸಿ ಕೊಂಡು 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪರ ಅಭಿಪ್ರಾಯ ಮೂಡಿಸಲು ಪ್ರಯತ್ನಿಸಿದೆ ಎಂದು ಆರೋಪಿಸಲಾಗಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top