Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಯೋಧನ ತಲೆಬುರುಡೆ ಹಿಂದಿರುಗಿಸಿ

Monday, 16.04.2018, 3:03 AM       No Comments

ಲಂಡನ್: ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಸಿಡಿದೆದ್ದ ಸೈನಿಕರು 1857ರಲ್ಲಿ ನಡೆಸಿದ ಪ್ರಥಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಲ್ಲಿಗೇರಿಸಲಾದ ಬಂಡಾಯದ ನಾಯಕ ಹವಾಲ್ದಾರ್ ಅಲಂ ಬೇಗ್​ನ ತಲೆಬುರುಡೆಯನ್ನು ಭಾರತಕ್ಕೆ ಹಿಂದಿರುಗಿಸಬೇಕು ಎಂದು ಬ್ರಿಟನ್​ನ ಇತಿಹಾಸ ತಜ್ಞ ಡಾ. ಕಿಮ್ ವ್ಯಾಗ್ನರ್ ಆಗ್ರಹಿಸಿದ್ದಾರೆ.

ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ (ಸಿಪಾಯಿ ದಂಗೆ) ಕಾರಣಕರ್ತರಲ್ಲೊಬ್ಬನಾದ ಬೇಗ್ ಹುತಾತ್ಮನಾಗಿ 160 ವರ್ಷಗಳಾಗಿದ್ದು, ಅವನ ತಲೆಬುರುಡೆಯನ್ನು ತಾಯ್ನಾಡಿಗೆ ಹಿಂದಿರುಗಿಸಲು ಇದು ಸಕಾಲ. ಈ ಮೂಲಕ ಆತನ ಆತ್ಮಕ್ಕೆ ಚಿರಶಾಂತಿ ದೊರೆಯುವಂತಾಗಬೇಕು ಎಂದು ಲಂಡನ್​ನ ಕ್ವೀನ್ ಮೇರಿ ಕಾಲೇಜಿನ ಬ್ರಿಟಿಷ್ ಚಕ್ರಾಧಿಪತ್ಯ ಇತಿಹಾಸ ವಿಭಾಗದ ಹಿರಿಯ ಉಪನ್ಯಾಸಕರೂ ಆಗಿರುವ ವ್ಯಾಗ್ನರ್ ಹೇಳಿದ್ದಾರೆ.

ಭೇಗ್ ಸಿಪಾಯಿ ಆಗಿದ್ದ ರೆಜಿಮೆಂಟ್ ಕಾನ್ಪುರ್​ದಲ್ಲಿ ಕೇಂದ್ರ ಸ್ಥಾನ ಹೊಂದಿತ್ತು. ಆದರೆ, ಬೇಗ್​ನ ತಲೆಬುರುಡೆಯನ್ನು ಭಾರತ ಮತ್ತು ಪಾಕ್ ಗಡಿಯ ರಾವಿ ನದಿ ತೀರದಲ್ಲಿ ಸಮಾಧಿ ಮಾಡಬೇಕು. ಏಕೆಂದರೆ, ಈ ಪ್ರದೇಶದಲ್ಲಿ ನಡೆದ ತ್ರಿಮ್ಮು ಘಾಟ್ ಯುದ್ಧದಲ್ಲಿ ಬೇಗ್ ಬ್ರಿಟಿಷ್​ರ ಪರವಾಗಿ ಹೋರಾಡಿದ್ದ ಧೀರ ಯೋಧ ಎಂದು‘ದಿ ಸ್ಕಲ್ ಆಫ್ ಅಲಂ ಬೇಗ್: ದಿ ಲೈಫ್ ಆಂಡ್ ಡೆತ್ ಆಫ್ ರೆಬೆಲ್ ಆಫ್ 1857’ ಪುಸ್ತಕದಲ್ಲಿ ವ್ಯಾಗ್ನರ್ ಹೇಳಿದ್ದಾರೆ. ರೆಜಿಮೆಂಟ್ ಹುಕ್ಕುಂ ವಿರುದ್ಧ ಸಿಡಿದೆದ್ದ ಬೇಗ್​ನನ್ನು ನೇಣಿಗೆ ಹಾಕಲಾಯಿತು. ಕ್ಯಾಪ್ಟನ್ ಎ.ಆರ್.ಕ್ಯಾಸ್ಟೆಲ್ಲೊ ಆತನ ತಲೆಯನ್ನು ಕಡಿದು ಇಂಗ್ಲೆಂಡ್​ಗೆ ತಂದಿದ್ದ. ಈ ತಲೆಯನ್ನು ಕೆಂಟ್ ಪ್ರಾಂತ್ಯದ ಕರಾವಳಿ ವಾಲ್ಮರ್ ಪಟ್ಟಣದ ಪಬ್​ವೊಂದರಲ್ಲಿ ಇರಿಸಲಾಗಿತ್ತು ಎಂದು ವ್ಯಾಗ್ನರ್ ತಿಳಿಸಿದ್ದಾರೆ. -ಪಿಟಿಐ

Leave a Reply

Your email address will not be published. Required fields are marked *

Back To Top