ಯುಕೆಯಲ್ಲಿ 164 ವರ್ಷಗಳ ಬಳಿಕ ಚಂಡಮಾರುತದ ಮುನ್ಸೂಚನೆ

ಬ್ರಿಟನ್‌: ಕಳೆದ 164 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬ್ರಿಟನ್‌ನ ಹವಾಮಾನ ಇಲಾಖೆ ಚಂಡಮಾರುತದ ಕುರಿತು ಮುನ್ನೆಚ್ಚರಿಕೆಯನ್ನು ಘೋಷಿಸಿದೆ.

ನೈರುತ್ಯ ಇಂಗ್ಲೆಂಡ್‌ ಮತ್ತು ವೇಲ್ಸ್‌ ಭಾಗಗಳಲ್ಲಿ ಆಲಿಕಲ್ಲು, ಮಿಂಚು ಸಹಿತ ಭಾರಿ ಮಳೆಯಾಗಲಿದ್ದು, ಬ್ರಿಟನ್‌ನಲ್ಲಿ ಹೆಚ್ಚಿನ ಪ್ರಮಾಣದ ಶುಷ್ಕ ಬಿಸಿ ಗಾಳಿಯು ಮುಂದುವರಿಯುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಚಂಡಮಾರುತ ಕುರಿತಂತೆ ನಿವಾಸಿಗಳಿಗೆ ಮುನ್ನೆಚ್ಚರಿಕೆ ನೀಡಲು ಕಳೆದ ತಿಂಗಳಷ್ಟೇ ಹೊಸ ಸೇವೆಯನ್ನು ಪರಿಚಯಿಸಿದ್ದು, ನಿರೀಕ್ಷಿತ ಮಿಂಚು, ಗುಡುಗು ಕುರಿತಂತೆ ಎಚ್ಚರಿಕೆ ನೀಡುತ್ತಿದೆ.

ಇದಲ್ಲದೆ, ನಿರೀಕ್ಷಿತ ಪ್ರದೇಶಗಳಲ್ಲಿ ಬೀಸಲಿರುವ ಚಂಡಮಾರುತದಿಂದಾಗಿ ಅಪಾಯಕಾರಿ ಚಲನ ವಲನಗಳ ಬಗ್ಗೆಯೂ ಎಚ್ಚರಿಕೆ ನೀಡಿದೆ. ಈಗಾಗಲೇ ಅತಿ ಹೆಚ್ಚು ಉಷ್ಣತೆ ಮತ್ತು ಬಿಸಿಲಿರುವ ಪ್ರದೇಶಗಳಿಂದ ಅಲ್ಲಿನ ನಿವಾಸಿಗಳನ್ನು ಬ್ರಿಟನ್‌ನ ಕರಾವಳಿ ಪಟ್ಟಣಗಳು ಮತ್ತು ನಗರಗಳಿಗೆ ಕರೆತರಲಾಗಿದೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪರಿಸರ ನಾಶದಿಂದಾಗಿ ಪ್ರಪಂಚದ ವಿವಿಧ ಭಾಗಗಳಲ್ಲಿ ವಾತಾವರಣದಲ್ಲಿ ಅಸಾಮಾನ್ಯ ವಿದ್ಯಮಾನಗಳು ಆಗಾಗ್ಗೆ ವರದಿಯಾಗುತ್ತಲೇ ಇವೆ. (ಏಜೆನ್ಸೀಸ್‌)