ನೀರವ್​ ಮೋದಿ ಬ್ರಿಟನ್​ನಲ್ಲೇ ವಾಸ್ತವ್ಯ: ವಾಪಸ್​ ಕರೆತರಲು ಸಿಬಿಐ ಸಿದ್ಧತೆ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕುಗಳಿಗೆ 13 ಸಾವಿರ ಕೋಟಿಗೂ ಹೆಚ್ಚು ಮೊತ್ತ ವಂಚಿಸಿರುವ ವಜ್ರೋದ್ಯಮಿ ನೀರವ್ ಮೋದಿ ತಮ್ಮ ದೇಶದಲ್ಲೇ ನೆಲೆಸಿದ್ದಾನೆ ಎಂದು ಬ್ರಿಟನ್​ ದೃಢಪಡಿಸಿದೆ.

ನೀರವ್​ ಮೋದಿ ಬ್ರಿಟನ್​ನಲ್ಲಿರುವ ದೃಢಪಡಿಸುತ್ತಿದ್ದಂತೆ ಸಿಬಿಐ ನೀರವ್​ನನ್ನು ಗಡಿಪಾರು ಮಾಡುವಂತೆ ಬ್ರಿಟನ್​ಗೆ ಮನವಿ ಸಲ್ಲಿಸಲು ಸಿದ್ಧತೆ ಆರಂಭಿಸಿದೆ.

ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಹಗರಣ ಬೆಳಕಿಗೆ ಬರುತ್ತಿದ್ದಂತೆ ಜಾರಿ ನಿರ್ದೇಶನಾಲಯ ನೀರವ್​ ಮೋದಿ ಮತ್ತು ಆತನ ಸಂಬಂಧಿ ಮೆಹುಲ್​ ಚೋಕ್ಸಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇವರಿಬ್ಬರ ವಿರುದ್ಧ ಜಾರಿ ನಿರ್ದೇಶನಾಲಯ ಜಾಮೀನು ರಹಿತ ವಾರಂಟ್​ ಹೊರಡಿಸಿದೆ. ಜತೆಗೆ ಇಂಟರ್​ಪೋಲ್​ ಸಹ ನೀರವ್​ ಮೋದಿ ಬಂಧನಕ್ಕೆ ರೆಡ್​ ಕಾರ್ನರ್​ ನೋಟಿಸ್​ ಜಾರಿ ಮಾಡಿದೆ. (ಏಜೆನ್ಸೀಸ್​)