More

    ನಿಗಿದತ ಸೂಚಿಯಲ್ಲಿ ಇಲ್ಲದ ಕೋರ್ಸ್​ಗಳನ್ನು ಆರಂಭಿಸಿ ಪ್ರಮಾಣಪತ್ರ ನೀಡಿದರೆ ಶಿಸ್ತುಕ್ರಮ: ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ಎಚ್ಚರಿಕೆ

    ನವದೆಹಲಿ: ಯೂನಿವರ್ಸಿಟಿಗಳು ಮತ್ತು ಶಿಕ್ಷಣ ಸಂಸ್ಥೆಗಳು ನಿಗಿದತ ಸೂಚಿಯಲ್ಲಿ ಇಲ್ಲದ ಕೋರ್ಸ್​ಗಳನ್ನು ಆರಂಭಿಸಿ ಪ್ರಮಾಣ ಪತ್ರ ನೀಡುವಂತಿಲ್ಲ. ಹಾಗೊಮ್ಮೆ ನೀಡಿದರೆ ಅದಕ್ಕೆ ಮಾನ್ಯತೆ ಇರುವುದಿಲ್ಲ. ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಎಚ್ಚರಿಸಿದೆ.

    ಕೆಲವು ಯೂನಿವರ್ಸಿಟಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಅನ್​ಸ್ಪೆಸಿಫೈಡ್​ ಡಿಗ್ರಿಗಳನ್ನು ಕೊಡುತ್ತಿದ್ದು, ಇದರಿಂದ ತೊಡಕುಗಳು ಉಂಟಾಗಿವೆ. ವಿದ್ಯಾರ್ಥಿಗಳು ಕಾನೂನು ಸಮರ ನಡೆಸುವಂತಾಗಿದೆ. ಅಲ್ಲದೆ, ಅವರ ಭವಿಷ್ಯಕ್ಕೂ ತೊಂದರೆ ಎದುರಾಗಿದೆ. ಯುಜಿಸಿ ಕಾಯ್ದೆಯಲ್ಲಿ ಇಂಥವಕ್ಕೆ ಅವಕಾಶವಿಲ್ಲ. ಯುಜಿಸಿ ಮಾನ್ಯತೆ ಹೊಂದಿದ ಸಂಸ್ಥೆಗಳು ಇದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ಯುಜಿಸಿ ಪತ್ರ ಮುಖೇನ ಎಲ್ಲ ವಿವಿಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ತಿಳಿಸಿದೆ.

    ಯುಜಿಸಿ ಈಗಾಗಲೇ ಪ್ರಕಟಿಸಿರುವ ಕೋರ್ಸ್​​ಗಳ ಪಟ್ಟಿಯ ಚೌಕಟ್ಟಿಗೆ ಸೀಮಿತವಾಗಿ ಶಿಕ್ಷಣ ಸಂಸ್ಥೆಗಳು ಮತ್ತು ವಿವಿಗಳು ಕಾರ್ಯನಿರ್ವಹಿಸಬೇಕು. ಒಂದೊಮ್ಮೆ ಹೊಸ ಕೋರ್ಸ್​ ಆರಂಭಿಸಬೇಕು ಎಂಬ ಇಚ್ಛೆ ಯಾವುದಾದರೂ ಸಂಸ್ಥೆಗೆ ಇದ್ದರೆ ಅದು ಆರು ತಿಂಗಳು ಮುಂಚಿತವಾಗಿ ಯುಜಿಸಿಯಿಂದ ಅನುಮತಿ ಪಡೆದಿರಬೇಕು ಎಂದು ಯುಜಿಸಿ ಹೇಳಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts