More

    ಮೇಳದಲ್ಲಿ 15 ಸಾವಿರಕ್ಕೂ ಹೆಚ್ಚು ನೋಂದಣಿ

    ಮೈಸೂರು: ವಿವಿಧ ಇಲಾಖೆಗಳ ಸಹಯೋಗದಲ್ಲಿ ಶಾಸಕ ಎಸ್.ಎ. ರಾಮದಾಸ್ ನೇತೃತ್ವದಲ್ಲಿ ನಗರದಲ್ಲಿ ಆಯೋಜಿಸಿದ್ದ ಯುವಜನರಲ್ಲಿ ಕೌಶಲ ತುಂಬಿ ಉದ್ಯೋಗ ಸೃಷ್ಟಿಸುವ ವಿನೂತನ ಮೇಳ ಸಮಾಪ್ತಿಗೊಂಡಿದ್ದು, ಸರಿಸುಮಾರು 65 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿದ್ದಾರೆ.


    ಮೇಳವು ನಾಲ್ಕು ದಿನಗಳ ಕಾಲ ವಿದ್ಯಾರಣ್ಯಪುರಂನ ಒಕ್ಕಲಿಗರ ವಿದ್ಯಾರ್ಥಿನಿಲಯ, ವಿಶ್ವೇಶ್ವರನಗರದ ನಿತ್ಯಾನಂದ ಕಲ್ಯಾಣ ಮಂಟಪ, ಗನ್‌ಹೌಸ್ ಬಳಿಯ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು. ಮೇಳದಲ್ಲಿ 8ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು, ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಓದುತ್ತಿರುವ ವಿದ್ಯಾರ್ಥಿಗಳು, ಹತ್ತನೇ ತರಗತಿ ಅಪೂರ್ಣಗೊಳಿಸಿದವರು, ಸಣ್ಣಪುಟ್ಟ ಉದ್ಯೋಗ ಮಾಡುತ್ತಿರುವವರು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಹಾಗೂ ಉತ್ಪನ್ನ ಕ್ಷೇತ್ರದಲ್ಲಿ ಆಸಕ್ತಿ ತೋರುವ ಸೀಶಕ್ತಿ ಸಂಘಗಳ ಸಾವಿರಾರು ಜನ ಭಾಗವಹಿಸಿ ಹೆಸರು ನೋಂದಾಯಿಸಿಕೊಂಡರು.


    ನಗರದ ಸಮರ್ಥ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಮೇಳದ ಸಮಾರೋಪ ಸಮಾರಂಭ ನಡೆಯಿತು. ಪಾಲಿಕೆ ಸದಸ್ಯ ಶಿವಕುಮಾರ್ ಮಾತನಾಡಿ, ಕಳೆದ 4 ದಿನದಿಂದ ಕಾರ್ಯಕ್ರಮವನ್ನು ರಾಮದಾಸ್ ಆಯೋಜಿಸಿದ್ದರು. ರಾಮದಾಸ್ ಅವರು ಏನೇ ಮಾಡಿದರೂ ಅದು ವಿಶೇಷವಾಗಿರುತ್ತದೆ. ಮೋದಿ ಯುಗ್ ಉತ್ಸವದ ಸಮಯದಲ್ಲಿ ಸುಮಾರು 71 ಸಾವಿರ ಜನಕ್ಕೆ ಒಂದಲ್ಲಾ ಒಂದು ಸರ್ಕಾರದ ಯೋಜನೆಯನ್ನು ತಲುಪಿಸಿದ್ದಾರೆ. ಇದೀಗ ವಿನೂತನ ಮೇಳದ ಮೂಲಕ ಅನೇಕರಿಗೆ ನೆರವಾದರು ಎಂದರು.


    ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ದೇಶಕ್ಕೆ ಒಂದು ಹೊಸ ಮಾದರಿಯನ್ನು ನೀಡಬೇಕು ಎಂಬುದಕ್ಕೆ ಈ ವಿಶೇಷವಾದ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಒಂದು ಕಾರ್ಯಕ್ರಮ ಆಗಬೇಕಾದರೆ ಅದರ ಹಿಂದೆ ನೂರಾರು ಜನರ ಪರಿಶ್ರಮ ಇರುತ್ತದೆ. ಈ ಉದ್ಯೋಗ ನೋಂದಣಿ ಕಾರ್ಯಕ್ರಮ ಯಶಸ್ಸಿಗೆ ಕೂಡ ಅದರ ಹಿಂದೆ ಕೆಲಸ ಮಾಡಿರುವ ಕಾರ್ಯಕರ್ತರು, ಅಧಿಕಾರಿಗಳು ಕಾರಣೀಭೂತರಾಗಿದ್ದಾರೆ ಎಂದರು.
    ಮೇಯರ್ ಸುನಂದಾ ಪಾಲನೇತ್ರ ಮಾತನಾಡಿದರು. ಪಾಲಿಕೆ ಸದಸ್ಯರಾದ ಶಾರದಮ್ಮ ಈಶ್ವರ್, ಶಾಂತಮ್ಮ ವಡಿವೇಲು, ಚಂಪಕ, ಬಿಜೆಪಿ ಕೆ.ಆರ್. ಕ್ಷೇತ್ರದ ಅಧ್ಯಕ್ಷ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ಓಂಶ್ರೀನಿವಾಸ್ ಇತರರಿದ್ದರು.

    65 ಸಾವಿರಕ್ಕೂ ಹೆಚ್ಚು ಜನ ಭಾಗಿ:
    ನಾಲ್ಕು ದಿನಗಳ ಕಾಲ ಆಯೋಜಿಸಿದ್ದ ಮೇಳದಲ್ಲಿ 65 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಯುವಕರು, ನಿರುದ್ಯೋಗಿಗಳು ಭಾಗಿಯಾಗಿದ್ದಾರೆ. ಈ ಪೈಕಿ 15 ಸಾವಿರಕ್ಕೂ ಹೆಚ್ಚು ಜನ ಕೌಶಲಾಭಿವೃದ್ಧಿ, ಸ್ವಯಂಉದ್ಯೋಗದಡಿ ನೋಂದಣಿಯಾಗಿದ್ದಾರೆ.


    ಮೊದಲ ದಿನ 4 ಸಾವಿರ, ಎರಡನೇ ಮತ್ತು ಮೂರನೇ ದಿನ ತಲಾ 3 ಸಾವಿರ ಹಾಗೂ ನಾಲ್ಕನೇ ದಿನ 5 ಸಾವಿರಕ್ಕೂ ಹೆಚ್ಚು ಜನ ನೋಂದಣಿಯಾಗಿದ್ದಾರೆ.

    ಕೋಟ್

    ಕಳೆದ 4 ದಿನಗಳಿಂದ ಆಯೋಜಿಸಿದ್ದ ಉದ್ಯೋಗ ಮೇಳ ಕಾರ್ಯಕ್ರಮ ಯಶಸ್ವಿಯಾಗಿದೆ. ಪ್ರಧಾನಿ ಮೋದಿ ಕೌಶಲಾಭಿವೃದ್ಧಿಗೆ ಒತ್ತು ನೀಡಿದ್ದಾರೆ. ರಾಜ್ಯದ ಎಲ್ಲ ಶಾಸಕರೂ ಇದೇ ಮಾದರಿಯಲ್ಲಿ ಉದ್ಯೋಗ, ಕೌಶಲ ಮೇಳವನ್ನು ಹಮ್ಮಿಕೊಂಡರೆ ನಿರುದ್ಯೋಗ ಸಮಸ್ಯೆಯೇ ದೂರ ಮಾಡಬಹುದು. ಶಾಸಕ ರಾಮದಾಸ್ ಅವರು ಒಂದು ಮಾದರಿ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
    ಸುನಂದಾ ಪಾಲನೇತ್ರ, ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts