ಗೂಗಲ್ ಗೇಮ್ಸ್ ಸಮಾವೇಶಕ್ಕೆ ಉಡುಪಿಯ ಶಿಲ್ಪಾ ಭಟ್ ಆಯ್ಕೆ

ಉಡುಪಿ: ಸಿಂಗಾಪುರದಲ್ಲಿ ಸೆ.24ರಿಂದ 28ರವರೆಗೆ ನಡೆಯುವ ಗೂಗಲ್ ಪ್ಲೇ ಪ್ರಾಯೋಜಿತ ‘ಇಂಡಿ ಗೇಮ್ಸ್ ಆ್ಯಕ್ಸಲರೇಟರ್ ಪ್ರೋಗ್ರಾಂ 2018’ ಸಮಾವೇಶದಲ್ಲಿ ಏಷ್ಯಾ ಪೆಸಿಫಿಕ್ ವ್ಯಾಪ್ತಿಯ ಸಲಹೆಗಾರರಾಗಿ ಉಡುಪಿಯ ‘99ಗೇಮ್ಸ್’ ಉಪಾಧ್ಯಕ್ಷೆ ಶಿಲ್ಪಾ ಭಟ್ ಆಯ್ಕೆಯಾಗಿದ್ದಾರೆ.

ಗೇಮ್ಸ್ ತಜ್ಞರ ಸಮಾವೇಶದಲ್ಲಿ ಶಿಲ್ಪಾ ಭಟ್ ಭಾರತವನ್ನು ಪ್ರತಿನಿಧಿಸುವ ಏಕೈಕ ಮಹಿಳೆಯಾಗಿದ್ದು, ಗೇಮ್ಸ್ ಬೆಳವಣಿಗೆಗೆ, ವಿನ್ಯಾಸ ಮೊದಲಾದ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಈ ಶಿಬಿರದಲ್ಲಿ ಭಾರತ, ಇಂಡೋನೇಷ್ಯಾ, ಮಲೇಷ್ಯಾ, ಪಾಕಿಸ್ತಾನ, ಫಿಲಿಪೈನ್ಸ್, ಸಿಂಗಾಪುರ, ಥಾಯ್ಲೆಂಡ್, ವಿಯೆಟ್ನಾಂ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಎಲ್ಲ ಕಂಪನಿಗಳಿಗೆ ಆಂಡ್ರಾಯ್ಡಾ ವೇದಿಕೆಯಲ್ಲಿ ಕುಶಲತೆ ಪ್ರದರ್ಶಿಸಲು ಈ ಶಿಬಿರ ಮಹತ್ವದ್ದಾಗಿದೆ.

ಶಿಲ್ಪಾ ಅವರು ಗೇಮ್ ಡಿಸೈನ್, ಗೇಮ್ ಡೆವಲಪ್ಮೆಂಟ್ ಹಾಗೂ ಅನಾಲಿಸಿಸ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಗೇಮಿಂಗ್ ಕ್ಷೇತ್ರದಲ್ಲಿ 16 ವರ್ಷ ಅನುಭವ ಹೊಂದಿದ್ದಾರೆ.