VIDEO| ಯಕ್ಷಗಾನ ನೃತ್ಯ ಮಾಡಿ ಎಲ್ಲರ ಹೃದಯ ಕದ್ದ ಕಲಾವಿದೆ: ‘ಯಾರಿವಳು’ ಎಂಬ ನೆಟ್ಟಿಗರ ಪ್ರಶ್ನೆಗೆ ಉತ್ತರ ಇಲ್ಲಿದೆ…

ಉಡುಪಿ: ಬಡಗುತಿಟ್ಟಿನ ಅಗ್ರಗಣ್ಯ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ಹಾಡಿರುವ ಯಾರೆ ನೀನು ಭುವನ ಮೋಹಿನಿ ಎಂಬ ಹಾಡಿಗೆ ಮೆಹಂದಿ ಕಾರ್ಯಕ್ರಮದಲ್ಲಿ ಕಡೆಕಾರಿನ ಯುವ ಕಲಾವಿದೆ ಚೈತ್ರಾ ಶೆಟ್ಟಿ ಹಾಕಿದ ಭರ್ಜರಿ ಸ್ಟೆಪ್ ಯಕ್ಷಗಾನ ಪ್ರೇಮಿಗಳ ಮನಸೂರೆಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಎಸ್ಸಿ ನರ್ಸಿಂಗ್ ಪದವಿ ಪಡೆದಿರುವ ಚೈತ್ರಾ ಅವರು ಮೇ 15ರಂದು ಬುಧವಾರ ಕಟಪಾಡಿ ಸಮೀಪದ ಕುರ್ಕಾಲಿನ ಮನೆಯಲ್ಲಿ ಮದುವೆಗೆ ಮುನ್ನ ನಡೆಯುವ ಮೆಹಂದಿ ಶಾಸ್ತ್ರದಲ್ಲಿ ಸಂಬಂಧಿಕರ ಒತ್ತಾಯಕ್ಕೆ ಮಣಿದು ಯಕ್ಷಗಾನದ ಹೆಜ್ಜೆ ಹಾಕಿದ್ದು, ಇದೀಗ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಚೈತ್ರಾ ಅವರು 7ನೇ ತರಗತಿಯಿಂದಲೇ ಯಕ್ಷಗಾನದ ಆಸಕ್ತಿ ಹೊಂದಿದ್ದು, ಯಕ್ಷಗುರು ರಾಜೀವ್ ತೋನ್ಸೆ ಅವರಲ್ಲಿ ಯಕ್ಷಗಾನವನ್ನು ಅಭ್ಯಾಸ ಮಾಡಿದ್ದಾರೆ.

ಅನೇಕ ಸಂಘ ಸಂಸ್ಥೆಗಳ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಆದರೆ ಸಾಂಪ್ರದಾಯಿಕ ವೇಷ ಭೂಷಣವಿಲ್ಲದೆ ಮನೆಯಂಗಳದಲ್ಲಿ ನೀಡಿದ ಯಕ್ಷಗಾನ ನಾಟ್ಯವನ್ನು ಸಾಮಾಜಿಕ ತಾಣದಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದು, ನೂರಾರು ಮಂದಿ ಶೇರ್ ಮಾಡಿ ಯಾರಿವಳು ಕಲಾವಿದೆ ಎಂದು ಕುತೂಹಲದಿಂದ ಪ್ರಶ್ನಿಸುತ್ತಿದ್ದಾರೆ.

25 Replies to “VIDEO| ಯಕ್ಷಗಾನ ನೃತ್ಯ ಮಾಡಿ ಎಲ್ಲರ ಹೃದಯ ಕದ್ದ ಕಲಾವಿದೆ: ‘ಯಾರಿವಳು’ ಎಂಬ ನೆಟ್ಟಿಗರ ಪ್ರಶ್ನೆಗೆ ಉತ್ತರ ಇಲ್ಲಿದೆ…”

  1. Very happy to know that girls and women are performing yakshagana much better than any other artists,very nice,keep it up.

  2. It is always a pleasure to know the entry of ‘one more new artist’ of Yakshgana. Ms. Chaitra Shetty, with her academic background and excellent talent will attract admiration of numerous fans of her. good luck Chaitra.

  3. Marvellous, superb keep it up we should preserve our heritage and this girl would bring awareness about our culture to others watching this…. 👏👏

  4. ಜನಪ್ರಿಯವಾದ ಅಪ್ರತಿಮ ಹಾಡುಗಾರಿಕೆ
    ಯುವ ಕಲಾವಿದೆ ಚೈತ್ರಾರವರ ಅದ್ಭುತ ಅಭಿನಯ

  5. wav, fantastic .what a great dance it is, really done good dance Without make up and costumes. I like it, GOD BLESS YOU EVER AND GIVE GOOD FUTURE

Leave a Reply

Your email address will not be published. Required fields are marked *