More

  ಈಜಲು ತೆರಳಿದ್ದ ಉಪನ್ಯಾಸಕ, ವಿದ್ಯಾರ್ಥಿ ನೀರುಪಾಲು

  ಸಿದ್ದಾಪುರ: ಕಂದಾವರ ಗ್ರಾಮದ ಮದಗಕ್ಕೆ ಸೋಮವಾರ ಸಾಯಂಕಾಲ ಈಜಲು ತೆರಳಿದ್ದ ಶಂಕರನಾರಾಯಣ ಮದರ್ ಥೆರೆಸಾ ಕಾಲೇಜಿನ ಉಪನ್ಯಾಸಕ ಹಾಗೂ ವಿದ್ಯಾರ್ಥಿ ನೀರುಪಾಲಾಗಿದ್ದಾರೆ.

  ಉಪನ್ಯಾಸಕ ರಾಜೇಂದ್ರ ಶೆಟ್ಟಿಗಾರ(28), ಶಂಕರನಾರಾಯಣ ಹೈಸ್ಕೂಲ್ ವಿದ್ಯಾರ್ಥಿ ಭರತ್ ಶೆಟ್ಟಿಗಾರ(15) ಮೃತರು. ಮದುವೆ ಸಮಾರಂಭವೊಂದಕ್ಕೆ ಬಂದಿದ್ದ 6 ಮಂದಿ ಉಳ್ಳೂರು-ಕಂದಾವರದ ಬೊಬ್ಬರ್ಯ ಕೊಡ್ಲು ಮದಗಕ್ಕೆ ಈಜಲು ತೆರಳಿದ್ದರು. ಸುಮಾರು 10 ಅಡಿ ನೀರಿರುವ ಮದಗದಲ್ಲಿ ಮೂವರು ಆಯತಪ್ಪಿ ಮುಳುಗಿದ್ದು, ರಾಜೇಂದ್ರ ಅವರು ಈಜು ಬಾರದಿದ್ದರೂ ಇಬ್ಬರನ್ನು ಮೇಲೆತ್ತಿದ್ದಾರೆ. ಭರತ್ ನೀರಿನ ಆಳಕ್ಕೆ ತೆರಳಿದ್ದು, ರಕ್ಷಣೆ ಸಂದರ್ಭ ರಾಜೇಂದ್ರ ಅವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

  ಬಹುಮುಖ ಪ್ರತಿಭಾವಂತ ರಾಜೇಂದ್ರ ಮಂಗಳೂರಿನ ಕಾಲೇಜೊಂದರಲ್ಲಿ ಸೇವೆ ಸಲ್ಲಿಸಿ, ಇತ್ತೀಚೆಗೆ ಶಂಕರನಾರಾಯಣ ಕಾಲೇಜಿಗೆ ಸೇರಿದ್ದರು. ಅಗ್ನಿ ಶಾಮಕ ದಳದವರು ಆಗಮಿಸಿ ಇಬ್ಬರ ಶವವನ್ನು ಮೇಲಕ್ಕೆತ್ತಿದ್ದಾರೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  See also  ಬೆಳೆಗೆ ಒದಗಿಸಿ ವೈಜ್ಞಾನಿಕ ಬೆಲೆ; ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತಿಕ್ ಒತ್ತಾಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts