ಶಿರೂರು ಶ್ರೀಗಳದ್ದು ಸಹಜ ಸಾವು

Latest News

ವೈದ್ಯರಿಂದ ಮಾತೃಹೃದಯದ ಸೇವೆ

ಬೆಳ್ತಂಗಡಿ: ವೈದ್ಯರು ಮಾನವೀಯತೆ ಹಾಗೂ ನಗುಮುಖದ ಮಾತೃ ಹೃದಯದೊಂದಿಗೆ ರೋಗಿಗಳ ಸೇವೆ ಮಾಡಬೇಕು. ರೋಗಿಗಳ ಸೇವೆಯೇ ದೇವರ ಸೇವೆಯಾಗಿದೆ ಎಂದು ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ...

ಮಾರುಕಟ್ಟೆ ಸಂಕೀರ್ಣಕ್ಕೆ ಚಾಲನೆ

ಭರತ್ ಶೆಟ್ಟಿಗಾರ್ ಮಂಗಳೂರುನಗರದ ಅತ್ಯಂತ ಹಳೇ ಮಾರುಕಟ್ಟೆಗಳಲ್ಲಿ ಒಂದಾಗಿರುವ ಕದ್ರಿ ಮಾರುಕಟ್ಟೆಯನ್ನು ಕೆಡವಿ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ತಯಾರಿಗಳು ಆರಂಭವಾಗಿವೆ. ಮೊದಲ...

ಯಲ್ಲಾಪುರ ಅಭ್ಯರ್ಥಿ ಶಿವರಾಮ ಹೆಬ್ಬಾರರ ಪತ್ನಿಯ ಆಸ್ತಿಯೇ ಹೆಚ್ಚು; ಬಿ.ಸಿ.ಪಾಟೀಲ್​ರ ಆಸ್ತಿ ಎಂಟು ಕೋಟಿ

ಹಾವೇರಿ: ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ ಬಿ.ಸಿ. ಪಾಟೀಲ ಅಫಿಡವಿಟ್​ನಲ್ಲಿ 8.58 ಕೋಟಿ ರೂ. ಮೌಲ್ಯದ ಆಸ್ತಿ ಘೊಷಿಸಿದ್ದಾರೆ. ಬಿ.ಎ. ಪದವೀಧರರಾಗಿರುವ...

ಪಿಂಕ್​ಬಾಲ್ ಅಹರ್ನಿಶಿ ಪರೀಕ್ಷೆ!

ಭಾರತ ತಂಡ ತನ್ನ 540ನೇ ಟೆಸ್ಟ್ ಪಂದ್ಯದಲ್ಲಿ ಹೊಸ ಮೈಲಿಗಲ್ಲು ನೆಡಲು ಮುಂದಾಗಿದೆ. ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಕೋಲ್ಕತದ ಈಡನ್ ಗಾರ್ಡನ್​ನಲ್ಲಿ ಶುಕ್ರವಾರ ಆರಂಭವಾಗಲಿರುವ 2ನೇ...

ನಾಳೆ ಹೈಕೋರ್ಟ್ ತೀರ್ಪು ನಿರೀಕ್ಷೆ

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳಗಳ ಏಲಂ ಕುರಿತ ಪ್ರಕರಣದ ವಿಚಾರಣೆ ಹೈಕೋರ್ಟ್‌ನಲ್ಲಿ ಸೋಮವಾರ ಪೂರ್ಣಗೊಂಡಿದ್ದು, ನ.20ರಂದು ಅಂತಿಮ ಆದೇಶ ಹೊರಬೀಳಲಿದೆ. ಈ ನಡುವೆ ನ.22ರಂದು...

| ಸುರೇಂದ್ರ ಎಸ್​ ವಾಗ್ಳೆ 

ಮಂಗಳೂರು:  ಉಡುಪಿ ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವಿಗೆ ಅನಾರೋಗ್ಯವೇ ಕಾರಣವಾಗಿದ್ದು, ಯಾವುದೇ ವಿಷಪ್ರಾಶನವಾಗಿಲ್ಲ ಎಂದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಿದೆ.

ಸ್ವಾಮೀಜಿ ಸಾವಿನ ಕುರಿತಂತೆ ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ (ಎಫ್​ಎಸ್​ಎಲ್) ವರದಿಗಳು ಪೊಲೀಸರ ಕೈಸೇರಿದ್ದು, ಅದನ್ನು ಅನುಸರಿಸಿ ಮಣಿಪಾಲ ಆಸ್ಪತ್ರೆ ಅಂತಿಮ ವರದಿ ಸಲ್ಲಿಸಿದೆ. ಸ್ವಾಮೀಜಿ ಲಿವರ್ (ಯಕೃತ್) ಸಿರೋಸಿಸ್ ಕಾಯಿಲೆ ಉಲ್ಬಣಿಸಿ ಸಾವನ್ನಪ್ಪಿದ್ದಾರೆ ಎಂದು ಅಂತಿಮ ಷರಾ ಬರೆಯಲಾಗಿದೆ. ಇದು ಎಲ್ಲ ಅನುಮಾನಗಳಿಗೆ ಅಂತ್ಯ ಹಾಡಲಿದೆ.

ಮರಣೋತ್ತರ ಪರೀಕ್ಷೆ ಬಂದಿದ್ದರೂ ಎಫ್​ಎಸ್​ಎಲ್ ವರದಿ ಬಳಿಕವಷ್ಟೆ ಅಂತಿಮ ತೀರ್ಮಾನ ಸಾಧ್ಯ ಎನ್ನುವುದು ಪೊಲೀಸರ ವಾದವಾಗಿತ್ತು. ವೈದ್ಯರು ಕೂಡ ಪ್ರಾಥಮಿಕ ವರದಿಯಲ್ಲಿ ಅದನ್ನೇ ಪ್ರತಿಪಾದಿಸಿದ್ದರು. ಎಫ್ ಎಸ್​ಎಲ್ ವರದಿ ಕಳೆದ ವಾರ ಬಂದಿದ್ದು, ಎರಡೂ ವರದಿಗಳನ್ನು ತಾಳೆಹಾಕಿರುವ ವೈದ್ಯರು ಸ್ವಾಮೀಜಿ ಲಿವರ್ ಸಿರೋಸಿಸ್ ಕಾಯಿಲೆಯಿಂದ ಮೃತರಾಗಿರುವುದನ್ನು ದೃಢಪಡಿಸಿದ್ದಾರೆ. ಎರಡೂ ವರದಿಗಳಲ್ಲಿ ಎಲ್ಲಿಯೂ ವಿಷ ಕುರಿತಂತೆ ಪ್ರಸ್ತಾಪವಾಗಿಲ್ಲ. ಅಂತಿಮ ವರದಿ ಬಳಿಕವೂ ಪೊಲೀಸರು ಮತ್ತೊಮ್ಮೆ ಕೆಎಂಸಿ ಆಸ್ಪತ್ರೆಯಿಂದ ಕೆಲ ಸ್ಪಷ್ಟನೆ ಬಯಸಿ ಪ್ರಶ್ನಾವಳಿ ರವಾನಿಸಿದ್ದಾರೆ.

ಬುಧವಾರ ಅಥವಾ ಗುರುವಾರ ಆಸ್ಪತ್ರೆಯಿಂದ ಉತ್ತರವನ್ನು ಪೊಲೀಸರು ನಿರೀಕ್ಷೆ ಮಾಡಿದ್ದು, ಈ ವಾರದಲ್ಲಿ ಪ್ರಕರಣಕ್ಕೆ ಅಂತಿಮ ತೆರೆ ಎಳೆಯುವ ಸಾಧ್ಯತೆಗಳಿವೆ.

ಸಾಕ್ಷ್ಯಕ್ಕಾಗಿ 82 ವಸ್ತುಗಳು: ತನಿಖೆ‘ ಸಂದರ್ಭದಲ್ಲಿ ಪೊಲೀಸರು ಸಾಕ್ಷ್ಯಕ್ಕಾಗಿ ಮೂಲ ಮಠದಲ್ಲಿನ 82 ವಸ್ತುಗಳನ್ನು ವಶ ಪಡಿಸಿಕೊಂಡಿದ್ದರು. ಅದರಲ್ಲಿ ಬಾಟಲಿಗಳೇ ಹೆಚ್ಚು. ಬೇರೆ ಬೇರೆ ಬ್ರಾಂಡ್​ಗಳ ಜ್ಯೂಸ್ ಗಳು, ಔಷಧಗಳು, ಶಕ್ತಿವರ್ಧಕಗಳು ಸೇರಿವೆ. ಇದ್ಯಾವುದರಲ್ಲೂ ಒಂದು ಹನಿ ವಿಷದ ಅಂಶ ಪತ್ತೆಯಾಗಿಲ್ಲ.

ಬಾಟಲಿ ಮಾರಿ 7,000 ರೂ.: ಸ್ವಾಮೀಜಿ ಅಸ್ವಸ್ಥರಾಗಿದ್ದಾಗ ಶಿರೂರು ಮೂಲಮಠದಲ್ಲಿ ಆಪ್ತರೆಲ್ಲ ಸೇರಿ ಅಲ್ಲಲ್ಲಿ ಬಿದ್ದಿದ್ದ ಬಾಟಲಿಗಳನ್ನು ಸೇರಿಸಿ ಮಾರಾಟ ಮಾಡಿದ್ದಾರೆ. ಗುಜರಿ ಅಂಗಡಿಯಲ್ಲಿ ಅದಕ್ಕೆ 7,000 ರೂ. ದೊರೆತಿದೆ ಎನ್ನುವ ಅಂಶವೂ ತನಿಖೆ ವೇಳೆ ಬಹಿರಂಗವಾಗಿದೆ.

ಸಿಸಿ ಕ್ಯಾಮರಾ ದಾಖಲೆ ನಾಶ ಉದ್ದೇಶ ಬೇರೆ: ಶಿರೂರು ಮೂಲ ಮಠ ಹಾಗೂ ಉಡುಪಿ ರಥಬೀದಿಯ ಮಠದಲ್ಲಿನ ಸಿಸಿ ಕ್ಯಾಮರಾಗಳನ್ನು ಸ್ವಾಮೀಜಿ ಆಪ್ತರೇ ತೆಗೆದು, ಸ್ವರ್ಣಾ ನದಿಗೆ ಎಸೆದಿದ್ದರು. ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸುವ ಅಥವಾ ಸಾಕ್ಷ್ಯ ನಾಶಪಡಿಸುವ ಉದ್ದೇಶ ಅವರಿಗಿರಲಿಲ್ಲ. ಸ್ವಾಮೀಜಿ ಸಾವಿನ ನಂತರ ಅಲ್ಲಿನ ವ್ಯವಹಾರಗಳು ಬಾಹ್ಯ ಜಗತ್ತಿಗೆ ತಿಳಿಯಬಾರದೆನ್ನುವ ಉದ್ದೇಶ ಈ ಕೃತ್ಯದ ಹಿಂದಿತ್ತು. ಎರಡು ಹಾರ್ಡ್ ಡಿಸ್ಕ್​ಗಳನ್ನು ನದಿಯಿಂದ ಹೊರತೆಗೆದು ತಜ್ಞರು ಪರಿಶೀಲನೆ ಮಾಡಿದರೂ, ಕೆಲವು ಅಸ್ಪಷ್ಟ ದೃಶ್ಯಗಳು ಮಾತ್ರ ಲಭಿಸಿವೆ. ಅವೆಲ್ಲವೂ ತನಿಖೆಯಲ್ಲಿ ಮೊದಲೇ ಪ್ರಸ್ತಾಪಿತ ವಿಚಾರಗಳೇ ಆಗಿದ್ದವು. ಅವು ಪೊಲೀಸರಿಗೆ ತನಿಖೆಗೆ ಸಹಕಾರಿಯಂತೂ ಆಗಿಲ್ಲ.

ಮಠದ ಸೊತ್ತುಗಳು: ಮಠದ ದಾಖಲೆ ಯಲ್ಲಿನ ಸೊತ್ತುಗಳು ಸುರಕ್ಷಿತವಾಗಿವೆ. ದಾಖಲೆಯಾಗದ ಸೊತ್ತುಗಳ ಬಗ್ಗೆ ಪೊಲೀಸರಿಗೂ ಮಾಹಿತಿಯಿಲ್ಲ. ಆದರೆ ಸ್ವಾಮೀಜಿ ಅಸ್ವಸ್ಥರಾಗುವ ಒಂದು ದಿನ ಮುನ್ನ ವನಮಹೋತ್ಸವ ಕಾರ್ಯಕ್ರಮ ನಡೆದಿದೆ. ಆ ದಿನ ಸ್ವಾಮೀಜಿ ತೀರಾ ಆಪ್ತರೊಬ್ಬರಿಗೆ ಸುಮಾರು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿಸಿ ಕೊಡುಗೆಯಾಗಿ ನೀಡಿದ್ದಾರೆ ಎನ್ನುವ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ವೈದ್ಯರಿಗೆ ಪ್ರಶ್ನೆ: ಜುಲೈ 19ರಂದು ಸ್ವಾಮೀಜಿ ಸಾವನ್ನಪ್ಪಿದ ಸಂದರ್ಭದಲ್ಲಿ ಚಿಕಿತ್ಸೆ ನೀಡಿದ್ದ ಕೆಎಂಸಿ ಆಸ್ಪತ್ರೆಯ ವೈದ್ಯರು ಮಾಧ್ಯಮಗಳೊಂದಿಗೆ ಮಾತನಾಡುತ್ತ, ಸ್ವಾಮೀಜಿ ದೇಹದಲ್ಲಿ ವಿಷ ಕಂಡುಬಂದಿದ್ದು, ವಿಷಪ್ರಾಶನದಿಂದ ಸಾವನ್ನಪ್ಪಿರುವ ಸಾಧ್ಯತೆಗಳಿವೆ ಎಂದಿದ್ದರು. ಆ ಬಳಿಕವಷ್ಟೇ ಮರಣೋತ್ತರ ಪರೀಕ್ಷೆಗೆ ಆದೇಶಿಸಲಾಗಿತ್ತು. ಈಗ ಎರಡು ವರದಿಗಳಲ್ಲೂ ವಿಷದ ಅಂಶವಿಲ್ಲದಿರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಪೊಲೀಸರು ಆಸ್ಪತ್ರೆಯಿಂದ ಸ್ಪಷ್ಟನೆ ಬಯಸಿದ್ದಾರೆ. ವೈದ್ಯರು ವಿಷಪ್ರಾಶನ ಸಾಧ್ಯತೆಗಳಿವೆ ಎಂದು ಹೇಳಿರುವುದು ಯಾವ ಆಧಾರದ ಮೇಲೆ? ಹಾಗೆ ಹೇಳಲು ಪೂರಕವಾಗಿರುವ ಅಂಶಗಳು ಯಾವುದು ಮುಂತಾದ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಆಸ್ಪತ್ರೆಯ ಚಿಕಿತ್ಸೆ

ಸ್ವಾಮೀಜಿ ಆರಂಭದಲ್ಲಿ ದಾಖಲಾದ ಉಡುಪಿಯ ಆಸ್ಪತ್ರೆ, ನಂತರ ಚಿಕಿತ್ಸೆ ಪಡೆದ ಮಣಿಪಾಲದ ಆಸ್ಪತ್ರೆಯಲ್ಲಿ ಲಿವರ್ ಸಮಸ್ಯೆಗೆ ಮಾತ್ರ ಔಷಧ ಗಳನ್ನು ನೀಡಲಾಗಿದೆ. ಎಲ್ಲೂ ವಿಷ ಸೇವನೆಗೆ ಚಿಕಿತ್ಸೆ ನೀಡಿರುವುದು ಪೊಲೀಸರ ತನಿಖೆಯಲ್ಲಿ ಕಂಡು ಬಂದಿಲ್ಲ.

ಲಿವರ್ ಸಿರೋಸಿಸ್?

ಅತಿಯಾದ ಮದ್ಯಸೇವನೆ ಹಾಗೂ ಕ್ರಮಬದಟಛಿವಲ್ಲದ ಆಹಾರ ಪದಟಛಿತಿ ಲಿವರ್ ಮೇಲೆ ಪರಿಣಾಮ ಬೀರುತ್ತದೆ. ಇಲ್ಲೂ ಇದೇ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎನ್ನುತ್ತಾರೆ ತಜ್ಞ ವೈದ್ಯರು.

ಗಾಂಜಾ ಬೆಳೆಗೆ ಬಳಸಿದ್ದ ಕ್ರಿಮಿನಾಶಕ ಹೊಟ್ಟೆ ಸೇರಿತೇ?

ಸ್ವಾಮೀಜಿ ಗಾಂಜಾ ಸೇವಿಸುತ್ತಿದ್ದರು ಎಂಬ ಅಂಶ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸ್ವಾಮೀಜಿಯ ತೀರಾ ಆಪ್ತರೊಬ್ಬರು ಈ ಅಂಶವನ್ನು ತಿಳಿಸಿದ್ದು, ಕೊಲ್ಲೂರು ಆಸುಪಾಸಿನಿಂದ ಗಾಂಜಾ ತರಿಸಿಕೊಳ್ಳಲಾಗುತ್ತಿತ್ತು. ಒಂದು ಮುಷ್ಠಿಯಷ್ಟು ಗಾಂಜಾವನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಆ ನೀರನ್ನು ಸ್ವಾಮೀಜಿ ಸೇವಿಸುತ್ತಿದ್ದರು ಎಂದು ಬಾಯಿಬಿಟ್ಟಿದ್ದಾರೆ. ಗಾಂಜಾ ಬೆಳೆಗೆ ಸಿಂಪಡಿಸಿದ್ದ ಕ್ರಿಮಿನಾಶಕ ಈ ಮೂಲಕ ಸ್ವಾಮೀಜಿ ಹೊಟ್ಟೆ ಸೇರಿರುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ.

ಸಿಕ್ಕ ವಿಷದ ಅಂಶ ಯಾವುದು?

ಪ್ರಕರಣದಲ್ಲಿ ಆಸ್ಪತ್ರೆ ವೈದ್ಯರು ಅತಿ ಗಣ್ಯರು ಮೃತರಾದ ಸಂದರ್ಭದಲ್ಲಿ ಮಾಡುವ ಕೆಲ ಅತ್ಯಂತ ಸೂಕ್ಷ್ಮವಾದ ಪರೀಕ್ಷೆಗಳನ್ನು ಮಾಡಿದ್ದಾರೆ. ಆಗ ಹೊಟ್ಟೆಯಲ್ಲಿ ‘ಆರ್ಗ್ಯಾನೋ ಫಾಸ್ಪರಸ್’ ಎಂಬ ವಿಷದ ಅಂಶ ಪತ್ತೆಯಾಗಿದೆ. ಅದು ಕೂಡ ತೀರಾ ಕಡಿಮೆ ಪ್ರಮಾಣದಲ್ಲಿ. ಆ ಪ್ರಮಾಣದ ವಿಷದಿಂದ ಯಾವುದೇ ವ್ಯಕ್ತಿ ಸಾಯುವುದಿಲ್ಲ. ಇದರ ಖಚಿತತೆಗಾಗಿ ಪೊಲೀಸರು ರಾಜ್ಯ- ಹೊರ ರಾಜ್ಯಗಳ ಪ್ರತಿಷ್ಠಿತ ಆಸ್ಪತ್ರೆಗಳ ತಜ್ಞರ ಅಭಿಪ್ರಾಯವನ್ನೂ ಪಡೆದಿದ್ದಾರೆ.

80 ಮಂದಿ ವಿಚಾರಣೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬ ದವರು, ಮಿತ್ರರು, ಸಿಬ್ಬಂದಿ, ಆರ್ಥಿಕ ವ್ಯವಹಾರವಿದ್ದವರು, ಮದ್ಯ ತಂದು ಕೊಡುತ್ತಿದ್ದ ವ್ಯಕ್ತಿ ಸೇರಿ 80ಕ್ಕೂ ಹೆಚ್ಚು ಮಂದಿ ಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

- Advertisement -

Stay connected

278,596FansLike
570FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO: ಗೋಕಾಕ್​ ಕ್ಷೇತ್ರದಲ್ಲಿ...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...

ಕೇಂದ್ರ ಪರಿಸರ ಸಚಿವ...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...

ಜಗತ್ತಿನ ಮೊದಲ ಫೋಲ್ಡೆಬಲ್​...

ಬೀಜಿಂಗ್​: ಕಂಪ್ಯೂಟರ್ ಜಗತ್ತಿನಲ್ಲಿ ನಿತ್ಯವೂ ಹೊಸ ಹೊಸ ಉತ್ಪನ್ನಗಳು ಗ್ರಾಹಕರಿಗೆ ಪರಿಚಯಿಸಲ್ಪಡುತ್ತಲೇ ಇವೆ. ವರ್ಷದ ಹಿಂದೆ ಖರೀದಿಸಿದ ಉತ್ಪನ್ನ ಇಂದಿಗೆ ಔಟ್​ಡೇಟೆಡ್​ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆಯ ವೇಗ....

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...