ಸೌದಿಯಲ್ಲಿ ಉಡುಪಿ ಮೂಲದ ನರ್ಸ್‌ ಅನುಮಾನಾಸ್ಪದ ಸಾವು!

ಉಡುಪಿ: ಸೌದಿಯ ಆರೋಗ್ಯ ಇಲಾಖೆ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಶಿರ್ವ ಮೂಲದ ಮಹಿಳೆ ಸೌದಿಯಲ್ಲಿ ಮೃತಪಟ್ಟಿದ್ದು, ಸಾವಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.

ಕಾಪು ತಾಲೂಕಿನ ಕುತ್ಯಾರು ಗ್ರಾಮದ ಹೆಝಲ್ ಜೋತ್ಸ್ನಾ(28) ಮೃತ ನರ್ಸ್‌. ಮಹಿಳೆ

ಕಳೆದ ಆರು ವರ್ಷಗಳಿಂದ ಸೌದಿಯಲ್ಲಿ ನರ್ಸ್ ಆಗಿದ್ದ ಮಹಿಳೆ, ಜು. 19 ರಂದು ಪತಿ ಅಶ್ವಿನ್ ಮಥಾಯಿಸ್‌ರೊಂದಿಗೆ ಮಾತನಾಡಿದ್ದೇ ಕೊನೆಯಾಗಿತ್ತು. ಜು. 21 ರಂದು ಸಹೋದ್ಯೋಗಿ ಮೂಲಕ ಮೃತಪಟ್ಟಿರುವ ಕುರಿತು ಮಾಹಿತಿ ಬಂದಿತ್ತು. ಆದರೆ, ಸಾವಿಗೆ ನಿಖರ ಮಾಹಿತಿಯನ್ನು ಕುಟುಂಬದವರಿಗೂ ತಿಳಿಸಿಲ್ಲ.

ವಿದೇಶಾಂಗ ಸಚಿವೆಯನ್ನು ಈಗಾಗಲೇ ನರ್ಸ್ ಪತಿ ಸಂಪರ್ಕಿಸಿದ್ದು, ಜನಪ್ರತಿನಿಧಿಗಳ ನೆರವಿನಿಂದ ಶವವನ್ನು ಊರಿಗೆ ತರಿಸಲು ಯತ್ನಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಉಡುಪಿ ಶಾಸಕ ರಘುಪತಿ ಭಟ್ ಅವರನ್ನು ಸಂಪರ್ಕಿಸಿದ್ದಾರೆ.