ಉಡುಪಿ ಕೃಷ್ಣಮಠದಲ್ಲಿ ಎಡೆ ಸ್ನಾನ, ಮಡೆ ಸ್ನಾನಕ್ಕೆ ವಿದಾಯ: ಪಲಿಮಾರು ಶ್ರೀ ಮಹತ್ವದ ನಿರ್ಧಾರ

ಉಡುಪಿ: ಕೃಷ್ಣಮಠದಲ್ಲಿ ಷಷ್ಠಿ ಆಚರಣೆಯಲ್ಲಿ ಎಡೆಸ್ನಾನ ಹಾಗೂ ಮಡೆಸ್ನಾನಕ್ಕೆ ಅವಕಾಶವಿಲ್ಲ ಎಂದು ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಈ ಕಾರಣಕ್ಕೆ ಇಂದು ನಡೆದ ಷಷ್ಠಿ ಪೂಜೆ ವೇಳೆ ಯಾರಿಗೂ ಎಡೆ, ಮಡೆ ಸ್ನಾನ ಮಾಡಲು ಅವಕಾಶವಿರಲಿಲ್ಲ.

ಷಷ್ಠಿ ಆಚರಣೆ ವೇಳೆ ಕೆಲವು ವರ್ಷಗಳ ಹಿಂದಿನಿಂದಲೂ ಎಡೆಸ್ನಾನ, ಮಡೆಸ್ನಾನ ನಡೆಯುತ್ತಿತ್ತು. ಆದರೆ, ಈ ಬಾರಿ ಅದೆರಡನ್ನೂ ರದ್ದುಗೊಳಿಸಿದ ಪಲಿಮಾರು ಶ್ರೀ, ಆಸಕ್ತ ಭಕ್ತರು ಉರುಳುಸೇವೆ ಮಾಡಬಹುದು ಎಂದು ಹೇಳಿದ್ದಾರೆ.

ಅನಗತ್ಯ ವಿವಾದ ಬೇಡವೆಂದು ಈ ನಿರ್ಧಾರಕ್ಕೆ ಬಂದಿದ್ದೇನೆ. ಎಡೆಸ್ನಾನದಿಂದಲೂ ಕೆಲವರಿಗೆ ಬೇಸರವಾಗಿದೆ. ತಿನ್ನುವ ಅನ್ನದ ಮೇಲೆ ಉರುಳು ಸೇವೆ ಮಾಡುವುದು ಕೆಲವರಿಗೆ ಇಷ್ಟವಿಲ್ಲ. ಕೃಷ್ಣಮಠದ ಭೋಜನಶಾಲೆಯಲ್ಲೇ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.