ಅಮೃತೇಶ್ವರಿ ದೇವಳಕ್ಕೆ ಉಮಾಶ್ರೀ ಭೇಟಿ

ಕೋಟ: ಪಂಚವರ್ಣ ಯುವಕ ಮಂಡಲ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವ ಸಲುವಾಗಿ ಕೋಟಕ್ಕೆ ಆಗಮಿಸಿದ ಮಾಜಿ ಸಚಿವೆ ಉಮಾಶ್ರೀ, ಶ್ರೀ ಅಮೃತೇಶ್ವರಿ ದೇವಳಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು.

ದೇವಳ ಅಧ್ಯಕ್ಷ ಆನಂದ್ ಸಿ.ಕುಂದರ್ ಅವರನ್ನು ಗೌರವಿಸಿದರು. ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ಅನಂತ ಸುಂದರ್ ಶೆಣೈ, ಸುಬ್ರಾಯ ಜೋಗಿ, ಅರ್ಚಕ ಪ್ರತಿನಿಧಿ ರೂಪೇಶ್ ಜೋಗಿ, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ರವೀಂದ್ರ ಕೋಟ, ಯುವಕ ಮಂಡಲ ಗೌರವಾಧ್ಯಕ್ಷ ವೆಂಕಟೇಶ್ ಪ್ರಭು, ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ದಿನೇಶ್ ಗಾಣಿಗ, ಅಮೃತ್ ಜೋಗಿ, ಸುರೇಶ್ ಗಿಳಿಯಾರು, ರವೀಂದ್ರ ಜೋಗಿ ಮತ್ತಿತರರು ಉಪಸ್ಥಿತರಿದ್ದರು.