ಯೋಗಾಭ್ಯಾಸದಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ

1 Min Read
UDP-21-3-BJPyoga
ಉಡುಪಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಯೋಗ ದಿನವನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಕೆ.ಉದಯಕುಮಾರ್​ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಶಿಲ್ಪಾ ಜಿ. ಸುವರ್ಣ, ದಿನಕರ ಬಾಬು, ದಿನೇಶ್​ ಅಮೀನ್​, ವಿಜಯಕುಮಾರ್​ ಉದ್ಯಾವರ, ಶಿವಕುಮಾರ್​ ಅಂಬಲಪಾಡಿ, ಗಿರೀಶ್​ ಅಂಚನ್​ ಇದ್ದರು.

ಶಾಸಕ ಯಶ್​ಪಾಲ್​ ಅನಿಸಿಕೆ | ಅಂತಾರಾಷ್ಟ್ರೀಯ ಯೋಗ ದಿನ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ನಮಗಾಗಿ ಮತ್ತು ಸಮಾಜಕ್ಕಾಗಿ ಯೋಗ ಎಂಬ ಘೋಷ ವಾಕ್ಯದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ. ಹೀಗಾಗಿ ಇದು ಒಂದು ದಿನಕ್ಕೆ ಸೀಮಿತವಾಗಿರದೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕಿದೆ. ಯೋಗಾಭ್ಯಾಸದಿಂದ ಸ್ವಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.

ಉಡುಪಿ ಜಿಲ್ಲಾ ಬಿಜೆಪಿ ಆಶ್ರಯದಲ್ಲಿ ಬಿಜೆಪಿ ಉಡುಪಿ ನಗರ ಮತ್ತು ಗ್ರಾಮಾಂತರ ಮಂಡಲಗಳ ಸಹಕಾರದಲ್ಲಿ ಉಡುಪಿಯ ಶೇಷಶಯನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನ ಉದ್ಘಾಟಿಸಿ ಮಾತನಾಡಿದರು.

ಐತಿಹಾಸಿಕ ದಾಖಲೆ

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯಲ್ಲಿ ಯೋಗದ ಮಹತ್ವವನ್ನು ಪ್ರಸ್ತಾವಿಸಿದ್ದರು. ಅದರ ಫಲವಾಗಿ ಭಾರತವೂ ಸೇರಿದಂತೆ ನೂರಾರು ದೇಶಗಳು ಕಳೆದ 10 ವರ್ಷದಿಂದ ಜೂನ್​ 21ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿರುವುದು ಐತಿಹಾಸಿಕ ದಾಖಲೆಯಾಗಿದೆ. ಉತ್ತಮ ಜೀವನಕ್ಕೆ ಆರೋಗ್ಯ ಬಹುಮುಖ್ಯ. ಈ ನಿಟ್ಟಿನಲ್ಲಿ ಶಿಸ್ತುಬದ್ಧ ಜೀವನ ಕ್ರಮದ ಜತೆಗೆ ಯೋಗಾಭ್ಯಾಸದ ಕೊಡುಗೆ ಮಹತ್ವಪೂರ್ಣವಾಗಿದೆ ಎಂದರು.

ಪತಂಜಲಿ ಯೋಗ ಶಿಕ್ಷಣ ಕೇಂದ್ರ ಉಡುಪಿ ಸಮಿತಿಯ ಯೋಗ ಶಿಕ್ಷಕ ನಾಗರಾಜ ಶೇಟ್​ ಯೋಗದ ಕುರಿತು ಮಾಹಿತಿ ನೀಡಿ, ಯೋಗ ತರಗತಿ ನಡೆಸಿಕೊಟ್ಟರು. ಯೋಗ ಶಿಕ್ಷಕಿ ಅನಿತಾ ಸುವರ್ಣ ಸಹಕರಿಸಿದರು.

ಜಿಲ್ಲಾ ಬಿಜೆಪಿ ಪ್ರಮುಖರಾದ ಕೆ.ಉದಯಕುಮಾರ್​ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಶಿಲ್ಪಾ ಜಿ. ಸುವರ್ಣ, ದಿನಕರ ಬಾಬು, ದಿನೇಶ್​ ಅಮೀನ್​, ವಿಜಯಕುಮಾರ್​ ಉದ್ಯಾವರ, ಶಿವಕುಮಾರ್​ ಅಂಬಲಪಾಡಿ, ಗಿರೀಶ್​ ಅಂಚನ್​, ವಿಜಯ ಕೊಡವೂರು, ಚಂದ್ರ ಪಂಚವಟಿ, ಜಗದೀಶ್​ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಶೆಟ್ಟಿ, ಸಚಿನ್​ ಪೂಜಾರಿ, ನಳಿನಿ ಪಿ. ರಾವ್​, ಶ್ರೀಕಾಂತ್​ ಕಾಮತ್​, ಅಶ್ವಿನಿ ಆರ್​. ಶೆಟ್ಟಿ, ರಮ್ಯಾ ರಾವ್​, ಆಸಿಫ್​ ಕಟಪಾಡಿ, ಯೋಗ ಶಿಕ್ಷಕಿ ಶೋಭಾ ಶೆಟ್ಟಿ, ಚೆನ್ನಮ್ಮ ಉಡುಪ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

See also  ಸೂರ್ಯ ನೆತ್ತಿ ಮೇಲೆ ಇದ್ದಾಗಲೇ ನಡೆಯಿತು ದರೋಡೆ..!

ಪದಾಧಿಕಾರಿಗಳು, ಕಾರ್ಯಕರ್ತರ ಯೋಗಾಸನ

UDP-21-5A-Yogasana
ಯೋಗ ಶಿಕ್ಷಕಿ ಅನಿತಾ ಸುವರ್ಣ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಯೋಗಾಸನ ಮಾಡಿದರು.
Share This Article